ಅಮೇರಿಕದ ಲಾಸ್ ಏಂಜಲೀಸ್‍ನಲ್ಲಿ ನೆಲೆಸಿರುವ ಭಾರತ ಮೂಲದ ವಿಕ್ರಮ್ ಚೌಧರಿ ಎಂಬವರು ಯೋಗಾಸನದ ಮೇಲೆ ಅಮೇರಿಕದಿಂದ ಪೇಟೆಂಟ್ ಪಡಕೊಂಡಿರುವುದಕ್ಕೆ 2007ರಲ್ಲಿ ಭಾರತದ ಪಾರ್ಲಿಮೆಂಟ್‍ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತದೆ. ಅಮೇರಿಕದ ನಡೆಯು ಅತಿರೇಕದ್ದು ಎಂದು ಸದಸ್ಯರು ಟೀಕಿಸುತ್ತಾರೆ. ‘ವಿಕ್ರಮ್ ಯೋಗ ಎಂಪಯರ್' ಎಂಬ ಹೆಸರಲ್ಲಿ ಅಮೇರಿಕದಲ್ಲಿ ಯೋಗ ಕೇಂದ್ರಗಳನ್ನು ಹೊಂದಿರುವ ವಿಕ್ರಮ್‍ರು, ಯೋಗದ 26 ಆಸನಗಳ ಪೇಟೆಂಟ್, ಕಾಪಿರೈಟ್ ಮತ್ತು ಟ್ರೇಡ್ ಮಾರ್ಕ್ ಗಳ ಹಕ್ಕುಗಳನ್ನು ಪಡೆದುಕೊಂಡಿದ್ದರು. ಈ 26 ಆಸನಗಳನ್ನು ತಾನೇ ಸಂಶೋಧಿಸಿದ್ದಾಗಿ ಅವರು ಹೇಳಿಕೊಂಡಿದ್ದರು. ಇದರ ವಿರುದ್ಧ ಅಂದಿನ ಬಿಜೆಪಿ ವಕ್ತಾರ ವಿಜಯ್ ಕುಮಾರ್ ಮಲ್ಹೋತ್ರಾ ಮಾಧ್ಯಮಗಳ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರಲ್ಲದೇ ಯೋಗಕ್ಕೆ 5 ಸಾವಿರಗಳಷ್ಟು ಪುರಾತನ ಭಾರತೀಯ ಇತಿಹಾಸವಿದ್ದು, ವಿಕ್ರಮ್‍ರ ವಾದ ಅಸತ್ಯದಿಂದ ಕೂಡಿದ್ದು ಎಂದು ಹೇಳುತ್ತಾರೆ. ‘ಇಂಡಿಯನ್ ಗವರ್ನ್‍ಮೆಂಟ್ ಇನ್ ನಾಟ್ಸ್ ಓವರ್ ಯು.ಎಸ್. ಯೋಗ ಪೇಟೆಂಟ್ಸ್..’ ಎಂಬ ಹೆಸರಲ್ಲಿ ABC ನ್ಯೂಸ್ 2007 ಮೇ 22ರಂದು ಈ ಸುದ್ದಿಯನ್ನು ಪ್ರಕಟಿಸುತ್ತದೆ. ಇದರ ನಂತರ ಕೇಂದ್ರ ಸರಕಾರವು ಈ ಕುರಿತಂತೆ ಗಂಭೀರ ಕ್ರಮಗಳಿಗೆ ಮುಂದಾಗುತ್ತದೆ. 9 ಯೋಗ ಕೇಂದ್ರಗಳ ಯೋಗ ಗುರುಗಳು ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)ನ ಸುಮಾರು 200ರಷ್ಟು ವಿಜ್ಞಾನಿಗಳ ತಂಡವನ್ನು ರಚಿಸಿ ಪುರಾತನ ಯೋಗ ಆಸನಗಳನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ವಹಿಸುತ್ತದೆ. ಮಹಾಭಾರತ, ಭಗವದ್ಗೀತೆ ಮತ್ತು ಪತಂಜಲಿ ಯೋಗ ಸೂತ್ರಗಳೂ ಸೇರಿದಂತೆ ಪುರಾತನವಾದ 35 ಮೂಲ ಗ್ರಂಥಗಳಿಂದ ಯೋಗ ಆಸನಗಳನ್ನು ಸ್ಕ್ಯಾನ್ (Scan) ಮಾಡಿ ದಾಖಲಿಸಿಕೊಳ್ಳುವ ಏರ್ಪಾಡು ಮಾಡುತ್ತದೆ. 2009ರೊಳಗೆ 1500 ಯೋಗ ಆಸನಗಳ ದಾಖಲೀಕರಣ ಆಗಬಹುದು ಎಂದು CSIRನ ಮುಖ್ಯಸ್ಥ ಡಾ| ಗುಪ್ತಾ ಹೇಳುತ್ತಾರೆ. ಲಂಡನ್ನಿನ ದಿ ಟೆಲಿಗ್ರಾಫ್ ಪತ್ರಿಕೆಯು ಈ ಕುರಿತಂತೆ 2009 ಫೆ. 23ರಂದು ವಿವರಣಾತ್ಮಕ ಸುದ್ದಿಯನ್ನು ಪ್ರಕಟಿಸುತ್ತದೆ.
ಅಷ್ಟಕ್ಕೂ, ಯೋಗ ‘ಧರ್ಮರಹಿತ'ವೇ ಆಗಿರುತ್ತಿದ್ದರೆ ಯೋಗದ ಆಸನಗಳನ್ನು ಮಹಾಭಾರತ, ಭಗವದ್ಗೀತೆಯಂತಹ ಹಿಂದೂ ಧರ್ಮಗ್ರಂಥಗಳಿಂದ ಸ್ಕ್ಯಾನ್ ಮಾಡಿ ದಾಖಲಿಸಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಭಗವದ್ಗೀತೆಯು ಶ್ರೀ ಕೃಷ್ಣರ ಬೋಧನೆಗಳಾಗಿ ಗುರುತಿಸಿಕೊಂಡಿದೆ. ಈ ಗೀತೆಯಲ್ಲಿ ಕರ್ಮಯೋಗ, ಭಕ್ತಿಯೋಗ ಮತ್ತು ಜ್ಞಾನ ಯೋಗ ಎಂಬ ಮೂರು ರೀತಿಯ ಯೋಗವನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಭಗವದ್ಗೀತೆಯಲ್ಲಿ 18 ಅಧ್ಯಾಯಗಳು ಮತ್ತು 700 ವಚನ(ಶ್ಲೋಕ)ಗಳಿವೆ. ಪ್ರತಿ ಅಧ್ಯಾಯಗಳಿಗೂ ವಿಭಿನ್ನ ಯೋಗದ ಹೆಸರುಗಳನ್ನು ನೀಡಲಾಗಿದೆ ಎಂದು ನಂಬಲಾಗುತ್ತಿದೆ. ಕೆಲವು ತತ್ವಶಾಸ್ತ್ರಜ್ಞರು ಭಗವದ್ಗೀತೆಯನ್ನು 3 ಭಾಗಗಳಾಗಿ ವಿಂಗಡಿಸಿದ್ದು, ಮೊದಲ 6 ಅಧ್ಯಾಯಗಳು ಮತ್ತು ಅದರ 280 ವಚನಗಳು ಕರ್ಮಯೋಗಕ್ಕೆ ಸಂಬಂಧಿಸಿದವು ಎಂದು ಹೇಳುತ್ತಾರೆ. ಮಧ್ಯದ 6 ಅಧ್ಯಾಯಗಳು ಮತ್ತು 209 ವಚನಗಳು ಭಕ್ತಿಯೋಗ ಹಾಗೂ ಕೊನೆಯ 6 ಅಧ್ಯಾಯಗಳು ಮತ್ತು 211 ವಚನಗಳು ಜ್ಞಾನಯೋಗಕ್ಕೆ ಸಂಬಂಧಿಸಿದವು ಎಂದು ಹೇಳುತ್ತಾರೆ. ಮಹಾಭಾರತದ 12ನೇ ಅಧ್ಯಾಯದಲ್ಲಿ ನಿರೋಧ ಯೋಗದ ಪ್ರಸ್ತಾಪವಿದೆಯೆಂದು ಹೇಳಲಾಗುತ್ತದೆ. 'ಪತಂಜಲಿ'ಯ ಯೋಗ ಸೂತ್ರಕ್ಕಿಂತ ಮೊದಲೇ ಮೈತ್ರಾಯನಿಯ ಉಪನಿಷತ್‍ನಲ್ಲಿ ಪ್ರಾಣಾಯಾಮ, ಪ್ರತ್ಯಹರ, ಧ್ಯಾನ, ಧರಣಿ, ತರ್ಕ ಮತ್ತು ಸಮಾಧಿ ಯೋಗಗಳ ಪ್ರಸ್ತಾಪವಿರುವುದನ್ನು ವಿದ್ವಾಂಸರು ಉಲ್ಲೇಖಿಸುತ್ತಾರೆ. ಬೃಹದಾರಣ್ಯಕ ಉಪನಿಷತ್ ಮತ್ತು ಚಂದೋಗ್ಯ ಉಪನಿಷತ್‍ಗಳಲ್ಲಿ ಇವುಗಳ ಬಗ್ಗೆ ವಿವರಿಸಿರುವುದಾಗಿ ಹೇಳಲಾಗುತ್ತದೆ. ನಿಜವಾಗಿ, ಯೋಗ ಎಂಬ ಪದ ಮೊತ್ತ ಮೊದಲು ಬಳಕೆಯಾದುದೇ ಋಗ್ವೇದದಲ್ಲಿ. ‘ಸೂರ್ಯ ದೇವನಿಗೆ' ಮುಂಜಾನೆ ತನ್ನನ್ನು ಅರ್ಪಿಸಿಕೊಳ್ಳುವ ರೀತಿಯಲ್ಲಿ ಆ ಪದವನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. ಪತಂಜಲಿ ಯೋಗ ಸೂತ್ರವನ್ನು ಹಿಂದೂ ತತ್ವಶಾಸ್ತ್ರದ ಕೇಂದ್ರೀಯ ಭಾಗವೆಂದು ಉಲ್ಲೇಖಿಸಲಾಗುತ್ತಿದೆ. ಜ್ಞಾನ ಯೋಗ, ಭಕ್ತಿ ಯೋಗ, ಹಠ ಯೋಗ, ಲಯ ಯೋಗ, ಅಷ್ಟಾಂಗ ಯೋಗ.. ಹೀಗೆ ಯೋಗಗಳ ಪ್ರಕಾರಗಳಿಗೂ ಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ಆರಾಧನೆಗಳಿಗೂ ಬಿಡಿಸಲಾಗದ ನಂಟಿರುವುದು ರಹಸ್ಯವೇನೂ ಅಲ್ಲ. ಅಲ್ಲದೇ, ಯೋಗ ಎಂಬ ಸಂಸ್ಕ್ರಿತ ಪದಕ್ಕೆ ಸಂಪರ್ಕ ಎಂಬ ಅರ್ಥವೂ ಇದೆ. ದೇವರುಗಳೊಂದಿಗೆ `ಸಂಪರ್ಕ’ ಸಾಧಿಸುವ ಆರಾಧನೆಯೇ ಯೋಗ. ಹೀಗಿದ್ದೂ, ಯೋಗವನ್ನು ಕೇವಲ ವ್ಯಾಯಾಮವೆಂಬಂತೆ ಅಥವಾ ಅದಕ್ಕೂ ಧರ್ಮಕ್ಕೂ ಸಂಬಂಧವಿಲ್ಲವೆಂಬಂತೆ ಬಿಂಬಿಸು ವುದರ ಉದ್ದೇಶವೇನು? ಯೋಗ ಅಮೇರಿಕದಲ್ಲಿರಬಹುದು, ಇರಾನ್‍ನಲ್ಲಿ 200ರಷ್ಟು ಯೋಗ ಕೇಂದ್ರಗಳಿರಬಹುದು, ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸುವ ವಿಶ್ವಸಂಸ್ಥೆಯ ನಿಲುವನ್ನು 47ರಷ್ಟು ಮುಸ್ಲಿಮ್ ರಾಷ್ಟ್ರಗಳು ಬೆಂಬಲಿಸಿರಬಹುದು.. ಅದರರ್ಥ ಯೋಗ ಧರ್ಮರಹಿತ, ಜಾತ್ಯತೀತ ಮತ್ತು ಲೋಪರಹಿತ ಎಂದೇ? ಫೆ. 14ನ್ನು ಪ್ರೇಮಿಗಳ ದಿನವನ್ನಾಗಿ ಘೋಷಿಸಿದ್ದೂ ವಿಶ್ವಸಂಸ್ಥೆಯೇ. ವಿಶ್ವ ರಾಷ್ಟ್ರಗಳು ಇದನ್ನೂ ಬೆಂಬಲಿಸಿವೆ. ಹಾಗಂತ, ಅದು ಲೋಪ ರಹಿತವೇ, ಸರ್ವರೂ ಕಡ್ಡಾಯವಾಗಿ ಪಾಲಿಸಲೇಬೇಕಾದ ಆಚರಣೆಯೇ? ನಿಜ, ಯೋಗ ಇವತ್ತು ವ್ಯಾಪಾರೀಕರಣಗೊಂಡಿದೆ. 1960-70ರ ಬಳಿಕ ಯೋಗ ಭಾರತದಿಂದ ವಿದೇಶಕ್ಕೆ ಭಾರೀ ಪ್ರಮಾಣದಲ್ಲಿ ರಫ್ತಾಗಿದೆ. ಜಾರ್ಜ್ ಹ್ಯಾರಿಸನ್ ನಂತಹ ಸಂಗೀತಜ್ಞರು ಯುರೋಪಿಯನ್ ರಾಷ್ಟ್ರಗಳಲ್ಲಿ ಯೋಗದ ಪ್ರಚಾರಕ್ಕೆ ಧಾರಾಳ ಕೊಡುಗೆಯನ್ನು ನೀಡಿದ್ದಾರೆ. ಅಮೇರಿಕ ಮತ್ತು ಯುರೋಪ್‍ಗಳಲ್ಲಿ ಯೋಗ ಇವತ್ತು ದೊಡ್ಡದೊಂದು ಬಿಸಿನೆಸ್. ಅದರ ಆಸನಗಳು ಬದಲಾಗಿವೆ, ಮಂತ್ರಗಳು ಬದಲಾಗಿವೆ, ಭಗವದ್ಗೀತೆ, ಮಹಾಭಾರತ ಮತ್ತು ಪುರಾತನ ಭಾರತದ ಮೂಲ ಗ್ರಂಥಗಳ ಆಸನಗಳನ್ನು ತುಸು ಬದಲಿಸಿಯೋ ಅಥವಾ ಅದನ್ನೇ ನಕಲು ಮಾಡಿಯೋ ತಮ್ಮ ಸಂಶೋಧನೆಯೆಂಬಂತೆ ಹೇಳಿಕೊಂಡು ಪೇಟೆಂಟ್ ಪಡೆಯುವ ಸಂದರ್ಭಗಳು ಧಾರಾಳ ಸೃಷ್ಟಿಯಾಗುತ್ತಿವೆ. ಅಮೇರಿಕವೊಂದರಲ್ಲೇ ಯೋಗಕ್ಕೆ ಸಂಬಂಧಿಸಿದಂತೆ 130 ಪೇಟೆಂಟ್‍ಗಳು, 150 ಕಾಪಿರೈಟ್‍ಗಳು ಮತ್ತು 2300 ಟ್ರೇಡ್ ಮಾರ್ಕ್‍ಗಳ ಹಕ್ಕು ಸ್ವಾಮ್ಯತೆಯನ್ನು 2009ರಲ್ಲೇ ಪಡೆಯಲಾಗಿದೆ. ಭಾರತದಲ್ಲಿ ನಡೆಯುವಂತೆ ಪಾರ್ಕ್‍ಗಳಲ್ಲೋ ಸಾರ್ವಜನಿಕ ಸ್ಥಳಗಳಲ್ಲೋ ಉಚಿತವಾಗಿ ಪ್ರಾಣಾಯಾಮ, ಸೂರ್ಯ ನಮಸ್ಕಾರಗಳು ಈ ರಾಷ್ಟ್ರಗಳಲ್ಲಿ ನಡೆಯುತ್ತಿಲ್ಲ. ಅವರಿಗೆ ಅದೊಂದು ಮಿಲಿಯನ್ ಡಾಲರ್ ಬ್ಯುಸಿನೆಸ್. ವ್ಯಾಯಾಮದ ಹೆಸರಲ್ಲಿ ಯೋಗವನ್ನು ಅವರು ವಿವಿಧ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಾವೂ, ಯೋಗವನ್ನು ವ್ಯಾಖ್ಯಾನಿಸುವುದಕ್ಕೆ ಈ ವಿದೇಶಿ ಮಾನದಂಡವನ್ನೇ ಆಶ್ರಯಿಸಬೇಕೇ? ಯೋಗವನ್ನು ವ್ಯಾಯಾಮ ಎಂದು ಹೇಳುವವರಿಗೆ ಅದೊಂದು ವ್ಯಾಯಾಮ. ಇದು ಕೇವಲ ಯೋಗಾಸನಕ್ಕೆ ಮಾತ್ರ ಸಂಬಂಧಿಸಿ ಹೇಳಬೇಕಾದ್ದಲ್ಲ. ಹೆಚ್ಚಿನೆಲ್ಲ ಧಾರ್ಮಿಕ ಆಚರಣೆ, ಆರಾಧನೆಗಳಲ್ಲೂ ಈ ಬಗೆಯ ವ್ಯಾಯಾಮಗಳಿವೆ. ನಾವು ಅದನ್ನು ವ್ಯಾಯಾಮ ಎಂದು ವ್ಯಾಖ್ಯಾನಿಸಿದರೆ ಅದು ವ್ಯಾಯಾಮ. ಮುಸ್ಲಿಮರ ನಮಾಝನ್ನೂ ಈ ಬಗೆಯಲ್ಲಿ ವ್ಯಾಖ್ಯಾನಿಸಬಹುದು. ಶೃದ್ಧಾವಂತ ಮುಸ್ಲಿಮರಿಗೆ ನಮಾಝ್ ಎಂಬುದು ವ್ಯಾಯಾಮ ಅಲ್ಲ ಅಥವಾ ವ್ಯಾಯಾಮ ಎಂಬ ನೆಲೆಯಲ್ಲಿ ಅವರು ನಮಾಝ್ ಮಾಡುತ್ತಲೂ ಇಲ್ಲ. ಅದವರ ಆರಾಧನೆ. ಆದರೆ ವ್ಯಾಪಾರಿ ಮನೋಭಾವದವರಿಗೆ ಅದನ್ನು ವ್ಯಾಯಾಮದ ಸರಕಾಗಿ ಪರಿಚಯಿಸಬಹುದು. ಅದರ ಆಸನಗಳನ್ನು ಅದೇ ರೀತಿಯಲ್ಲೋ ಅಥವಾ ತುಸು ತಿರುವು-ಮುರುವು ಮಾಡಿಕೊಂಡೋ ಪ್ರಸ್ತುತಪಡಿಸಬಹುದು. ಅರಬಿಯಲ್ಲಿ ಹೇಳುವ ವಚನಗಳ ಬದಲಿಗೆ ಅವರವರದೇ ಆದ ಭಾಷೆಯಲ್ಲಿ, ಭಾವನೆಯಲ್ಲಿ ಅವರವರ ಇಷ್ಟ ಮಂತ್ರವನ್ನು ಜಪಿಸುವಂತೆ ಹೇಳಬಹುದು. ಅಲ್ಲದೇ ಯಾರಾದರೂ ಪೇಟೆಂಟ್ ಮಾಡಿಕೊಂಡು ಅದನ್ನು ಧರ್ಮರಹಿತಗೊಳಿಸಲೂಬಹುದು. ಬಹುಶಃ, ಯೋಗವನ್ನು ವ್ಯಾಯಾಮ ಎಂದು ಹೇಳುವವರು ಈ ಸೂಕ್ಷ್ಮ ಮತ್ತು ಬಹು ಮುಖ್ಯ ಅಂಶವನ್ನು ನಿರ್ಲಕ್ಷಿಸಿರುವಂತೆ ಕಾಣಿಸುತ್ತಿದೆ. ಹಿಂದೂಗಳಲ್ಲಿ ಯೋಗವನ್ನು ವ್ಯಾಯಾಮವಾಗಿ ಪರಿಗಣಿಸಿದವರಿರಬಹುದು. ಆದರೆ ಹೆಚ್ಚಿನವರು ‘ಯೋಗಿ’ಗಳಾಗುವುದಕ್ಕೆ ಧಾರ್ಮಿಕವಾದ ಅದರ ಹಿನ್ನೆಲೆಯೇ ಕಾರಣ. ಭಗವದ್ಗೀತೆಯಲ್ಲಿ ಯೋಗವಿದೆ, ಮಹಾಭಾರತದಲ್ಲಿ ಯೋಗದ ಪ್ರಸ್ತಾಪವಿದೆ, ಋಗ್ವೇದದಲ್ಲಿ ಅದು ಬಂದಿದೆ, ಹಿಂದೂ ದೇವರುಗಳ ವಿವಿಧ ಭಂಗಿಗಳಲ್ಲಿ ಯೋಗವಿದೆ.. ಹೀಗೆ ಆಧ್ಯಾತ್ಮಿಕವಾದ ಕಾರಣಗಳೊಂದಿಗೆ ಯೋಗವನ್ನು ಪ್ರೀತಿಸುವ ಮತ್ತು ಆಚರಿಸುವ ಮಂದಿಯೇ ಭಾರತದಲ್ಲಿ ಹೆಚ್ಚಿದ್ದಾರೆ. ನಿಜವಾಗಿ, ಯೋಗವು ಹಿಂದೂ ಧರ್ಮದೊಂದಿಗೆ ಮಾತ್ರ ಸಂಬಂಧವನ್ನು ಜೋಡಿಸಿಕೊಂಡಿರುವ ಆರಾಧನಾ ಪದ್ಧತಿ. ಯೋಗ ಎಂಬುದು ಬರೇ ಆಸನಗಳಲ್ಲ. ಅದರಲ್ಲಿ ಭಾವನಾತ್ಮಕತೆಯಿದೆ, ಆಧ್ಯಾತ್ಮಿಕ ಸಂವೇದನೆಯಿದೆ, ಹಿಂದೂ ಧರ್ಮದ ಆರಾಧನಾ ಚೈತನ್ಯವಿದೆ. ಆದರೆ, ಯೋಗವನ್ನು ಬರೇ ವ್ಯಾಯಾಮ ಎಂದು ಹೇಳುವವರು ಮೂಲಭೂತವಾದ ಈ ಸತ್ಯವನ್ನು ಅಡಗಿಸುತ್ತಿದ್ದಾರೆ. ಹಾಗಂತ, ಹಿಂದೂ ಧರ್ಮದಲ್ಲಿ ಗುರುತಿಸಿಕೊಳ್ಳದವರು ಯೋಗ ಮಾಡಬಾರದು ಎಂದಲ್ಲ. ಅದು ಅವರವರ ಆಯ್ಕೆ. ಆದರೆ ಯೋಗವನ್ನು ಸರ್ವರ ಮೇಲೆ ಹೇರುವುದಕ್ಕಾಗಿ ಅದನ್ನು ವ್ಯಾಯಾಮ ಎಂದು ಬಿಂಬಿಸುವುದರ ಬಗೆಗಷ್ಟೇ ನನ್ನ ತಕರಾರಿದೆ. ಹಾಗೆ ನೋಡಿದರೆ, ಮುಸ್ಲಿಮರ ನಮಾಝ್ ಕೂಡ ಸೂರ್ಯನ ಚಲನೆಯನ್ನು ಅವಲಂಬಿಸಿಕೊಂಡಿದೆ. ಸೂರ್ಯೋದಯದ ಮೊದಲು ಮತ್ತು ಸೂರ್ಯಾಸ್ತಮಾನದ ಬಳಿಕ ಹೀಗೆ ಎರಡು ನಮಾಝ್‍ಗಳಿವೆ. ಸೂರ್ಯ ನಡು ನೆತ್ತಿಗೇರಿದಾಗ ಒಂದು ನಮಾಝ್ ಇದೆ. ಸಂಜೆಯಾದಾಗಲೂ ಒಂದು ನಮಾಝ್ ಇದೆ. ಇದನ್ನು ಎತ್ತಿಕೊಂಡು ಇಸ್ಲಾಮಿನಲ್ಲಿ ಸೂರ್ಯಾರಾಧನೆಯಿದೆ ಎಂದು ವಾದಿಸಿದರೆ ಹೇಗಾಗಬಹುದು ಅಥವಾ ನಮಾಝï ಎಂಬುದು ಪ್ರಕೃತಿಯ ಚಲನೆಗಳಿಗೆ ಪೂರಕವಾಗಿ ಅಳವಡಿಸಿಕೊಳ್ಳಲಾದ ವ್ಯಾಯಾಮ ಎಂದು ವ್ಯಾಖ್ಯಾನಿಸಿದರೆ ಏನನಿಸಬಹುದು? ನಮಾಝನ್ನು ಬ್ಯುಸಿನೆಸ್ ಮಾಡಬಯಸುವವರಿಗೆ ಇಂಥ ಅವಕಾಶಗಳು ಧಾರಾಳ ಇವೆ. ಆದರೆ ನಿಜವಾಗಿಯೂ ನಮಾಝ್ ಹಾಗೆಯೋ? ಖಂಡಿತ ಅಲ್ಲ. ಇಲ್ಲಿ ಸೂರ್ಯನು ಸಮಯವನ್ನು ನಿರ್ಧರಿಸುವುದಕ್ಕಿರುವ ಒಂದು ಮಾಪಕವೇ ಹೊರತು ಆರಾಧನೆಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ. ಹಾಗೆಯೇ, ಯೋಗದ ಭಾಗವಾದ ಸೂರ್ಯ ನಮಸ್ಕಾರವೂ ವ್ಯಾಯಾಮ ಅಲ್ಲ ಎಂಬುದಕ್ಕೆ ಸಮರ್ಥನೆ ಸಿಗುವುದೂ ಇಲ್ಲೇ. ಸೂರ್ಯ ಇಲ್ಲಿ ಮಾಪಕ ಅಲ್ಲ, ಅದು ಆರಾಧನಾ ಕ್ರಮದ ಒಂದು ಬಹುಮುಖ್ಯ ಭಾಗ. ಸೂರ್ಯ ನಮಸ್ಕಾರದಲ್ಲಿ ಸೂರ್ಯನನ್ನೇ ಆರಾಧಿಸಲಾಗುತ್ತದೆ. ಅಲ್ಲಿ ಸೂರ್ಯ ಭಕ್ತಿಯಿದೆ, ಶ್ರದ್ಧೆಯಿದೆ. ಈ ಶ್ರದ್ಧೆ ಮತ್ತು ಭಕ್ತಿಗೆ ಧಾರ್ಮಿಕ ಸ್ಫೂರ್ತಿಯೇ ಕಾರಣವಾಗಿದೆ. ಆದ್ದರಿಂದಲೇ,
ಯೋಗದಿಂದ ಸೂರ್ಯ ನಮಸ್ಕಾರವನ್ನು ಕೈಬಿಟ್ಟ ಕೂಡಲೇ ಯೋಗ ಧರ್ಮರಹಿತವಾಗುವುದಿಲ್ಲ. ಬದಲು ಅಂಥ ಕ್ರಮಗಳು ಯೋಗ ದಿನದ ಬಗ್ಗೆ ಮತ್ತು ಅದನ್ನು ಆಚರಿಸುವಂತೆ ಒತ್ತಡ ಹೇರುತ್ತಿರುವುದರ ಬಗ್ಗೆ ಅನುಮಾನಗಳನ್ನಷ್ಟೇ ಹೆಚ್ಚಿಸುತ್ತದೆ. ಅದರಲ್ಲೂ ಬಹುಸಂಖ್ಯಾತರ ಪ್ರಧಾನಿ ಎಂಬಂತೆ ನಡಕೊಳ್ಳುತ್ತಿರುವ ಮತ್ತು ಭಗವದ್ಗೀತೆಯನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡುತ್ತಿರುವ ನರೇಂದ್ರ ಮೋದಿಯವರು ಈ ಪ್ರಕ್ರಿಯೆಯ ಹಿಂದಿರುವುದು ಈ ಅನುಮಾನಗಳಿಗೆ ಇನ್ನಷ್ಟು ಬಲವನ್ನೂ ತುಂಬುತ್ತಿದೆ.