1993: ಓಸ್ಲೋ ಒಪ್ಪಂದ
2000 ಜುಲೈ: ಕ್ಯಾಂಪ್-ಡೇವಿಡ್ ಒಪ್ಪಂದ
2001 ಜನವರಿ: ತಾಬಾ ಸಭೆ
2002 ಸೆ. 7: ಶಾಂತಿಗಾಗಿ ನೀಲನಕ್ಷೆ
2002 ಮಾರ್ಚ್: ಬೈರೂತ್ ಶಾಂತಿ ಸಭೆ
2007 : ರಿಯಾದ್ ಶಾಂತಿ ಸಭೆ
1948ರ ಬಳಿಕ ಇಂಥ ಹತ್ತು-ಹಲವು ಸಭೆ, ಕರಾರುಗಳು ನಡೆದಿವೆ. ಅಮೇರಿಕ, ರಶ್ಯ ಯುರೋಪಿಯನ್ ಯೂನಿಯನ್, ಸೌದಿ ಅರೇಬಿಯಾ, ಈಜಿಪ್ಟ್, ವಿಶ್ವಸಂಸ್ಥೆಗಳು ಮಧ್ಯಸ್ಥಿಕೆಯನ್ನೂ ವಹಿಸಿವೆ. ಯಾಸರ್ ಅರಾಫತ್, ಯಹೂದ್ ಬರಾಕ್, ಇಝಾಕ್ ರಬಿನ್, ರಾಜಕುಮಾರ ಅಬ್ದುಲ್ಲಾ, ಏರಿಯಲ್ ಶರೋನ್ ಮುಂತಾದವರು ಫೆಲೆಸ್ತೀನ್ ಸಮಸ್ಯೆಯ ಸುತ್ತ ಚರ್ಚೆಯನ್ನೂ ನಡೆಸಿದ್ದಾರೆ. 1967ರಲ್ಲಿ ಇಸ್ರೇಲ್ ವಶಪಡಿಸಿಕೊಂಡ ಅರಬ್ ಭೂಮಿಯಲ್ಲಿ ಯಹೂದಿಯರಿಗಾಗಿ ವಸತಿ ನಿರ್ಮಿಸುವುದನ್ನು ಯುರೋಪಿಯನ್ ಯೂನಿಯನ್ ಈ ಹಿಂದೆಯೇ ಖಂಡಿಸಿದೆ. 2011ರಲ್ಲಿ ವಿಶ್ವಸಂಸ್ಥೆಯೂ ವಿರೋಧಿಸಿತು. ಇದು ಶಾಂತಿ ಮಾತುಕತೆ ಮತ್ತು ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿ ಅಡ್ಡಿಯಾಗುತ್ತಿದೆ ಎಂದಿತು. ಇದನ್ನು ಕಡೆಗಣಿಸಿ 2012ರಲ್ಲಿ ಇಸ್ರೇಲ್ ಮತ್ತೆ ವಸತಿ ನಿರ್ಮಾಣಕ್ಕೆ ಮುಂದಾದಾಗ ಅಂತಾರಾಷ್ಟ್ರೀಯ ಸಮುದಾಯವೇ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಇಸ್ರೇಲ್‍ನ ಕ್ರಮವು ಈ ಹಿಂದಿನ ರೋಡ್‍ಮ್ಯಾಪ್‍ಗೆ ವಿರುದ್ಧ ಎಂದು ಬ್ರಿಟನ್ ಪ್ರತಿಭಟಿಸಿತು. ಆದರೂ ಇಸ್ರೇಲನ್ನು ನಿಯಂತ್ರಿಸಲು ಈ ಯಾವ ರಾಷ್ಟ್ರಗಳಿಗೂ ಸಾಧ್ಯವಾಗುತ್ತಿಲ್ಲ ಅಂದರೆ ಏನೆನ್ನಬೇಕು? ಪ್ರತ್ಯೇಕ ಇಸ್ರೇಲ್‍ನಂತೆ ಪ್ರತ್ಯೇಕ ಫೆಲೆಸ್ತೀನ್ ರಾಷ್ಟ್ರಕ್ಕೂ UNSCOP ಸಮಿತಿಯು ಶಿಫಾರಸ್ಸು ಮಾಡಿದ್ದನ್ನು ವಿಶ್ವಸಂಸ್ಥೆಯೇಕೆ ಈ ವರೆಗೂ ಜಾರಿಗೊಳಿಸಿಲ್ಲ? ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದ ನೆರವಿನೊಂದಿಗೆ ಫೆಲೆಸ್ತೀನ್‍ನಲ್ಲಿ ಮಕ್ಕಳ ಮ್ಯಾಗಸಿನ್ ಪ್ರಕಟವಾಗುತ್ತಿತ್ತು. ಫೆಲೆಸ್ತೀನ್ ಅಥಾರಿಟಿಯ (PLO) ಬೆಂಬಲವೂ ಅದಕ್ಕಿತ್ತು. ಒಮ್ಮೆ ಅದರಲ್ಲಿ ಹಿಟ್ಲರ್‍ನನ್ನು ಮೆಚ್ಚಿಕೊಂಡು ಲೇಖನವೊಂದು ಪ್ರಕಟವಾಯಿತು. ತಕ್ಷಣ ಯುನೆಸ್ಕೋ ಎಷ್ಟು ಸಿಟ್ಟಾಯಿತೆಂದರೆ ತನ್ನ ನೆರವನ್ನೇ ರದ್ದುಪಡಿಸಿತ್ತು. ಕೇವಲ ಲೇಖನವೊಂದಕ್ಕೆ ಈ ಪರಿ ಪ್ರತಿಕ್ರಿಯೆಯನ್ನು ನೀಡಬಲ್ಲಷ್ಟು ಸೂಕ್ಷ್ಮತೆ ಮತ್ತು ಎಚ್ಚರಿಕೆಯುಳ್ಳ ವಿಶ್ವಸಂಸ್ಥೆಗೆ, ಇಸ್ರೇಲ್‍ನ ನಿಯಮೋಲ್ಲಂಘನೆಯೇಕೆ ಕಾಣಿಸುತ್ತಿಲ್ಲ?
1948ಕ್ಕಿಂತ ಮೊದಲು ಜಾಗತಿಕ ಭೂಪಟದಲ್ಲಿ ಇಸ್ರೇಲ್ ಎಂಬ ರಾಷ್ಟ್ರವೇ ಇರಲಿಲ್ಲ. ಆದರೆ ಫೆಲೆಸ್ತೀನ್ ಇತ್ತು. ಯಹೂದಿಗಳು ಅತ್ಯಂತ ಹೆಚ್ಚಿದ್ದುದು ಜರ್ಮನಿಯಲ್ಲಿ. ಪಶ್ಚಿಮೇಶ್ಯದಲ್ಲಿ ಅವರ ಸಂಖ್ಯೆ ತೀರಾ ಕಡಿಮೆಯಿತ್ತು. ಆದರೆ ಇವತ್ತು ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ ಇಸ್ರೇಲ್ ಇದೆ, ಫೆಲೆಸ್ತೀನ್ ಇಲ್ಲ. ಆದರೂ ಫೆಲೆಸ್ತೀನಿಯರನ್ನೇ ಭಯೋತ್ಪಾದಕರೆಂದು ಕರೆಯಲಾಗುತ್ತಿದೆ. ಸ್ವತಂತ್ರ ರಾಷ್ಟ್ರವನ್ನು ಹೊಂದುವ ಅವರ ಕನಸನ್ನು ಉಗ್ರವಾದಿ ಕನಸು ಎನ್ನಲಾಗುತ್ತಿದೆ. ನಿಜವಾಗಿ, ಯಹೂದಿಯರಿಗೆ ಅವರದೇ ಆದ ರಾಷ್ಟ್ರವೊಂದರ ಅಗತ್ಯ ಇದೆ ಎಂದಾಗಿದ್ದರೆ, ಅದಕ್ಕೆ ಎಲ್ಲ ರೀತಿಯಲ್ಲೂ ಜರ್ಮನಿಯೇ ಅತ್ಯಂತ ಸೂಕ್ತ ಜಾಗವಾಗಿತ್ತು. ಯಾಕೆಂದರೆ, ಹಾಲೋಕಾಸ್ಟ್ ನಡೆದಿರುವುದು ಅಲ್ಲೇ. ಯಹೂದಿಯರ ಸಂಖ್ಯೆ ಅತ್ಯಂತ ಹೆಚ್ಚಿದ್ದುದೂ ಅಲ್ಲೇ. ಇಷ್ಟಕ್ಕೂ ಇರಾಕಿನಲ್ಲಿರುವ ಕುರ್ದ್‍ಗಳಿಗೆ ಬ್ರಿಟನ್‍ನಲ್ಲಿ ಒಂದು ರಾಷ್ಟ್ರ ಸ್ಥಾಪಿಸಿ ಕೊಡುವುದಕ್ಕೆ ಆ ದೇಶ ಒಪ್ಪಿಕೊಂಡೀತೇ? ಇರಾಕ್‍ನ ಸುನ್ನಿಗಳಿಗೆ ಅಮೇರಿಕದಲ್ಲಿ ಒಂದು ರಾಷ್ಟ್ರ ಸ್ಥಾಪಿಸಿಕೊಡಬಹುದೇ? ಇರಾಕನ್ನು ವಿಭಜಿಸಿ ಕುರ್ದ್, ಸುನ್ನಿ ಮತ್ತು ಶಿಯಾ ರಾಷ್ಟ್ರಗಳನ್ನಾಗಿ ಮಾಡಬೇಕೆಂದು ಪಾಶ್ಚಾತ್ಯ ರಾಷ್ಟ್ರಗಳು ಚರ್ಚಿಸುತ್ತಿವೆಯಾದರೂ ಅವು ತಮ್ಮ ನೆಲದಲ್ಲಿ ಅವರಿಗಾಗಿ ಒಂದು ರಾಷ್ಟ್ರವನ್ನು ಸ್ಥಾಪಿಸುತ್ತಿಲ್ಲ. ಇರಾಕನ್ನೇ ಅದಕ್ಕಾಗಿ ವಿಭಜಿಸುವ ಮಾತಾಡುತ್ತಿವೆ. ಮತ್ತೇಕೆ ಇಸ್ರೇಲನ್ನು ತಂದು ಫೆಲೆಸ್ತೀನ್‍ನಲ್ಲಿ ಸ್ಥಾಪಿಸಲಾಗಿದೆ? ಜರ್ಮನಿಯನ್ನೇ ವಿಭಜಿಸಿ ಒಂದು ಇಸ್ರೇಲ್ ರಾಷ್ಟ್ರ ಮಾಡಬಹುದಿತ್ತಲ್ಲವೇ? ಕುರ್ದ್, ಸುನ್ನಿ, ಶಿಯಾಗಳ ಸಮಸ್ಯೆಗೆ ಕಂಡುಕೊಳ್ಳುವ ಪರಿಹಾರವನ್ನು ಯಹೂದಿಗಳ ವಿಷಯದಲ್ಲೇಕೆ ಕಡೆಗಣಿಸಲಾಯಿತು?
ಕಳೆದ ಜೂನ್ 24ರಂದು ಹಮಾಸ್‍ನ ಅಲ್ ಅಖ್ಸಾ ಟಿವಿ ಚಾನೆಲ್ ಕೆಲವು ದೃಶ್ಯಗಳನ್ನು ಪ್ರಸಾರ ಮಾಡಿತು. ಹಮಾಸ್‍ನ ಸೇನಾ ವಿಭಾಗವು ಚಾಲಕ ರಹಿತ ಅಬಾಬೀಲ್ 1ಎ, ಅಬಾಬೀಲ್ 1ಬಿ ಎಂಬ ವಿಮಾನವನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ಅದು ಘೋಷಿಸಿತು. ಇದು ಇಸ್ರೇಲ್‍ನ ರಕ್ಷಣಾ ಸಚಿವಾಲಯದ ಮೇಲೆ ಹಾರಿ ದೃಶ್ಯಗಳನ್ನು ಸೆರೆ ಹಿಡಿದಿರುವುದಾಗಿಯೂ ಹೇಳಿಕೊಂಡಿತಲ್ಲದೇ ಕೆಲವು ದೃಶ್ಯಗಳ ಪ್ರಸಾರವನ್ನೂ ಮಾಡಿತು. ಕ್ಯಾಮರಾ ಮತ್ತು ರಾಕೆಟ್ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಚಾಲಕ ರಹಿತ ವಿಮಾನವೊಂದನ್ನು ಅಶ್ಕಲೋನ್‍ನಲ್ಲಿ ತಾನು ಹೊಡೆದುರುಳಿಸಿರುವುದಾಗಿ ಆ ಬಳಿಕ ಇಸ್ರೇಲ್ ಹೇಳಿಕೊಂಡಿತ್ತು. ಗಾಝಾದಿಂದ ನೂರು ಕಿಲೋ ವಿೂಟರ್ ದೂರ ಇರುವ ಟೆಲ್‍ಅವೀವ್‍ಗೆ 2012ರಲ್ಲಿ 3 ರಾಕೆಟ್‍ಗಳನ್ನು ಹಾರಿಸಿದ್ದ ಹಮಾಸ್ ಈ ಬಾರಿ 130 ಕಿ.ವಿೂ. ದೂರದ ವಾಣಿಜ್ಯ ನಗರ ಹೈಫಕ್ಕೂ ರಾಕೆಟ್‍ಗಳನ್ನು ಹಾರಿಸಿತು. ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೂ ರಾಕೆಟ್ ಆಕ್ರಮಣದ ಬೆದರಿಕೆ ಉಂಟಾಯಿತಲ್ಲದೇ, ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. 2012ರಲ್ಲಿ ಸಾವಿಗೀಡಾದ ಖಸ್ಸಾಂ ಬ್ರಿಗೇಡ್‍ನ ಕಮಾಂಡರ್ ಅಹ್ಮದ್ ಜಅïಬರಿಯ ಹೆಸರಿನಲ್ಲಿ ರೂಪಿಸಲಾದ ಜೆ. 80 ಎಂಬ ರಾಕೆಟ್‍ಗಳನ್ನು ಟೆಲ್ ಅವೀವ್, ಹೈಫ ಮತ್ತು ಪರಮಾಣು ಸ್ಥಾವರ ಇರುವ ದಿಮೋನ್‍ಗೂ ಹಾರಿಸಲಾಯಿತು. ಈ ಮೊದಲಾಗಿದ್ದರೆ ಗಾಝಾದ ಸವಿೂಪವಿರುವ ಅಶ್ಕಲೋನ್, ಅಶ್‍ದೋದ್, ಸೆದ್‍ರೋತ್ ಮುಂತಾದ ನಗರಗಳಿಗಷ್ಟೇ ಹಮಾಸ್‍ನ ರಾಕೆಟ್‍ಗಳು ಹಾರಬಲ್ಲವಾಗಿದ್ದುವು. ನಿಜವಾಗಿ, ಇಸ್ರೇಲ್‍ನ ದಿಗ್ಬಂಧನ ಕಠಿಣವಾದಂತೆಲ್ಲ ಹಮಾಸ್‍ನ ಪ್ರತಿರೋಧ ಸಾಮರ್ಥ್ಯವೂ ವೃದ್ಧಿಸುತ್ತಿದೆ. ಇದು ಇಸ್ರೇಲ್‍ಗೂ ಗೊತ್ತಾಗಿದೆ. ಆದ್ದರಿಂದಲೇ, ಅದು ಭೂದಾಳಿಗೆ ಮುಂದಾಗಿದೆ. ಒಂದು ವೇಳೆ,
ಅಮೇರಿಕದ ನ್ಯೂಯಾರ್ಕ್‍ನಲ್ಲೋ ಬ್ರಿಟನ್ನಿನ ಲಂಡನ್ನಿನಲ್ಲೋ ಅಥವಾ ಸೌದಿ ಅರೇಬಿಯಾದ ರಿಯಾದ್‍ನಲ್ಲೋ ಇಸ್ರೇಲ್‍ನ ಸ್ಥಾಪನೆಯಾಗಿರುತ್ತಿದ್ದರೆ ಅವುಗಳಿಗೂ ಫೆಲೆಸ್ತೀನ್‍ನ ನೋವು ಅರ್ಥವಾಗುತ್ತಿತ್ತು.
No comments:
Post a Comment