ಹೆಸರು ಪ್ರೀತ. ಕೇರಳದ ಕೊಚ್ಚಿ ಸಮೀಪದ ಎಡವಳ್ಳಿಯ ಈಕೆ ಅಪ್ಪಟ ಗೃಹಣಿ. ಕಳೆದ ವರ್ಷ ತನ್ನ ಮನೆಯ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕೂರುವವರೆಗೂ ಆಕೆ ಇತರೆಲ್ಲ ಗೃಹಿಣಿಯರಂತೆ ಗುರುತು ಕಳೆದು ಹೋದ ಹೆಣ್ಣು. ಆದರೆ ಯಾವಾಗ ಆಕೆ ತನ್ನ ಮನೆಯ ಮುಂದೆ ಪ್ರತಿಭಟನಾರ್ಥ ಕುಳಿತುಕೊಂಡಳೋ ನಿಧಾನಕ್ಕೆ ಆಕೆಗೊಂದು ಗುರುತು ಬಂತು. ಅದಕ್ಕಿಂತ ಮುಖ್ಯವಾಗಿ, ನಮ್ಮ ಅರ್ಥ ವ್ಯವಸ್ಥೆಯ ಸರಿ-ತಪ್ಪುಗಳ ಬಗ್ಗೆ ಪುಟ್ಟ ಪುಟ್ಟ ಚರ್ಚೆಗೆ ಅದು ವೇದಿಕೆಯನ್ನೂ ಒದಗಿಸಿತು. ನಿಧಾನಕ್ಕೆ ಆಕೆ ಚರ್ಚಾವಸ್ತುವಾಗಿ ಬೆಳೆಯತೊಡಗಿದಳು. ಸ್ವಯಂ ಸೇವಾ ಸಂಸ್ಥೆಗಳ ಗಮನ ಸೆಳೆಯತೊಡಗಿದಳು. ಅಪ್ಪಟ ಗೃಹಿಣಿ ಯೋರ್ವಳು ವ್ಯವಸ್ಥೆಯ ತಪ್ಪುಗಳನ್ನು ಎತ್ತಿಕೊಂಡು ಪ್ರತಿಭಟನೆ ಗಿಳಿಯುವುದು ಹಲವರಲ್ಲಿ ಅಚ್ಚರಿ ಮೂಡಿಸಿತು. ಅವರೆಲ್ಲ ಆಕೆಯ ಜೊತೆ ನಿಲ್ಲತೊಡಗಿದರು. ಎಡವಳ್ಳಿಯ ಪ್ರೀತ ಮಾಧ್ಯಮಗಳ ಗಮನವನ್ನೂ ಸೆಳೆದಳು. ಆದರೆ, ಯಾವಾಗ ಆಕೆ ತನ್ನ ಪ್ರತಿ ಭಟನೆಯನ್ನು ಮನೆಯ ಎದುರಿನಿಂದ ಹೆಚ್‍ಡಿಎಫ್‍ಸಿ ಬ್ಯಾಂಕ್‍ನೆ ದುರಿಗೆ ವರ್ಗಾಯಿಸಿದಳೋ, ವ್ಯವಸ್ಥೆ ಬೆದರಿತು. ಆಕೆಯ ಬೇಡಿಕೆಗೆ ಸ್ಪಂದಿಸಿತು. ಕೊನೆಗೆ 2018 ಮಾರ್ಚ್ 7ರಂದು ಆಕೆ ಪ್ರತಿಭಟನೆಯನ್ನು ಕೊನೆಗೊಳಿಸಿದಳು.
ಪ್ರೀತಳ ಕತೆ 1994ರಿಂದ ಪ್ರಾರಂಭವಾಗುತ್ತದೆ.
ಆಕೆಯ ಕುಟುಂಬ ಸಂಬಂಧಿಕನಾದ ಶಾಜನ್ ಕಣ್ಣಿಪುರತ್ತ್ ಎಂಬವ ‘ಬಸ್‍ಗಳ ಬಾಡಿ ಕಟ್ಟುವ ವರ್ಕ್‍ಶಾಪ್’ ಪ್ರಾರಂಭಿಸು ವುದಕ್ಕಾಗಿ ಪ್ರೀತಳ ಕುಟುಂಬದಿಂದ ನೆರವು ಯಾಚಿಸುತ್ತಾನೆ. ಬ್ಯಾಂಕ್‍ನಿಂದ ಎರಡು ಲಕ್ಷ ರೂಪಾಯಿ ಸಾಲ ಪಡಕೊಳ್ಳುವುದಕ್ಕೆ ಜಾಮೀನು ನಿಲ್ಲಬೇಕೆಂದು ಕೋರಿಕೊಳ್ಳುತ್ತಾನೆ. ಪ್ರೀತ ಮತ್ತು ಆಕೆಯ ಪತಿ ಒಪ್ಪಿಕೊಳ್ಳುತ್ತಾರೆ. 22 1/2 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿದ್ದ ಅವರು ಜಾಗದ ಪಟ್ಟೆಯನ್ನು ಜಾಮೀನಾಗಿ ಬ್ಯಾಂಕ್‍ನಲ್ಲಿ ಅಡವು ಇಡುತ್ತಾರೆ. ಪ್ರೀತಳ ಸಮಸ್ಯೆ ಆರಂಭವಾಗುವುದೇ ಇಲ್ಲಿಂದ. 1997ರಲ್ಲಿ ಶಾಜನ್ ತನ್ನ ವರ್ಕ್‍ಶಾಪನ್ನು ಮುಚ್ಚುತ್ತಾರೆ. ಅಲ್ಲದೇ, ಇವರು ಸಾಲ ಪಡೆದ ಲಾರ್ಡ್ ಕೃಷ್ಣ ಬ್ಯಾಂಕ್ ನಷ್ಟವನ್ನನುಭವಿಸಿ ಪಂಜಾಬ್ ಸಂಚುರಿಯನ್ ಬ್ಯಾಂಕ್‍ನಲ್ಲಿ ವಿಲೀನವಾಗುತ್ತದೆ. ಬಳಿಕ, ಅದು ಹೆಚ್‍ಡಿಎಫ್‍ಸಿ ಬ್ಯಾಂಕ್‍ನೊಂದಿಗೆ ವಿಲೀನಗೊಳ್ಳುತ್ತದೆ. ವಿಶೇಷ ಏನೆಂದರೆ, ಈ ಬೆಳವಣಿಗೆಗಳಾವುವೂ ಸಾಲದ ಮೇಲಿನ ಬಡ್ಡಿಯ ಏರುಗತಿಯನ್ನು ತಡೆಯುವುದಿಲ್ಲ. ಬಡ್ಡಿ-ಚಕ್ರ ಬಡ್ಡಿಗಳಿಂದ ಕಂಗೆಟ್ಟ ಪ್ರೀತಳ ಕುಟುಂಬವು ಒಂದು ಲಕ್ಪ ರೂಪಾಯಿ ಪಾವತಿ ಸಲು ಹೋದಾಗ ಬ್ಯಾಂಕ್ ನಿರಾಕರಿಸುತ್ತದೆ. ಬಡ್ಡಿಯ ಮೊತ್ತವನ್ನು ದ್ವಿಗುಣಗೊಳಿಸಿ ಬೆದರಿಸುತ್ತದೆ. ಇದರ ನಡುವೆ ವರ್ಕ್‍ಶಾಪ್ ಆರಂಭಿಸಿದ ಸಂಬಂಧಿಕನೇ ಅನುಮಾನಾಸ್ಪದವಾಗಿ ವರ್ತಿಸುತ್ತಾನೆ. ಬಡ್ಡಿಯ ವಿಷಯದಲ್ಲಿ ಬ್ಯಾಂಕ್‍ನ ವಿರುದ್ಧ ಕೇಸ್ ಹಾಕಿದ್ದೇನೆ ಎಂದು ನಂಬಿಸುತ್ತಾನೆ. ಪ್ರೀತಳ ಕುಟುಂಬ ಮನೆ ಜಪ್ತಿಯ ಭೀತಿಯಿಂದ ಒಂದಷ್ಟು ಮೊತ್ತವನ್ನು ಸಂಗ್ರಹಿಸಿಕೊಂಡು ಬ್ಯಾಂಕನ್ನು ಸಮೀಪಿಸಿದಾಗ ಆಘಾತಗೊಳ್ಳಬಹುದಾದ ಲೆಕ್ಕಾಚಾರವೊಂದನ್ನು ಬ್ಯಾಂಕ್ ಮುಂದಿಡುತ್ತದೆ. ಸಾಲ ಪಡೆದಿರುವುದು 2 ಲಕ್ಪ ರೂಪಾಯಿ. ಅದೂ ಇವರಲ್ಲ. ಇವರ ಸಂಬಂಧಿಕ. ಇಡೀ ಪ್ರಕ್ರಿಯೆಯಲ್ಲಿ ಇವರು ನೆರವುದಾರರೇ ಹೊರತು ಫಲಾನುಭವಿಗಳಲ್ಲ. ಆದರೆ ಸಮಸ್ಯೆ ಎದುರಿಸುತ್ತಿರುವುದು ಇವರು. ಅಲ್ಲದೇ 2 ಲಕ್ಪ ರೂಪಾಯಿ ಪಾವತಿಸಿ ಮನೆ ಉಳಿಸಿಕೊಳ್ಳೋಣವೆಂದರೆ, ಬ್ಯಾಂಕ್ 37 ಲಕ್ಪ ರೂಪಾಯಿಯನ್ನು ಪಾವತಿಸುವಂತೆ ಆಗ್ರಹಿಸುತ್ತದೆ. 2 ಲಕ್ಪ ರೂಪಾಯಿಗೆ ಬಡ್ಡಿ ಸೇರ್ಪಡೆಗೊಂಡು ಆದ ವೃದ್ಧಿ ಇದು. ಪ್ರೀತಳ ಕುಟುಂಬ ಕಂಗಾಲಾಗುತ್ತದೆ. ಈ ನಡುವೆ 2010ರಲ್ಲಿ ಮನೆ ಜಪ್ತಿಯ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಡೆಬಿಟ್ ರಿಕವರಿ ಟ್ರಿಬ್ಯೂನ್(DRT)ನ ಆದೇಶದಂತೆ ಗ್ರಾಮಾಧಿಕಾರಿಯ ಮೂಲಕ ಜಪ್ತಿ ಮಾಡಿಕೊಳ್ಳಬೇಕಾದ ಜಾಗದ ಪರಿಶೀಲನೆ ನಡೆಯುತ್ತದೆ. ಪ್ರೀತಳ ಕುಟುಂಬ ವಿವಿಧ ರೀತಿಯಲ್ಲಿ ಬ್ಯಾಂಕ್ ಅಧಿಕಾರಿಗಳ ಮನವೊಲಿಸಲು ಯತ್ನಿಸುತ್ತಾರೆ. 2 ಲಕ್ಪ ರೂಪಾಯಿ ಸಾಲವು 37 ಲಕ್ಪವಾಗಿ ಬೆಳೆದುದನ್ನು ಅವರಿಂದ ಅರಗಿಸಿಕೊಳ್ಳಲು ಸಾಧ್ಯ ವಾಗಿರಲಿಲ್ಲ. ಈ ಅಸಾಧಾರಣ ಬೆಳವಣಿಗೆಯನ್ನು ಅವರು ಮತ್ತೆ ಮತ್ತೆ ಪ್ರಶ್ನಿಸುತ್ತಾರೆ. ಗ್ರಾಮೀಣ ಪ್ರದೇಶದವರಾದ ಆ ಕುಟುಂಬಕ್ಕೆ ಕಾನೂನುಗಳ ಬಗ್ಗೆ ಭಾರೀ ತಿಳುವಳಿಕೆಯೇನೂ ಇರಲಿಲ್ಲ. 1990ರ ದಶಕದಲ್ಲಿ ಅರ್ಥ ಮಂತ್ರಿ ಮನ್‍ಮೋಹನ್ ಸಿಂಗ್ ತಂದ ಸುಧಾರಣಾ ಪ್ರಕ್ರಿಯೆಗಳು ಮತ್ತು ಅದರ ಭಾಗವಾಗಿ ರಚನೆಯಾದ ಹಲವು ಕಾನೂನುಗಳು ಎಷ್ಟು ಅಪಾಯಕಾರಿ ಎಂಬುದು ಅವರಿಗೆ ಗೊತ್ತಿರಲಿಲ್ಲ. ಇದರ ಜೊತೆಗೇ ಮನ್‍ಮೋಹನ್ ಪ್ರಣೀತ ಉದಾರೀಕರಣ ನೀತಿಯು ಆರ್ಥಿಕತೆಯ ನೈತಿಕ ಪರದೆಯನ್ನು ತೀರಾ ತೆಳುವಾಗಿಸಿ ಬಿಟ್ಟಿತ್ತು. ಬ್ಯಾಂಕುಗಳ ಮತ್ತು ರಿಯಲ್ ಎಸ್ಟೇಟ್ ಕುಳಗಳ ನಡುವೆ ಅನಧಿಕೃತ ಸಂಬಂಧವನ್ನು ಅದು ಕುದುರಿಸಿತ್ತು. ಬ್ಯಾಂಕ್ ಮ್ಯಾನೇಜರ್, ಎಸ್ಟೇಟ್ ಮಾಫಿಯಾ ಮತ್ತು ಆಖಖಿ ಅಧಿಕಾರಿಗಳು ಜೊತೆಗೂಡಿಕೊಂಡು ಸಾಲಗಾರರನ್ನು ದೋಚುವ ಹೊಸ ಹೊಸ ವಿಧಾನಗಳು ಆರ್ಥಿಕ ಉದಾರೀಕರಣದ ಬಳಿಕ ಆವಿಷ್ಕಾರಗೊಂಡವು. ಪ್ರೀತಳ ಕುಟುಂಬಕ್ಕೆ ಇವಾವುದರ ಅರಿವಿರಲಿಲ್ಲ. ಪಡೆಯದ ಸಾಲವನ್ನು ತಾವು ತೀರಿಸಬೇಕೆಂಬುದೇ ಆ ಕುಟುಂಬಕ್ಕೆ ಜೀರ್ಣಿಸಿಕೊಳ್ಳಲಾಗದ ಸಂಗತಿಯಾಗಿತ್ತು. ಆದರೆ ಜಾಮೀನು ನಿಂತ ಕಾರಣ ಅದು ಅನಿವಾರ್ಯ ಎಂಬುದನ್ನು ಅದು ಒಪ್ಪಿಕೊಂಡಿತು. ಮಾತ್ರವಲ್ಲ, ಹೆಚ್ಚುವರಿ ಒಂದು ಲP್ಷÀ ಬಡ್ಡಿ ಪಾವತಿಸುವುದಕ್ಕೂ ಅದು ಸಿದ್ಧವಾಗಿತ್ತು. ಆದರೆ 2 ಲಕ್ಪ ರೂಪಾಯಿಯು 37 ಲಕ್ಪ ರೂಪಾಯಿಯಾಗಿ ಬೆಳೆದಿದೆ ಎಂಬುದನ್ನು ಹೇಗೆ ಆಲೋಚಿಸಿದರೂ ಒಪ್ಪಿಕೊಳ್ಳುವುದಕ್ಕೆ ಆ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ 2014ರಲ್ಲಿ ಆಖಖಿ ಅಧಿಕಾರಿಗಳು ಪ್ರೀತಳ 21/2 ಕೋಟಿ ಬೆಲೆಯ ಜಾಗಕ್ಕೆ 37 ಲಕ್ಪ ರೂಪಾಯಿ ಬೆಲೆ ನಿರ್ಣಯಿಸಿ ಆನ್‍ಲೈನ್‍ನಲ್ಲಿ ಏಲಂಗೆ ಇಟ್ಟರು. ಜಾಗದ ವ್ಯವಹಾರದಲ್ಲಿ (ರಿಯಲ್ ಎಸ್ಟೇಟ್) ತೊಡಗಿಸಿಕೊಂಡಿರುವ ಸಂಸ್ಥೆಯೊಂದು ಅದನ್ನು 37 ಲಕ್ಪದ 80 ಸಾವಿರ ರೂಪಾಯಿಗೆ ಖರೀದಿಸಿತು. ಆ ಬಳಿಕ ಜಪ್ತಿ ನಡೆಯಿತು. ಈ ಆಘಾತವನ್ನು ತಾಳಲಾರದೇ ಪ್ರೀತಳ ಅತ್ತೆ ಕಮಲಾಕ್ಷಿ ಹೃದಯಾಘಾತದಿಂದ ನಿಧನರಾದರು.
ಇಲ್ಲಿ ಪ್ರೀತಳಿಗೆ ಅರ್ಥವಾಗದ ಕಾರ್ಪೋರೇಟ್ ಒಳವ್ಯವಹಾರ ವೊಂದಿದೆ. ಬ್ಯಾಂಕ್‍ಗಳು, DRT ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗಳ ನಡುವೆ ಸಂಬಂಧವಿರುತ್ತದೆ. ಇಂಥ ಸಾಲಗಳ ಬಗ್ಗೆ ಈ ಮಂದಿ ಹದ್ದುಗಣ್ಣಿನಿಂದ ಪರಿಶೀಲನೆ ನಡೆಸುತ್ತಿರುತ್ತಾರೆ. ಸಾಲ ಸಂದಾಯದಲ್ಲಿ ಏರಿಳಿತವಾಗತೊಡಗಿದರೆ ಅದನ್ನು ಹೇಗಾದರೂ ಮಾಡಿ ಏಲಂ ಆಗುವಂತೆ ನೋಡಿಕೊಳ್ಳುವುದು ಮತ್ತು ಈ ರಿಯಲ್ ಎಸ್ಟೇಟ್ ಕುಳಗಳು ಅದನ್ನು ಖರೀದಿಸಿ ದ್ವಿಗುಣ ಬೆಲೆಗೆ ಮಾರಾಟ ಮಾಡುವ ಸಂಚುಗಳು ನಡೆಯುತ್ತಿರುತ್ತವೆ. ಸಾಲಗಾರ ಅಸಲು ಸಂದಾಯ ಮಾಡುವುದಕ್ಕೆ ಏಗುತ್ತಿರುವಾಗ ಇತ್ತ ಏರುತ್ತಿರುವ ಬಡ್ಡಿ ಆತನನ್ನು ಕಂಗಾಲು ಮಾಡಿರುತ್ತದೆ. ಕೊನೆಗೆ ಅಸಲನ್ನು ಬಿಟ್ಟು ಬಡ್ಡಿಯನ್ನು ಮಾತ್ರ ಕಟ್ಟುವ ಸ್ಥಿತಿಗೆ ತಲುಪುತ್ತಾನೆ. ಒಂದು ಬಾರಿ ಬಡ್ಡಿ ಕಟ್ಟುವಲ್ಲಿ ತಡವಾದರೆ ಮುಂದಿನ ಬಾರಿ ಬಡ್ಡಿಯಲ್ಲೂ ಏರಿಕೆಯಾಗುತ್ತದೆ. ಆತ ದುಡಿದೂ ದುಡಿದೂ ಹಣ ಕಟ್ಟುವುದು ಮತ್ತು ಒಂದು ದಿನ ಬ್ಯಾಂಕ್ ಹಿಡಿತದಿಂದ ಪಾರಾಗಬಹುದು ಎಂಬ ನಿರೀಕ್ಷೆಯಲ್ಲಿರುವುದು ನಡೆಯುತ್ತಲೇ ಇರುತ್ತದೆ. ಈ ನಿರೀಕ್ಷೆ ಕ್ರಮೇಣ ನಿರಾಶೆಯಾಗಿ ಮಾರ್ಪಡತೊಡಗಿದಾಗ ಆತ್ಮಹತ್ಯೆಯಂಥ ಅಪಾಯಕಾರಿ ನಿರ್ಧಾರಗಳು ಅನಿವಾರ್ಯವಾಗುತ್ತವೆ. ಆದರೆ ಪ್ರೀತಳು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಅನ್ನುವುದಷ್ಟೇ ಖುಷಿಯ ಸಂಗತಿ. ಆಕೆ ಈ ಇಡೀ ಬಡ್ಡಿ ವ್ಯವಸ್ಥೆಯನ್ನು ಪ್ರತಿಭಟಿಸಿದಳು. ಈ ವ್ಯವಸ್ಥೆಯೊಳಗಡೆ ಇರುವ ಆರ್ಥಿಕ ಅಪರಾಧವನ್ನು ಪ್ರಶ್ನಿಸಲು ನಿರ್ಧರಿಸಿದಳು. ನೆರವಿನ ಸೋಗು ಹಾಕಿ ಜನರನ್ನು ದೋಚುವ ಆರ್ಥಿಕ ನೀತಿಯ ವಿರುದ್ಧ ತಿರುಗಿ ನಿಂತಳು. 2 ಲಕ್ಪ ಸಾಲಕ್ಕಾಗಿ 2 1/2 ಕೋಟಿ ರೂಪಾಯಿ ಬೆಲೆಯ ಮನೆ ಮತ್ತಿತರವುಗಳನ್ನು ಜಪ್ತಿ ಮಾಡಿರುವುದು ಅನೈತಿಕ ಎಂದು ಸಾರಿದಳು.
ಬ್ಯಾಂಕ್ ಎಂಬುದು ಸಮಾಜದ ಅಗತ್ಯ. ಉಳ್ಳವರಿಂದ ಹಣವನ್ನು ಪಡೆದು ಇಲ್ಲದವರಿಗೆ ದಾಟಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಯಾವ ದೃಷ್ಟಿ ಯಲ್ಲಿ ನೋಡಿದರೂ ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ಸಮಾಜವೆಂದರೆ, ಶ್ರೀಮಂತರು ಮತ್ತು ಬಡವರಿರುವ ಒಂದು ಒಕ್ಕೂಟ. ಈ ಒಕ್ಕೂಟದಲ್ಲಿ ಪರಸ್ಪರರು ನೆರವಾಗುವ ಮನಸ್ಥಿತಿಯನ್ನು ಹೊಂದದ ಹೊರತು ನೆಮ್ಮದಿ ಸಾಧ್ಯವಿಲ್ಲ. ಬ್ಯಾಂಕ್ ಎಂಬುದು ಈ ನೆಮ್ಮದಿಯನ್ನು ಹುಟ್ಟು ಹಾಕುವ ಮಧ್ಯವರ್ತಿಯಾಗಿ ಕೆಲಸ ಮಾಡಬೇಕು. ಇಲ್ಲದವರನ್ನು ಉಳ್ಳವರನ್ನಾಗಿ ಮಾಡುವ ಒಂದು ಸಂಸ್ಥೆ ಎಂಬ ನೆಲೆಯಲ್ಲಿ ಬ್ಯಾಂಕ್ ಗುರುತಿಸಿಕೊಳ್ಳಬೇಕು. ದುರಂತ ಏನೆಂದರೆ, ಪ್ರಸಕ್ತ ಪರಿಸ್ಥಿತಿ ಹಾಗಿಲ್ಲ. ಬ್ಯಾಂಕ್‍ಗಳು ಇಲ್ಲದವರನ್ನು ದೋಚುವ ಮತ್ತು ಉಳ್ಳವರನ್ನು ಸಾಕುವ ವಿಚಿತ್ರ ಪಾತ್ರವನ್ನು ನಿರ್ವಹಿಸುತ್ತಿವೆ. 2 ಲಕ್ಷ ರೂಪಾಯಿಗಾಗಿ 2 ಕೋಟಿ ರೂಪಾಯಿಯ ಆಸ್ತಿ ಜಪ್ತಿ ಮಾಡುವಷ್ಟು ಬಲಶಾಲಿಯಾದ ಬ್ಯಾಂಕುಗಳು 2 ಲಕ್ಷ ಕೋಟಿ ಸಾಲ ಪಡೆದವರನ್ನು ಕೆಂಪು ಹಾಸು ಹಾಕಿ ಸ್ವಾಗತಿಸುತ್ತದೆ. ಇದಕ್ಕಿಂತಲೂ ಮುಖ್ಯವಾಗಿ, ಕೋಟಿ ಕೋಟಿ ಲೆಕ್ಕದಲ್ಲಿ ಸಾಲ ಪಡಕೊಳ್ಳುವ ಶ್ರೀಮಂತ ವರ್ಗಕ್ಕೆ ಜುಜುಬಿ ಬಡ್ಡಿ ನಿಗದಿಪಡಿಸುವ ಮತ್ತು ಕೊನೆಗೆ ವಸೂಲಾಗದ ಸಾಲ ಎಂಬ ಪಟ್ಟಿಯಲ್ಲಿ ಸೇರಿಸಿ ಸಾಲ ಮನ್ನಾ ಮಾಡುವ ಬ್ಯಾಂಕುಗಳೇ, ಬಡವರು ಪಡಕೊಳ್ಳುವ ಜುಜುಬಿ ಸಾಲಕ್ಕೆ 14-18% ಬಡ್ಡಿಯನ್ನು ವಿಧಿಸುತ್ತವೆ. ನಿಜಕ್ಕೂ, ಬ್ಯಾಂಕುಗಳು ಇಲ್ಲದದವರಿಗೆ ನೆರವಾಗುವ ಸಂಸ್ಥೆಗಳು ಎಂದಾದರೆ, ಬಡ್ಡಿ ರಹಿತವಾದ ಸಾಲವ್ಯವಸ್ಥೆಯ ಬಗ್ಗೆ ಯಾಕಾಗಿ ಆಲೋಚಿಸುತ್ತಿಲ್ಲ? ಯಾರಿಗೇ ಆಗಲಿ ಸಾಲ ಕೊಡುವಾಗ ಬ್ಯಾಂಕುಗಳು ಶ್ಯೂರಿಟಿಯನ್ನು ಅಪೇಕ್ಷಿಸುತ್ತದೆ. ಇದು ಸಹಜ ಮತ್ತು ಅಗತ್ಯ ನಿಯಮ. ಆ ಬಳಿಕ ಪಡೆದ ಸಾಲಕ್ಕೆ ಬಡ್ಡಿ ವಿಧಿಸುವುದೆಂದರೆ ಸಾಲಗಾರನ ಮೇಲೆ ಹೆಚ್ಚುವರಿ ಒತ್ತಡ ಹಾಕಿದಂತೆ. ಮುಖ್ಯವಾಗಿ, ಬಡವರ್ಗ ಇದರಿಂದ ತೀವ್ರವಾಗಿ ಸಂಕಟಪಡುತ್ತದೆ. ಸಾಲ ಮತ್ತು ಅದರ ಮೇಲೆ ವೃದ್ಧಿಯಾಗುತ್ತಿರುವ ಬಡ್ಡಿಯನ್ನು ನಿಭಾಯಿಸುವುದು ಅವರ ಪಾಲಿಗೆ ಕಠಿಣವಾಗುತ್ತಾ ಹೋಗುತ್ತದೆ. ರೈತರ ಸಾಲು ಸಾಲು ಆತ್ಮಹತ್ಯೆಗಳ ಹಿಂದೆ ಇಂಥ ಬಡ್ಡಿ ವ್ಯವಸ್ಥೆಯ ಪಾಲು ದೊಡ್ಡದಿದೆ ಎಂದು ಹಲವು ಸಮೀಕ್ಷೆಗಳೂ ಹೇಳಿವೆ. ಆದ್ದ ರಿಂದ, ಬಡ್ಡಿರಹಿತ ಸಾಲ ವ್ಯವಸ್ಥೆಯನ್ನು ಸರಕಾರವೇಕೆ ಪರಿಚಯಿಸಬಾರದು? ಬಡ್ಡಿಯ ಹಣದಿಂದ ಬ್ಯಾಂಕನ್ನು ನಿರ್ವಹಿ ಸುವ ಬದಲು ಪರ್ಯಾಯ ದಾರಿಗಳನ್ನೇಕೆ ಕಂಡುಕೊಳ್ಳ ಬಾರದು? ಬ್ಯಾಂಕ್‍ನಲ್ಲಿ ಹೂಡಿಕೆಯಾಗುವ ಬೃಹತ್ ಡಿಪಾ ಸಿಟ್‍ಗಳನ್ನು ಇತರ ಲಾಭದಾಯಕ ಉದ್ದಿಮೆಯಲ್ಲೋ ಇನ್ನಾವುದಾದರೂ ವ್ಯಾಪಾರದಲ್ಲೋ ತೊಡಗಿಸಿ ಬರುವ ಆದಾಯ ದಿಂದ ಬ್ಯಾಂಕ್ ನಿರ್ವಹಣೆ ಸಾಧ್ಯವೇ ಎಂದು ಯಾಕೆ ಯೋಚಿಸಬಾರದು? ಅಂದಹಾಗೆ,
ಪ್ರತಿವರ್ಷ ವಿವಿಧ ಬ್ಯಾಂಕ್‍ಗಳು ತಮಗಾದ ಲಾಭದ ಪಟ್ಟಿಯನ್ನು ಬಿಡುಗಡೆಗೊಳಿಸುವುದಿದೆ. ನಿಜ ಏನೆಂದರೆ, ಆ ಲಾಭದ ಹಿಂದೆ ಪ್ರೀತಳಂಥ ಅಸಹಾಯಕರ ಕಣ್ಣೀರಿದೆ. ಅವರಿಂದ ಕಸಿದುಕೊಂಡ ಬಡ್ಡಿಯೇ ಈ ಲಾಭ. ನೀವೇ ಹೇಳಿ, ಈ ಲಾಭಕ್ಕಾಗಿ ನಾವು ಬ್ಯಾಂಕ್‍ಗಳನ್ನು ಅಭಿನಂದಿಸಬೇಕೋ ವಿಷಾದಿಸಬೇಕೋ?