Tuesday, May 15, 2012

ಅಮ್ಮಾ ಕ್ಷಮಿಸು..ನಾನು ತಪ್ಪು ಮಾಡಿಬಿಟ್ಟೆ..

    ‘ಓ ನಾದಾಪುರ ಊರಿನವರೇ, ನಿಮ್ಮಲ್ಲಾರೂ ಗಂಡಸರಿಲ್ಲವಾ? ಇಷ್ಟೊಂದು ಕ್ರೂರವಾಗಿ ಪತ್ನಿಯನ್ನು ಪೀಡಿಸಿದವ, ವರದಕ್ಷಿಣೆಗಾಗಿ ಆಕೆಯನ್ನೇ ಬಲಿ ಪಡೆದವ ನಿಮ್ಮ ಮಧ್ಯೆಯೇ ಎದೆ ಸೆಟೆದು ನಡೆಯುತ್ತಾನಲ್ಲಾ, ನಿಮಗೆ ನಾಚಿಕೆಯಾಗುವುದಿಲ್ಲವೇ? ಫೈಝಲ್ ಅನ್ನುವ ಆ ಕ್ರೂರಿಯನ್ನು ನೋಡುವಾಗ ನಿಮಗೇನೂ ಅನಿಸುವುದಿಲ್ಲವೇ? ನಿಮ್ಮ ಮೌನಕ್ಕೆ ಧಿಕ್ಕಾರವಿರಲಿ..’
      ಏಷ್ಯಾನೆಟ್ ಟಿ.ವಿ. ಚಾನೆಲ್ ನ  ‘ಕಂಡದ್ದು ಕೇಳಿದ್ದು’ ಕಾರ್ಯಕ್ರಮದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ‘ವಲಯ’ದ ಝಫರಿಯ ಎಂಬ ಹೆಣ್ಣು ಮಗಳ ಹೃದಯ ವಿದ್ರಾವಕ ಕತೆ ಇತ್ತೀಚೆಗೆ ಪ್ರಸಾರವಾಗದೇ ಇರುತ್ತಿದ್ದರೆ, ಝಫರಿಯ ಹೊರ ಜಗತ್ತಿಗೆ ಅಪರಿಚಿತವಾಗಿಯೇ ಉಳಿಯುತ್ತಿದ್ದಳೇನೋ. ಆ ಕಾರ್ಯಕ್ರಮವನ್ನು ವೀಕ್ಷಿಸಿದ ಸಾವಿರಾರು ಮಂದಿಯ ಕಣ್ಣುಗಳು ಒದ್ದೆಯಾದುವು. ಬಿಕ್ಕಿ ಬಿಕ್ಕಿ ಅತ್ತರು. 2007 ಡಿಸೆಂಬರ್ 3ರಂದು ಮದುವೆಯಾದ ಬಳಿಕ ಝಫರಿಯಳ ಬದುಕಿನ ಪ್ರತಿ ಪುಟದಲ್ಲೂ ಇದ್ದದ್ದು ಬರೀ ವಿಷಾದಗಳೇ. ಯುವಕನೊಬ್ಬ ಫೇಸ್ ಬುಕ್ ನಲ್ಲಿ  ಝಫರಿಯಳ ಪೋಟೋ ಹಾಕಿ, ಮೇಲಿನಂತೆ ಕಮೆಂಟು ಬರೆದ. ನೂರಾರು ಪ್ರತಿಕ್ರಿಯೆಗಳು ಫೇಸ್ ಬುಕ್ಕನ್ನಿಡೀ ತುಂಬಿಕೊಂಡವು. ಆಕ್ರೋಶ, ಸಿಟ್ಟು, ಕಣ್ಣೀರುಗಳೇ ತುಂಬಿಕೊಂಡಿರುವ ಅಸಂಖ್ಯ ಪತ್ರಗಳು..
       ಮುಂದಿನದನ್ನು ಝಫರಿಯಳ ಮಾತಿನಲ್ಲೇ ಕೇಳಿ..
7 ಹೆಣ್ಣು, 3 ಗಂಡು ಮಕ್ಕಳಿರುವ ದೊಡ್ಡದೊಂದು ಮನೆಗೆ ನಾನು ಸೊಸೆಯಾಗಿ ಹೋದೆ. ಎಲ್ಲರಂತೆ ನನ್ನಲ್ಲೂ ಒಂದಷ್ಟು ಕನಸುಗಳಿದ್ದುವು. ಗಂಡನನ್ನು ಅಪಾರವಾಗಿ ಪ್ರೀತಿಸಬೇಕು, ಮನೆಯವರನ್ನೆಲ್ಲ ಒಂದು ಕುಟುಂಬವಾಗಿ, ವಿಶ್ವಾಸದಿಂದ ನಡೆಸಿಕೊಳ್ಳಬೇಕು ಅಂತ ಅಂದುಕೊಂಡಿದ್ದೆ. 35 ಪವನ್ ಚಿನ್ನ, 1 ಲಕ್ಷ ರೂಪಾಯಿ, ಒಂದು ರಾಡೋ ವಾಚು ವರದಕ್ಷಿಣೆಯಾಗಿ ಪಡಕೊಂಡಿದ್ದ ಗಂಡ ಫೈಸಲ್, ತನ್ನನ್ನು ಪ್ರೀತಿಸುತ್ತಾನೆ ಎಂದು ನಂಬಿದ್ದೆ. ಆದರೆ ನನ್ನೆಲ್ಲ ನಿರೀಕ್ಷೆಗಳು ಹುಸಿಯಾದುವು. ನನ್ನ 7 ಮಂದಿ ನಾದಿನಿಯರಲ್ಲಿ ಜಸೀರ ಮತ್ತು ನೂರ್ ಜಹಾನ್ ತಮ್ಮ ಗಂಡಂದಿರನ್ನು ಬಿಟ್ಟು ಬಂದವರು. ಮನೆಯ ಆಡಳಿತವೆಲ್ಲ ಅವರದೇ ಕೈಯಲ್ಲಿತ್ತು. ನಾನು ಆ ಮನೆಗೆ ಕಾಲಿಟ್ಟು ಒಂದು ವಾರ ತುಂಬುವ ಮೊದಲೇ ಕೆಲಸದಾಳುವನ್ನು ಕೈಬಿಟ್ಟರು. ಆಕೆಯ ಉಡುಪನ್ನು ನನಗೆ ತೊಡಿಸಿದರು. ಶೌಚಾಲಯದಿಂದ ಹಿಡಿದು ಜಗಲಿಯ ವರೆಗೆ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದುದು ನಾನೊಬ್ಬಳೇ. ಹಾಗೆ ಕೆಲಸ ಮುಗಿಯಿತೆಂದು ಸುಮ್ಮನೆ ಕೂರುವಂತಿಲ್ಲ. ಮನೆಯ ಹೊರಗಿನ ಕೆಲಸಕ್ಕೆ ನನ್ನನ್ನು ಹಚ್ಚುತ್ತಿದ್ದರು. ನನಗೆ ಅಪಾರ ನೋವು ಕೊಡುತ್ತಿದ್ದುದು ಯಾವುದೆಂದರೆ, ನಾನು ಹೀಗೆ ಕೆಲಸದಾಳುವಿನಂತೆ ದುಡಿಯುವಾಗ ಅವರೆಲ್ಲಾ ಕಾಲು ಚಾಚಿ ಟಿ.ವಿ. ನೋಡುತ್ತಲೋ ತಮಾಷೆ ಆಡುತ್ತಲೋ ದಿನ ಕಳೆಯುತ್ತಿದ್ದರು. ಆದರೆ ನನ್ನ ಮನೆಯವರಲ್ಲಿ ನಾನು ಇದನ್ನು ಹೇಳಿಯೇ ಇರಲಿಲ್ಲ. ಅಪ್ಪ ಬರುವಾಗ ನಾನು ಕೆಲವೊಮ್ಮೆ ಹಟ್ಟಿಯಲ್ಲಿರುತ್ತಿದ್ದೆ. ಕೆಲವೊಮ್ಮೆ ಕಟ್ಟಿಗೆಯ ರಾಶಿಯಲ್ಲೋ ಅಡುಗೆ ಕೋಣೆಯಲ್ಲೋ ಇರುತ್ತಿದ್ದೆ. ಅಪ್ಪನಿಗೆ ನೋವಾಗಬಾರದಲ್ಲ, ಕೈ, ಕಾಲು, ಮುಖವನ್ನು ಬಕಬಕನೆ ತೊಳೆದು ಓಡೋಡಿ ಬರುತ್ತಿದ್ದೆ. ಅಪ್ಪನೆದುರು ಬಲವಂತದಿಂದ ನಗುತ್ತಿದ್ದೆ.
ಒಂದು ದಿನ ಅಪ್ಪ ಮನೆಗೆ ದಿಢೀರನೆ ಬಂದಿದ್ದರು. ನನ್ನ ತಲೆಯಲ್ಲಿ ಬ್ಯಾಂಡೇಜು ಇತ್ತು. ‘ಏನಾಯ್ತು ಮಗಳೇ?' ಅಂತ ಅಪ್ಪ ಅಪಾರ ನೋವಿನಿಂದ ಕೇಳಿದರು. ಹತ್ತಿರ ಕೂರಿಸಿ ತಲೆ ನೇವರಿಸಿದರು. ಮೆಟ್ಟಲಿನಿಂದ ಇಳಿಯುವಾಗ ಬಿದ್ದು ಬಿಟ್ಟೆ ಅಂದೆ. ಅಪ್ಪನಿಗೆ ತುಸು ಅನುಮಾನ ಕಾಡಿರಬೇಕು. ಎರಡೆರಡು ಬಾರಿ ಪ್ರಶ್ನಿಸಿ ದೃಢಪಡಿಸಿಕೊಂಡರು. ಅಪ್ಪ ಹೋದ ಮೇಲೆ ಶೌಚಾಲಯಕ್ಕೆ ತೆರಳಿ ಧಾರಾಳ ಕಣ್ಣೀರಿಳಿಸಿದೆ. ಯಾಕೆಂದರೆ ನಾನು ಬಿದ್ದಿರಲಿಲ್ಲ. ನನ್ನ ನಾದಿನಿ ಜಸೀರ ತೆಂಗಿನ ಕಾಯಿಯಿಂದ ನನ್ನ ತಲೆಗೆ ಹೊಡೆದಿದ್ದಳು. ದಿನ ಕಳೆದಂತೆ ಅತ್ತೆ ಮತ್ತು ನಾದಿನಿಯವರ ಹಿಂಸೆಯಲ್ಲಿ ಹೆಚ್ಚಳವಾಗುತ್ತಲೇ ಹೋಯಿತು. ಗಂಡನಲ್ಲಿ ಮನದ ಭಾವನೆಗಳನ್ನು ಹೇಳುವ ಅಂದರೆ, ಆತ ಬರುವುದೇ ತಡ ರಾತ್ರಿಯಲ್ಲಿ. ನಾನು ರೂಮಿಗೆ ಹೋದರೆ ನಾದಿನಿಯರು ಕದ್ದು ನೋಡುತ್ತಿದ್ದರು. ಸ್ನಾನ ಮಾಡಲು ಬಚ್ಚಲು ಕೋಣೆಗೆ ಹೋದರೆ, ಗೇಟ್ವಾಲನ್ನು ಕಟ್ಟಿ ನೀರು ಬರದಂತೆ ನೋಡಿ ಕೊಳ್ಳುತ್ತಿದ್ದರು. ‘ನಿನ್ನ ಮನೆಯವರು ಪುಡಿಗಾಸನ್ನು ಕೊಟ್ಟು ನಮ್ಮ ಫೈಸಲ್ ಗೆ ನಿನ್ನನ್ನು ಕಟ್ಟಿದ್ದಾರೆ. ಪಕ್ಕದ ಮನೆಗೆ ಬಂದ ಹೆಣ್ಣು ಮಗಳು ನಿನಗಿಂತಲೂ ಹೆಚ್ಚು ವರದಕ್ಷಿಣೆ ತಂದಿರುವಳೆಂದು’ ಅತ್ತೆ ಮತ್ತು ನಾದಿನಿ ಸಂದರ್ಭ ಸಿಕ್ಕಾಗಲೆಲ್ಲಾ ಹೇಳುತ್ತಿದ್ದರು. ಆಗೆಲ್ಲಾ ನಾನು ಏನೊಂದೂ ಮಾತಾಡುತ್ತಿರಲಿಲ್ಲ. ಯಾಕೆಂದರೆ, ನನ್ನಪ್ಪ ಅಷ್ಟು ಕೊಟ್ಟದ್ದೇ ಸಾಲ ಮಾಡಿ. ಅದಿನ್ನೂ ಸಂದಾಯವಾಗಿಲ್ಲ. ಇಷ್ಟಕ್ಕೂ ನನ್ನ ಕುತ್ತಿಗೆ, ಸೊಂಟ, ಕಿವಿಗೆ ಹಾಕಿದ್ದ 35 ಪವನು ಬಂಗಾರವನ್ನು ಮದುವೆಯಾದ ಒಂದು ವಾರದಲ್ಲೇ ಗಂಡ ಪಡಕೊಂಡಿದ್ದ. ಆ ಬಳಿಕ ಅದರ ಬಗ್ಗೆ ನಾನು ಒಮ್ಮೆಯೂ ಪ್ರಶ್ನಿಸಿಲ್ಲ. ಫೈಸಲ್ ಹೇಳಿಯೂ ಇಲ್ಲ. ಹೀಗಿರುವಾಗಲೇ ಒಂದು ದಿನ ಫೈಸಲ್ ಒಂದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ. ಗಲ್ಫ್ ಗೆ  ಹೋಗುವುದಕ್ಕಾಗಿ ವೀಸಾಕ್ಕೆ ದುಡ್ಡಿನ ಅಗತ್ಯವಿದೆ ಎಂದು ಸಮರ್ಥಿಸಿದ. ನನ್ನ ಕಣ್ಣು ಒದ್ದೆಯಾಗುತ್ತಿತ್ತು. ಅಪ್ಪನಲ್ಲಿ ಹೇಳುವುದಾದರೂ ಹೇಗೆ? ಮದುವೆಗೆ ಇನ್ನೊಬ್ಬಳು ತಂಗಿಯೂ ಇದ್ದಾಳೆ. ಅಪ್ಪನಿಗೆ ಹೊರೆಯಾಗುತ್ತಿದ್ದೆನೇನೋ ಅನ್ನುವ ನೋವು ನನ್ನನ್ನು ದಿನೇ ದಿನೇ ಸಾಯಿಸುತ್ತಿತ್ತು. ದಿನ ಕಳೆದಂತೆ ಗಂಡನ ಒತ್ತಾಯವು ಬೆದರಿಕೆಯಾಗಿ, ಬಳಿಕ ಹೊಡೆತವಾಗಿ ಮಾರ್ಪಟ್ಟಿತು. ಎಲ್ಲವನ್ನೂ ಅವುಡುಗಚ್ಚಿ ಸಹಿಸಿದೆ..
     ಕೆಲಸದ ಒತ್ತಡದಿಂದಲೋ ಏನೋ, ಆಗಾಗ ಕಾಡುತ್ತಿದ್ದ ಸೊಂಟ ನೋವು ವಿಪರೀತವಾಯಿತು. ಎರಡು ದಿನಗಳ ರಜೆಯ ಅನುಮತಿಯನ್ನು ಪಡೆದು ತವರು ಮನೆಗೆ ಬಂದೆ. ಮರಳುವಾಗ, ‘ದುಡ್ಡು ಪಡಕೊಂಡೇ ಬರಬೇಕು’ ಅನ್ನುವ ತಾಕೀತಿನೊಂದಿಗೆ ಗಂಡ ಕಳುಹಿಸಿಕೊಟ್ಟಿದ್ದ. ಮನೆಗೆ ಬಂದ ದಿನ ನನಗೆ ಮುಟ್ಟಾಯಿತು. ಮುಟ್ಟಿನ ಸಂದರ್ಭದಲ್ಲಿ ವಾಂತಿ, ಅಸಾಧ್ಯ ಹೊಟ್ಟೆ ನೋವು ನನಗೆ ಮಾಮೂಲು. ಆದ್ದರಿಂದ ಎರಡು ದಿನಗಳ ಬದಲು 5 ದಿನ ಕಳೆದು ಅಪ್ಪನೊಂದಿಗೆ ಗಂಡನ ಮನೆಗೆ ಮರಳಿದೆ. ಆ ರಾತ್ರಿ ನನ್ನ ಬದುಕಿನ ಕರಾಳ ರಾತ್ರಿಯಾಗಿತ್ತು. ನಾನು ತಲೆ ನೋವಿನಿಂದಾಗಿ ಮನೆಯ ಮಾಳಿಗೆಯ ಮಂಚದಲ್ಲಿ ಮಲಗಿದ್ದೆ. ಜಸೀರ, ನೂರ್ ಜಹಾನ್ ಮತ್ತು ಫೈಸಲ್ ನ  ತಮ್ಮ ಸಿರಾಜ್ ರು  ನನ್ನ ಬಳಿ ಬಂದರು. ‘ದುಡ್ಡು ತರದೇ ಇಲ್ಲಿ ಆರಾಮವಾಗಿ ಮಲಗಿರುವೆಯಾ ಪಿಶಾಚಿ’ ಎಂದು ನಿಂದಿಸಿ ಮಂಚದಿಂದ ನನ್ನನ್ನು ಎತ್ತಿ ಕೆಳಗೆ ಹಾಕಿದರು. ಫೈಸಲ್ ಅಲ್ಲೇ ಇದ್ದ. ‘ಪ್ಲೀಸ್, ಹಾಗೆ ಮಾಡ್ಬೇಡಿ ಅಂತ ಅವರಿಗೆ ಹೇಳಿ.. ನಾನು ಕೆಳಗೆ ಚಾಪೆ ಹಾಕಿ ಬೇಕಾದ್ರೂ ಮಲಗುತ್ತೇನೆ.. ಪ್ಲೀಸ್..’ ಎಂದು ನಾನು ಫೈಸಲ್ ರಲ್ಲಿ  ಗೋಗರೆದೆ. ಅವರು ಮಾತಾಡಲಿಲ್ಲ. ನನ್ನ ಎದೆ ಢವಗುಟ್ಟುತ್ತಿತ್ತು. ರಾತ್ರಿ ಬೇರೆ. ಅವರು ಮೂವರು ಸೇರಿಕೊಂಡು ನನ್ನ ಕಾಲುಗಳನ್ನು ಹಿಡಿದು ಮೆಟ್ಟಿಲುಗಳಲ್ಲಿ ಕೆಳಗೆ ದರದರನೆ ಎಳೆದುಕೊಂಡು ಹೋದರು. ಪ್ರತಿ ಮೆಟ್ಟಿಲಿಗೂ ನನ್ನ ತಲೆ ಹೊಡೆಯುತ್ತಿತ್ತು. ಆಘಾತದಿಂದ ಪ್ರಜ್ಞೆ ಕಳಕೊಂಡಂತಿದ್ದ ನನ್ನನ್ನು ಮೆಟ್ಟಿಲುಗಳ ಕೆಳಗೆ ಓಣಿಯಂತಿರುವ ಜಾಗದಲ್ಲಿ ಬಿಟ್ಟು ಅವರು ತಮ್ಮ ಕೋಣೆ ಸೇರಿಕೊಂಡರು. ಆ ದಿನ ಪೂರ್ತಿ ನಾನು ಮಲಗಿದ್ದು ಅಲ್ಲೇ. ಅದೊಂದು ದಿನ ಮಾತ್ರವಲ್ಲ, ಮುಂದಿನ ಒಂದು ವಾರಗಳ ಕಾಲ ನನ್ನ ಕೋಣೆ ಅದೇ ಓಣಿಯಾಗಿತ್ತು. ಅಡುಗೆ ಕೋಣೆಗೆ ಪ್ರವೇಶವಿಲ್ಲ. ಊಟ ಮಾಡುವಂತಿಲ್ಲ. ನೀರು ಕುಡಿಯುವುದಕ್ಕೂ ಬಿಡುತ್ತಿರಲಿಲ್ಲ. ಹಸಿವಿನಿಂದಾಗಿ ಏನಾದ್ರೂ ತಿನ್ನೋಣವೆಂದು ಅಡುಗೆ ಕೋಣೆಗೆ ಹೋದರೆ ‘ಕಳ್ಳಿ’ ಎಂದು ನಿಂದಿಸಿ ಬಲವಂತದಿಂದ ಹೊರಗೆ ದಬ್ಬುತ್ತಿದ್ದರು. ನಾನು ಒಂಟಿಯಾದೆ. ಅಪ್ಪನಿಗೆ ತಿಳಿಸೋಣವೆಂದರೆ ಗಲ್ಫಲ್ಲಿದ್ದರು. ಮಾಡಿದ ಸಾಲವನ್ನು ತೀರಿಸಬೇಕಲ್ಲವೇ? ಈ ಮಧ್ಯೆ ನನ್ನ ತಲೆಯೊಳಗೆ ಏನೋ ಆದಂತೆ ಅನಿಸುತ್ತಿತ್ತು. ಇಷ್ಟಕ್ಕೂ ನನ್ನ ಮೇಲೆ ನಾದಿನಿಯರು ಮಾಡಿದ ಹಲ್ಲೆ, ಹಿಂಸೆಯ ಬಗ್ಗೆ ನನ್ನ ಗಂಡ ಒಂದು ಮಾತೂ ಆಡಲಿಲ್ಲ. ಕನಿಷ್ಠ ನನ್ನನ್ನು ಸಾಂತ್ವನ ಪಡಿಸಲೂ ಇಲ್ಲ. ತಲೆಯೊಳಗಿನ ನೋವು ಅಸಾಧ್ಯ ಅನ್ನಿಸಿದಾಗ, ವೈದ್ಯರ ಬಳಿಗೆ ಕರಕೊಂಡು ಹೋಗಿ ಅಂತ ಫೈಸಲ್ ನಲ್ಲಿ ವಿನಂತಿಸಿದೆ. ಆತ ಕೇಳಲಿಲ್ಲ. ಈ ಮಧ್ಯೆ ಮಹರ್ ನ  ಸಂಕೇತವಾಗಿ ನನ್ನ ಕುತ್ತಿಗೆಯಲ್ಲಿದ್ದ ಸರವನ್ನು ಗಂಡ ತೆಗೆದುಕೊಂಡು ಹೋದ. ಯಾಕೆ ಎಂದು ನಾನು ಪ್ರಶ್ನಿಸಲಿಲ್ಲ. ಬಹುಶಃ ನನ್ನನ್ನು ವೈದ್ಯರ ಬಳಿಗೆ ಕರಕೊಂಡು ಹೋಗುವುದಕ್ಕಾಗಿರಬಹುದು ಅಂದುಕೊಂಡೆ. ಆದರೆ ಆತ ಮರಳಿದ್ದು ರಿಕ್ಷಾ ತುಂಬಾ ಸಾಮಾನುಗಳೊಂದಿಗೆ. ಆ ದಿನ ಮನೆಯವರೆಲ್ಲಾ ಬಿರಿಯಾನಿ ಮಾಡಿ ಹೊಟ್ಟೆ ತುಂಬಾ ಉಂಡರು. ಉಣ್ಣಲಿ. ಆದರೆ ನನಗಾದ ಸಂಕಟ ಏನೆಂದರೆ, ಒಂದೇ ಒಂದು ತುತ್ತು ಬಿರಿಯಾನಿಯನ್ನೂ ಅವರು ನನಗೆ ಕೊಡಲಿಲ್ಲ..
          ಮದುವೆಯಾಗಿ ಎರಡೂವರೆ ವರ್ಷವಾಗಿದ್ದರೂ ನನಗೆ ಮಕ್ಕಳಾಗಿರಲಿಲ್ಲ. ಮಕ್ಕಳಾಗುವುದಕ್ಕೆ ಮನಸ್ಸಿಗೆ ತೃಪ್ತಿ ಇರಬೇಕಲ್ಲವೇ? ಮಕ್ಕಳಾಗದ ನೆಪವನ್ನು ಮುಂದಿಟ್ಟು ಅತ್ತೆ ಮತ್ತು ನಾದಿನಿಯರು ನನಗೆ ಬಿಳಿ ಹುಡಿಯೊಂದನ್ನು ತಿನ್ನಿಸಿದರು. ಆ ಬಳಿಕ ನನ್ನ ವರ್ತನೆಯಲ್ಲೂ ಬದಲಾವಣೆಯಾಯಿತು. ತಲೆಗೆ ಬಿದ್ದ ಏಟು ಮತ್ತು ಈ ಬಿಳಿ ಹುಡಿಯ ಪ್ರಭಾವವೋ ಏನೋ, ಕೆಲವೊಮ್ಮೆ ಕಿರುಚುತ್ತಿದ್ದೆ, ಕೂಗುತ್ತಿದ್ದೆ. ಯಾಕೆ ಹೀಗೆ ಎಂದು ನನಗೇ ಗೊತ್ತಾಗುತ್ತಿರಲಿಲ್ಲ. ನನ್ನ ಈ ವಿಚಿತ್ರ ವರ್ತನೆಯನ್ನು ನೆಪವಾಗಿಟ್ಟುಕೊಂಡು ಹುಚ್ಚಿಯ ಪಟ್ಟ ಕಟ್ಟಿ 2010 ಎಪ್ರಿಲ್ 25ರಂದು ಗಂಡನ ಮನೆಯವರು ನನ್ನನ್ನು ತವರು ಮನೆಗೆ ಸೇರಿಸಿದರು. ವಿಷಯ ತಿಳಿದು ಅಪ್ಪ ಗಲ್ಫ್ ನಿಂದ  ಓಡೋಡಿ ಬಂದರು. ನನ್ನನ್ನು ನೋಡಿ ಕಣ್ಣೀರಿಳಿಸಿದರು. ನನ್ನ ಕಣ್ಣ ಗುಡ್ಡೆ ಒಳ ಸೇರಿದ್ದುವು. ತುಂಬಿದ್ದ ಕಪೋಲಗಳಲ್ಲಿ ಗುಳಿ ಬಿದ್ದಿದ್ದುವು. ನನಗೆ ಮದ್ದು ಮಾಡುವುದಕ್ಕಾಗಿ ಅಪ್ಪ ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿದರು. ತಲೆಗೆ ಏಟಾಗಿರುವುದು ಸ್ಕ್ಯಾನಿಂಗ್ ನಲ್ಲಿ ದೃಢಪಟ್ಟಿತು. ಸೈಕ್ರಿಯಾಟಿಸ್ಟ್ ಗೆ  ತೋರಿಸಿದರು. ಹೀಗಿರುವಾಗಲೇ ನನ್ನ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟೊಂದು ಬಂತು. ನನ್ನ ಗಂಡ ಕಳುಹಿಸಿದ ತಲಾಕ್ ಪತ್ರವಾಗಿತ್ತದು. ನನಗೆ ಹುಚ್ಚಿಯ ಪಟ್ಟ ಕಟ್ಟಿ ಆತ ನನ್ನಿಂದ ಬಿಡುಗಡೆ ಹೊಂದಿದ್ದ. ಕೆಲ ದಿನಗಳಲ್ಲೇ ಆತ ಇನ್ನೊಂದು ಮದುವೆಯಾಗಿರುವ ಸುದ್ದಿಯೂ ಸಿಕ್ಕಿತು. ನಾನು ಆಘಾತಗೊಳ್ಳಲಿಲ್ಲ. ಯಾಕೆಂದರೆ ನನ್ನ ಮೆದುಳು ಅದಾಗಲೇ ಆಘಾತಕ್ಕೆ ಒಳಗಾಗಿತ್ತು. ಈ ಆಘಾತದಿಂದ ಚೇತರಿಸುವ ಯಾವ ಸಾಧ್ಯತೆಯೂ ಇರಲಿಲ್ಲ. ಆದರೂ.. ಮನುಷ್ಯರು ಇಷ್ಟು ಕ್ರೂರಿಗಳಾಗುವುದಾದರೂ ಹೇಗೆ? ಹೆಣ್ಣಾಗಿ ನನ್ನ ಕಣ್ಣೀರು, ನೋವು, ಸಂಕಟವನ್ನು ಆ ಮನೆಯ ಹೆಣ್ಣು ಮಕ್ಕಳಿಗೆ ಅರ್ಥ ಮಾಡಿಕೊಳ್ಳಲು ಯಾಕೆ ಸಾಧ್ಯವಾಗಲಿಲ್ಲ? ನಾನು ಮಾಡಿದ ತಪ್ಪಾದರೂ ಏನು? ನನ್ನ ಮೇಲಾಗುತ್ತಿದ್ದ ದೌರ್ಜನ್ಯವನ್ನು ಹೆತ್ತವರಿಗೆ ತಿಳಿಸದೇ ಇದ್ದುದೇ? ಗಂಡ ಇವತ್ತಲ್ಲದಿದ್ದರೆ ನಾಳೆ ಸುಧಾರಿಸಿಯಾನು ಎಂದು ಆಸೆ ಪಟ್ಟದ್ದೆ? ಅಪ್ಪ ಅನುಮಾನದಿಂದ ಪ್ರಶ್ನಿಸಿದಾಗಲೂ ಸುಳ್ಳು ಹೇಳಿ ತಪ್ಪಿಸಿಕೊಂಡದ್ದೆ?
        ಅಮ್ಮಾ, ನನ್ನನ್ನು ಕ್ಷಮಿಸು. ನಿಮ್ಮಲ್ಲಿ ಹೇಳದೆ ನಾನು ತಪ್ಪು ಮಾಡಿಬಿಟ್ಟೆ.. ನನ್ನ ತಂಗಿಗೆ ಇಂಥ ಸಂಕಷ್ಟ ಬಾರದಂತೆ ನೋಡಿಕೊ.. ನನ್ನನ್ನು ಮರೆತು ಬಿಡು..
      ತನಗಾದ ಗಾಯವು ಉಲ್ಬಣಗೊಂಡು 2012 ಫೆ. 27ರಂದು ತೀರಿ ಹೋದ ಝಫರಿಯ, ಅದಕ್ಕಿಂತ ಕೆಲವು ತಿಂಗಳುಗಳ ಮೊದಲೇ ತನ್ನೆಲ್ಲಾ ಸಂಗತಿಗಳನ್ನು ತಾಯಿ ಆಯಿಷಾರಲ್ಲಿ ಹೀಗೆ ಹೇಳಿಕೊಂಡಿದ್ದಳು. ಆಯಿಷಾ ಅವೆಲ್ಲವನ್ನೂ ಹೇಳುತ್ತಾ ಗದ್ಗದಿತರಾಗುತ್ತಾರೆ. ಬಿಕ್ಕಳಿಸುತ್ತಾರೆ. ಅವರು ಕಣ್ಣು ಒದ್ದೆಯಾಗುತ್ತದೆ. ಸದ್ಯ ಫೈಸಲ್ ಗೆ  ಶಿಕ್ಷೆಯಾಗಬೇಕೆಂದು ಝಫರಿಯಳ ತಂದೆ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಹಾಗಿದ್ದರೂ ಅವರನ್ನು ಶೂನ್ಯವೊಂದು ಕಾಡುತ್ತಲೇ ಇದೆ. ಏನಿದ್ದರೂ ಝಫರಿ ಮರಳಿ ಬರುವುದಿಲ್ಲವಲ್ಲ..

20 comments:

 1. Daye enendu thiliyada raakshasara maneyayithu zafariya kalittaddu. Ivalannu Noisida, avamaanisida ellarannu allahu kaanutthale iddane. Thalmeyinda ella kastagalnnu anubhavisida zafariyalige, aghaathgonda zafariyala manemandige naale Allahana Asthaanadalli utthama prathifalavide. Faizal matthu aa maneya hennu pishachigala gathiyenu?

  ReplyDelete
 2. This comment has been removed by the author.

  ReplyDelete
 3. Hennina shaapada kanneerige kaaranavagiruva varadakshine neethige dikkaravirali...... hudugana hana anthasthina prabhavadinda thamma hennu makkalannu kroora kutumbakke bali needabedi please......

  ReplyDelete
 4. Ee Reeti Pidisida Faisal Mattu Avara Maneyavarige Shiksheyaagaleebeku. intha kroorigalinda allahanu namma samodayavannu rakshsali. ameen

  ReplyDelete
 5. nijavagiyu karulu hinduva kathe. ee samja dha ellaru sushikshitha radhaga ellavu sariyadheethu.

  ReplyDelete
 6. Allahu zafariya de swargathg yethpatatt

  ReplyDelete
 7. faizal must be hang till death.

  ReplyDelete
 8. allahu zafariyade swargathg ethpatatt

  ReplyDelete
 9. Faizal will going to pay for this cruelty...... Allah will give him a huge punishment...

  ReplyDelete
 10. nahido mondo sooledo makkalo ellarom thooki kollonu bevarsi halkat mairnghalo nadu roadl kall adchi kollonu..............

  ReplyDelete
 11. idakke karana ei samajada yuvakaru plz varadhakshineyannu virodisona bada hennu makkalige jivana kodona

  ReplyDelete
 12. faizal matthu avara kutumbadavarannu public roadnalli katti kallu hodibeku....we want saudi rules for this type of cruelty....

  ReplyDelete
 13. kanoonu krama nanthra,,,,modalu alliruvavaru seri avana kaikalu muriyiri,,,,,,,,,

  ReplyDelete
 14. http://www.facebook.com/photo.php?fbid=207929872692869&set=a.106966566122534.15161.100004275731827&type=1&theater

  ReplyDelete
 15. avarannu sayesudaralli enu prayojana illa zafariyalige madida retiyanne avarigu madabekuaaga e samudayadalli yaru anta tappu madodilla hagu zafariyala khaba vishala vagali endu nau allahanalli prartisona

  ReplyDelete
 16. ಗಮನ,
  ಮಸೂದೆಗಳು ಆಫ್ ಪಾವತಿಸಲು ಮತ್ತು 3% ಒಂದು ಅಗ್ಗದ ಬಡ್ಡಿದರದಲ್ಲಿ ಹೊಸ ಹಣಕಾಸು ನಿಮ್ಮ ಯೋಜನೆಗಳನ್ನು ಪ್ರಾರಂಭಿಸಲು ತ್ವರಿತ ಮತ್ತು ಅನುಕೂಲಕರ ಸಾಲದ ಅರ್ಜಿ. ಈ ಪಡೆಯುವಲ್ಲಿ ಆಸಕ್ತಿತೋರುತ್ತಿದ್ದೇವೆ ವೇಳೆ ಪ್ರಮಾಣಿತ, ನೋಂದಾಯಿತ ಮತ್ತು ಅಸಲಿ lender.You ಇಂದು ನನ್ನನ್ನು ಸಂಪರ್ಕಿಸಬಹುದು am ನಮ್ಮ ಕನಿಷ್ಠ ಸಾಲ ಪ್ರಸ್ತಾಪವನ್ನು ಮಾಹಿತಿ ಅಗತ್ಯವಿದೆ ಸಾಲ ಪ್ರಮಾಣದ elijahloanfirm@hotmail.com

  ReplyDelete
 17. ಸ್ವಾರ್ಥ ಮನೋಭಾವವು ಮನುಷ್ಯನನ್ನು ಎಷ್ಟು ಕೆಳಮಟ್ಟಕ್ಕೆ ಎಳೆದು ತರುತ್ತದೆ ಎಂಬುವುದಕ್ಕೆ ಇದು ತೆರೆದ ಕನ್ನಡಿ.

  http://salmanblgs8.blogspot.ae/2012/08/blog-post_4.html

  ReplyDelete
 18. ಹಲೋ
  ಈ ಶ್ರೀ Fredrick ಬ್ರೌನ್, ಖಾಸಗಿ ಸಾಲ ಸಾಲ ಯಾವುದೇ ಆರ್ಥಿಕ ಸಹಾಯ ಅಗತ್ಯ ಎಲ್ಲರಿಗೂ ಆರ್ಥಿಕ ಅವಕಾಶ ತೆರೆಯುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಲು ಆಗಿದೆ. ನಾವು ಸ್ಪಷ್ಟ ಹಾಗೂ ಅರ್ಥವಾಗುವ ನಿಯಮಗಳು ಮತ್ತು ಪರಿಸ್ಥಿತಿ ಒಂದು ವ್ಯಕ್ತಿಗಳು, ಸಂಸ್ಥೆಗಳು ಮತ್ತು ಕಂಪನಿಗಳು 2% ಬಡ್ಡಿದರದಲ್ಲಿ ಸಾಲ ನೀಡಿ. ನಲ್ಲಿ ಇಮೇಲ್ ಮೂಲಕ ಇಂದು ನಮ್ಮನ್ನು ಸಂಪರ್ಕಿಸಿ: (fedrickbrowninvestment@gmail.com)

  ಎರವಲುಗಾರನ ಡಾಟಾ

  1) ಪೂರ್ಣ ಹೆಸರು: .......................................................
  2) ರಾಷ್ಟ್ರ: ......................................................... ..
  3) ವಿಳಾಸ: ..........................................................
  4) ರಾಜ್ಯ: ಒಂದು ....................................... ..................... ..
  5) ಸೆಕ್ಸ್: ................................................................
  6) ವೈವಾಹಿಕ ಸ್ಥಿತಿ: .................................................
  7) ಉದ್ಯೋಗ: ................................................... ..
  8) ದೂರವಾಣಿ ಸಂಖ್ಯೆ: ................................................
  ಕೆಲಸದ ಸ್ಥಳದಲ್ಲಿ 9) ಪ್ರಸ್ತುತ ಸ್ಥಾನವನ್ನು: .....................
  10) ಮಾಸಿಕ ಆದಾಯ: .............................................
  11) ಸಾಲದ ಪ್ರಮಾಣ ಅಗತ್ಯವಿದೆ: .....................................
  12) ಸಾಲದ ಅವಧಿ: ................................................
  ಸಾಲ 13) ಉದ್ದೇಶ: .......................................... ..
  14) ಧರ್ಮ: ...................................................... ..
  15) ನೀವು ಮೊದಲು ................................. ಅನ್ವಯಿಸಿದ್ದಾರೆ

  ಧನ್ಯವಾದಗಳು,
  ಶ್ರೀ Fredrick

  ReplyDelete
 19. ನೀವು ವ್ಯಾಪಾರ ಮನುಷ್ಯ ಅಥವಾ ಮಹಿಳೆ ಬಯಸುವಿರಾ? ನೀವು ಆರ್ಥಿಕ ಬಯಸುವಿರಾ
  ಅವ್ಯವಸ್ಥೆ ಅಥವಾ ನಿಮ್ಮ ಆರಂಭಿಸಲು ಹಣ ಬೇಕು
  ಸ್ವಂತ ವ್ಯಾಪಾರ? ನೀವು ಸಾಲ ಬೇಕು
  ನಿಮ್ಮ ಸಾಲದ ನೆಲೆಗೊಳ್ಳಲು ಅಥವಾ ನಿಮ್ಮ ಮಸೂದೆಗಳು ಫಲ ಅಥವಾ
  ಒಂದು ಸಂತೋಷವನ್ನು ವ್ಯಾಪಾರ ಆರಂಭಿಸುವ?
  ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಮತ್ತು ನೀವು ಇವೆ
  ಕಷ್ಟ ಪಡೆಯಲು ಕಂಡುಹಿಡಿಯುವ ರಾಜಧಾನಿ /
  ಸ್ಥಳೀಯ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಸಾಲ?
  ನೀವು ಯಾವುದೇ ಸಾಲ ಅಥವಾ ಹಣಕಾಸು ಬೇಕು
  ಕಾರಣ?

  ನಾವು ಇಲ್ಲದೆ 2% ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತವೆ
  ಕ್ರೆಡಿಟ್ ಚೆಕ್, ನಾವು ವೈಯಕ್ತಿಕ ಸಾಲ, ಸಾಲ ನೀಡುತ್ತವೆ
  ಸಾಲ ಬಲವರ್ಧನೆ, ಅಪಾಯ
  ರಾಜಧಾನಿ, ವ್ಯಾಪಾರ ಸಾಲ, ಶೈಕ್ಷಣಿಕ ಸಾಲ,
  ಅಡಮಾನಗಳು ಅಥವಾ ಸಾಲ, ಕೆಲವು ಕಾರಣಕ್ಕಾಗಿ
  $ 1,000 ರಿಂದ $ 10,000,000 ವರೆಗೂ. ಈಗ ನಮಗೆ ಸಂಪರ್ಕಿಸಲಾಗುತ್ತದೆ
  johnholtprivateloancompany@gmail.com ರಲ್ಲಿ
  ಗೌರವದಾಯಕವಾಗಿ,
  ಜಾನ್ HOLT
  Email: johnholtprivateloancompany@gmail.com

  ReplyDelete
 20. ನೀವು ವೈಯಕ್ತಿಕ ಸಾಲ ಹುಡುಕುತ್ತಿರುವ, ಅಥವಾ ನೀವು ಬ್ಯಾಂಕ್ ಮೂಲಕ ಸಾಲ ನಿರಾಕರಿಸಿದರು. ನಾನು 2% ಬಡ್ಡಿ ಕಡಿಮೆ ಮತ್ತು ಒಳ್ಳೆ ಬಡ್ಡಿದರದಲ್ಲಿ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ಸಾಲ ನೀಡಲು. ಇಮೇಲ್ ಮೂಲಕ ನಮ್ಮನ್ನು ಸಂಪರ್ಕಿಸಿ: trustfundloanfirms@gmail.com

  ReplyDelete