ಗುಜರಾತ್‍ನ ಗಿರ್ ಸೋಮನಾಥ ಜಿಲ್ಲೆಯ ಉನಾ ಎಂಬ ಪ್ರದೇಶಕ್ಕೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಎಂಬ ಗ್ರಾಮಕ್ಕೂ ನಡುವೆ ನೂರಾರು ಕಿಲೋ ಮೀಟರ್‍ಗಳಷ್ಟು ಅಂತರವಿದೆ. ಉನಾದಲ್ಲಿ ನಾಲ್ವರು ದಲಿತ ಯುವಕರನ್ನು ಕಾರ್‍ಗೆ ಕಟ್ಟಿಹಾಕಿ ಥಳಿಸಲಾದ ಘಟನೆ ಜುಲೈ 11ರಂದು ನಡೆದಿದ್ದರೆ ಹೆಬ್ರಿಯಲ್ಲಿ ಪ್ರವೀಣ್ ಪೂಜಾರಿಯನ್ನು ಥಳಿಸಿ ಕೊಲ್ಲಲಾದ ಘಟನೆ ನಡೆದದ್ದು ಆಗಸ್ಟ್ 17 ರಂದು. ಇವೆರಡರ ನಡುವೆಯೂ ಸುಮಾರು 36 ದಿವಸಗಳ ವ್ಯತ್ಯಾಸ ಇದೆ. ಆದರೆ, ಈ ವ್ಯತ್ಯಾಸಗಳನ್ನು ಹೊರತು ಪಡಿಸಿದರೆ ಉಳಿದಂತೆ ಈ ಎರಡೂ ಘಟನೆಗಳಲ್ಲಿ ಪರಸ್ಪರ ಹೋಲಿಕೆಗೆ ಸಿಗುವ ಒಂದಕ್ಕಿಂತ ಹೆಚ್ಚು ಅಂಶಗಳಿವೆ.
1. ಎರಡೂ ಕಡೆ ಥಳಿತಕ್ಕೆ ಒಳಗಾದವರು ದಲಿತ ಮತ್ತು ಹಿಂದುಳಿದ ಜಾತಿಗೆ ಸೇರಿದವರು.
2. ಥಳಿಸಿದವರು ಕೂಡ ಅವೇ ಜಾತಿಗಳನ್ನು ಪ್ರತಿನಿಧಿಸುವವರು.
3. ಎರಡೂ ಘಟನೆಗಳಲ್ಲಿ ಸುಮಾರು 50 ರಷ್ಟು ಮಂದಿ ಜೈಲು ಪಾಲಾಗಿದ್ದಾರೆ.
4. ಆದರೆ ಗೋ ರಕ್ಷಣೆ ಎಂಬ ಅಮಲುಭರಿತ ಹೆಸರಿನಲ್ಲಿ ಒಟ್ಟುಗೂಡಿಸಿ ಇವರನ್ನು ಛೂ ಬಿಟ್ಟವರಲ್ಲಿ ಯಾರೂ ಇವರನ್ನು ಸಮರ್ಥಿಸಿ ಚಳವಳಿ ನಡೆಸಿಲ್ಲ. ಪ್ರತಿಭಟನೆಯನ್ನೂ ಏರ್ಪಡಿಸಿಲ್ಲ. ಆದರೆ, ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋರಕ್ಷಕರು ಮುಹಮ್ಮದ್ ಅಖ್ಲಾಕ್ ಎಂಬವರನ್ನು ಹತ್ಯೆ ನಡೆಸಿದ್ದನ್ನು ಬೆಂಬಲಿಸಲು ಮತ್ತು ಸಮರ್ಥಿಸಿಕೊಳ್ಳಲು ಬಿಜೆಪಿಯ ಸಂಸದರೇ ಮುಂದೆ ಬಂದಿದ್ದರು. ಉನಾ ಮತ್ತು ಹೆಬ್ರಿ ಈ ಎರಡೂ ಘಟನೆಗಳಿಗೆ ಗೋವೇ ಕೇಂದ್ರೀಯ ವಿಷಯ ಆಗಿದ್ದರೂ ಬಿಜೆಪಿಯ ಯಾವೊಬ್ಬ ಸಂಸದನೂ ಶಾಸಕನೂ ಗೋರಕ್ಷಕರನ್ನು ಬೆಂಬಲಿಸಿ ಹೇಳಿಕೆ ಕೊಡಲಿಲ್ಲ. ಈ ಮಂದಿಯ ಮನೆಗಳಿಗೆ ಬಹಿರಂಗವಾಗಿ ಭೇಟಿಕೊಡಲಿಲ್ಲ. ಎಲ್ಲೂ ಯಾವ ವೇದಿಕೆಯಲ್ಲೂ ಈ ಮಂದಿಗೆ ಸಾಂತ್ವನವನ್ನು ವ್ಯಕ್ತಪಡಿಸಲಿಲ್ಲ. ಒಂದು ರೀತಿಯಲ್ಲಿ, ಈ ಎರಡೂ ಘಟನೆಗಳಲ್ಲಿ ಜೈಲು ಪಾಲಾದ 50 ರಷ್ಟು ಹಿಂದುಳಿದ- ದಲಿತ ಜನಾಂಗದ ಯುವಕರನ್ನು ಅಸ್ಪೃಶ್ಯಗೊಳಿಸಲಾಗಿದೆ. ಎಲ್ಲಿಯವರೆಗೆ ಅವರು ಸಮಾಜದಿಂದ ತಿರಸ್ಕ್ರತಗೊಂಡರೆಂದರೆ, ಅವರನ್ನು ಈ ಕೃತ್ಯಕ್ಕೆ ದೂಡಿದವರೇ ಬಹಿರಂಗವಾಗಿ ಅವರ ಬೆಂಬಲಕ್ಕೆ ನಿಲ್ಲಲಾರದಷ್ಟು. ಹಾಗಂತ, ಈ ಯುವಕರ ಮನೆ-ಮಂದಿಯೆಲ್ಲಾ ಅವರ ಚಟುವಟಿಕೆಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳುವಂತಿಲ್ಲ. ಗೋವಿನ ಹೆಸರಲ್ಲಿ ಅವರನ್ನು ದುಷ್ಕರ್ಮಕ್ಕೆ ಬಳಸಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಸಂಘಟನೆಗಳ ಬಗ್ಗೆ ಅವರಲ್ಲಿ ದೂರುಗಳಿರಬಹುದು. ತಮ್ಮ ಮಗ ಕ್ರಿಮಿನಲ್ ಆರೋಪದೊಂದಿಗೆ ಜೈಲಿನಲ್ಲೋ ತಲೆಮರೆಸಿಕೊಂಡೋ ಬದುಕುವುದು ಮತ್ತು ಆತನನ್ನು ಅದಕ್ಕೆ ಪ್ರೇರೇಪಿಸಿದವರ ಮಕ್ಕಳು ಪ್ರೊಫೆಸರ್, ಡಾಕ್ಟರ್, ಇಂಜಿನಿಯರ್, ಐಟಿ ತಜ್ಞರಾಗಿ ಎಲ್ಲೋ ದೂರದಲ್ಲಿ ಸುರಕ್ಷಿತವಾಗಿ ಪತ್ನಿ-ಮಕ್ಕಳು-ಕುಟುಂಬ ಎಂದೆಲ್ಲಾ ಆರಾಮವಾಗಿ ಬದುಕುವುದು ಅವರೊಳಗನ್ನು ಕಾಡುತ್ತಿರಬಹುದು. ‘ಗೋರಕ್ಷಣೆಗೆ ತಮ್ಮ ಮಕ್ಕಳೇ ಯಾಕೆ ಬೇಕು..’ ಎಂಬ ಪ್ರಶ್ನೆ ಅವರಲ್ಲೂ ಇರಬಹುದು. ಮಾಧ್ಯಮ ಕ್ಯಾಮರಾದ ಕಣ್ಣಿಗೆ ಸಿಕ್ಕದಂತೆ ಕದ್ದು ಮುಚ್ಚಿ ಅವರ ಮನೆಗೆ ಭೇಟಿ ಕೊಟ್ಟಿರಬಹುದಾದ ನಾಯಕರಲ್ಲಿ ಹೆತ್ತವರು ಈ ಪ್ರಶ್ನೆಯನ್ನು ಕೇಳಿರಲೂಬಹುದು. ಸದ್ಯದ ಸವಾಲು ಏನೆಂದರೆ, ಈ ದಮನಿತರನ್ನು ನಾವು ಒಂದೇ ಬಿಂದುವಿನೊಳಗೆ ಕರೆತರುವುದು ಹೇಗೆ? ಜಾಗತೀಕರಣದ ಯೂಸ್ ಆಂಡ್ ಥ್ರೋ ನೀತಿಯನ್ನು ಅತ್ಯಂತ ಸಮರ್ಪಕವಾಗಿ ತಮ್ಮ ಮೇಲೆ ಪ್ರಯೋಗಿಸಲಾಗುತ್ತಿದೆ ಎಂಬುದನ್ನು ಅವರಿಗೆ ಅರ್ಥಮಾಡಿಸುವುದು ಹೇಗೆ? ಈ ಹಿಂದೆ ಹುಟ್ಟಿನ ಆಧಾರದಲ್ಲಿ ಯಾರು ಅಧಿಕಾರಯುತವಾಗಿ ದಮನಿಸುತ್ತಿದ್ದರೋ ಅವರೇ ಇವತ್ತು ಗೋವಿನ ನೆಪದಲ್ಲಿ ಅದೇ ದಮನ ಕಾರ್ಯವನ್ನು ಚಾಲ್ತಿಯಲ್ಲಿರಿಸಿದ್ದಾರೆ ಎಂಬ ಅರಿವನ್ನು ಮೂಡಿಸು ವುದು ಹೇಗೆ? ಅಷ್ಟಕ್ಕೂ,
ಉನಾ ಘಟನೆಯನ್ನು ಖಂಡಿಸಿ ಗುಜರಾತ್‍ನಲ್ಲಿ ಜಿಗ್ನೇಶ್ ಮೇವಾನಿ ಆಯೋಜಿಸಿದ ಪ್ರತಿಭಟನಾ ಚಳವಳಿಯ ಯಶಸ್ಸಿನ ಹಿಂದೆ ಅಲ್ಲಿಯದ್ದೇ ಆದ ಸಮಸ್ಯೆಗಳ ಪಾಲು ಖಂಡಿತ ಇದೆ. ಭಾರತದ ಒಟ್ಟು ಜನಸಂಖ್ಯೆಯ 2.33% ಮಂದಿ ದಲಿತರು ಮಾತ್ರವೇ ಗುಜರಾತ್‍ನಲ್ಲಿದ್ದರೂ ದೇಶದಲ್ಲಿಯೇ ಅತ್ಯಂತ ಹೆಚ್ಚು ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿರುವುದು ಅಲ್ಲಿಯೇ ಎಂಬುದೂ ಈ ಕಾರಣಗಳಲ್ಲಿ ಒಂದು ಆಗಿರಬಹುದು. ಗುಜರಾತ್‍ನಲ್ಲಿ ಇವತ್ತಿಗೂ ಶೇ. 90 ರಷ್ಟು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ. 54% ಸರಕಾರಿ ಶಾಲೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವುದಕ್ಕೆ ಪ್ರತ್ಯೇಕ ಸ್ಥಳಗಳಿವೆ. 2010ರಲ್ಲಿ ಅಹ್ಮದಾಬಾದ್‍ನಲ್ಲಿ ನಡೆದ ಸಭೆಯೊಂದರಲ್ಲಿ ಬಹಿರಂಗಪಡಿಸಲಾದ ಮಾಹಿತಿಯೊಂದು ಇದಕ್ಕಿಂತಲೂ ಭಯಾನಕ. ಸೌರಾಷ್ಟ್ರದ ಸುಮಾರು 1500 ದಲಿತ ಮಕ್ಕಳನ್ನು ಶೌಚಾಲಯ ಸ್ವಚ್ಛಗೊಳಿಸಲು ಶಾಲೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಲಾಗಿತ್ತು. ದಲಿತರಿಗೆಂದೇ ಮೀಸಲಿರಿಸಲಾಗಿದ್ದ ಭೂಮಿಯಲ್ಲಿ ಬಹುತೇಕವೂ ಮಿಕ್ಕವರ ಪಾಲಾಗಿದೆ. ಗೋಮಾಳಗಳು ಒತ್ತುವರಿಯಾಗಿವೆ. ಕನಿಷ್ಠ ವೇತನವಾಗಿ ನಿಗದಿಗೊಳಿಸಲಾಗಿರುವ 175 ರೂಪಾಯಿಯ ಬದಲು ದಲಿತರು 50-60 ರೂಪಾಯಿಯನ್ನಷ್ಟೇ ಕೂಲಿಯಾಗಿ ಪಡೆಯುತ್ತಲೂ ಇದ್ದಾರೆ...' ಇವು ಮತ್ತು ಇಂಥ ಇನ್ನಿತರ ತಳ ಮಟ್ಟದ ಕಾರಣಗಳು ಜಿಗ್ನೇಶ್ ಚಳುವಳಿಯನ್ನು ಯಶಸ್ವಿಯಾಗಿಸಿರಬಹುದು. ಹಾಗಂತ, ಕರ್ನಾಟಕವು ಗುಜರಾತ್‍ನ ತದ್ರೂಪವೇನೂ ಅಲ್ಲವಲ್ಲ. ಇಲ್ಲಿ ದಲಿತರು ಮತ್ತು ದಮನಿತರು ಸುಮಾರು ಎರಡು ಕೋಟಿಯಷ್ಟಿದ್ದಾರೆ ಎಂಬುದು ನಿಜ. ಆದರೆ ಈ ಬೃಹತ್ ಜನಸಂಖ್ಯೆಯ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಗುಜರಾತ್‍ಗೆ ಹೋಲಿಸಿದರೆ ವ್ಯತ್ಯಾಸಗಳಿವೆ. ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡಲಾದ ಉಡುಪಿ ಜಿಲ್ಲೆ ಮತ್ತು ಅದರ ಪಕ್ಕದ ದ.ಕ. ಜಿಲ್ಲೆಗಳನ್ನೇ ಎತ್ತಿಕೊಳ್ಳಿ. ಸತ್ತ ದನದ ಚರ್ಮ ಸುಲಿಯುವ ದಲಿತರು ಈ ಎರಡು ಜಿಲ್ಲೆಗಳಲ್ಲಿ ಕಾಣಸಿಗುವುದು ಶೂನ್ಯ ಅನ್ನುವಷ್ಟು ಕಡಿಮೆ. ‘ತಾನು ಕೋಳಿ ಪದಾರ್ಥವನ್ನು ಸೇವಿಸುತ್ತೇನೆ.. ’ ಅನ್ನುವಷ್ಟೇ ಸಹಜವಾಗಿ ‘ತಾನು ದನದ ಮಾಂಸದ ಪದಾರ್ಥವನ್ನು ಸೇವಿಸುತ್ತೇನೆ.. ’ ಎಂದು ಹೇಳುವ ದಲಿತರು ಅಪರೂಪವಾಗುತ್ತಿದ್ದಾರೆ. ಹಾಗಂತ, ಅವರು ಅದನ್ನು ಸೇವಿಸುತ್ತಿಲ್ಲ ಎಂದಲ್ಲ. ಆದರೆ ಹೇಳುವುದಕ್ಕೆ ಎಲ್ಲೋ ಏನೋ ಮುಜುಗರ. ಒಂದು ಬಗೆಯ ಅಪರಾಧಿ ಭಾವ. ಅದೇವೇಳೆ, ಈ ದಮನಿತ ಸಮುದಾಯ ಪರಂಪರಾಗತವಾಗಿ ನಡಕೊಂಡು ಬರುತ್ತಿರುವ ದೈವಗಳು, ಭೂತಗಳು ಇವತ್ತು ಈ ಹಿಂದಿಗಿಂತಲೂ ಅದ್ದೂರಿಯಾಗಿ ಆಚರಣೆಗೆ ಒಳಗಾಗುತ್ತಿವೆ. ಭೂತ ಕೋಲಗಳು ವಿಜೃಂಭಣೆಯಿಂದ ನಡೆಯುತ್ತಿವೆ. ಆದರೆ ಅದರ ಸ್ವರೂಪ ಬದಲಾಗಿದೆ. ಪರಂಪರೆಯ ಯಾವ ಸಂಬಂಧವೂ ಇಲ್ಲದೇ ಅವೆಲ್ಲ ಇನ್ನಾವುದೋ ಆಚರಣೆಯ ಪ್ರಭಾವಕ್ಕೆ ಒಳಗಾಗಿ ಬಿಟ್ಟಿವೆ. ದಲಿತ ಮತ್ತು ದಮನಿತ ಸಮುದಾಯದ ಒಂದೊಂದೇ ಆಚರಣೆ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳು ತನ್ನ ಹುಟ್ಟು ಸತ್ಯದಿಂದ ಕಳಚಿಕೊಂಡು ದಮನಿಸಿದವರ ಪ್ರಭಾ ವಲಯದೊಳಕ್ಕೆ ಸೇರಿಕೊಳ್ಳುತ್ತಿದೆ. ಅಲ್ಲಿಂದ ಕಡ ತಂದೋ ಅಥವಾ ಅವರ ನಿರ್ದೇಶನದ ಪ್ರಕಾರವೋ ಅಥವಾ ಅವರದೇ ನಾಯಕತ್ವದಲ್ಲೋ ಒಟ್ಟು ಕಾರ್ಯಕ್ರಮಗಳು ನಡೆಯತೊಡಗಿವೆ. ಒಂದು ಕಾಲದಲ್ಲಿ ದನದ ಮಾಂಸ ತಮ್ಮ ಮೆನುವಿನಲ್ಲಿ ಸಹಜವಾಗಿದ್ದರೂ ಇವತ್ತು ಅದನ್ನು ಮೆನುವಿನ ಭಾಗವೆಂದು ಹೇಳಲು ಹಿಂಜರಿಕೆ ಕಾಣಿಸುತ್ತಿರುವುದರ ಹಿಂದೆ ಈ ಪಲ್ಲಟದ ಹಿನ್ನೆಲೆಯಿದೆ. ಆದರೆ ಈ ಸಮುದಾಯದ ಮಲ ಎತ್ತುವ ಪರಂಪರಾಗತ ವೃತ್ತಿಯನ್ನು ಅಧಮ ಎಂದು ಸಾರಲೋ ಅಥವಾ ಅವರನ್ನು ಸಬಲೀಕರಣಗೊಳಿಸಲೋ ಇವತ್ತಿಗೂ ಈ ಬಳಸಿಕೊಳ್ಳುತ್ತಿರುವವರು ಮುಂದಾಗಿಲ್ಲ. ದನದ ಬಗ್ಗೆ ಪವಿತ್ರತೆಯ ಪ್ರಶ್ನೆಯನ್ನು ಬೆಳೆಸಿದಂತೆಯೇ ಮಲ ಎತ್ತುವ ವೃತ್ತಿಗೆ ಬಹಿಷ್ಕಾರ ಹಾಕುವಂತೆ ಅವರು ಹೋರಾಟ ನಡೆಸಿದ ಉದಾಹರಣೆಯಿಲ್ಲ. ದಲಿತ ಸಮುದಾಯದ ಮಕ್ಕಳು ಇವತ್ತಿಗೂ ದೊಡ್ಡ ಸಂಖ್ಯೆಯಲ್ಲಿ ಸರಕಾರಿ ಶಾಲೆಗಳನ್ನೇ ಆಶ್ರಯಿಸಿ ಕೊಂಡಿದ್ದಾರೆ. ಅದೇವೇಳೆ, ಇವರನ್ನು ದೇಶಪ್ರೇಮ ಮತ್ತು ಗೋಪ್ರೇಮದ ಹೋರಾಟಕ್ಕೆ ತಯಾರುಗೊಳಿಸುವವರ ಮಕ್ಕಳು ಖಾಸಗಿ ಶಾಲೆಗೆ ಟೈ-ಕೋಟು, ಬೂಟುಗಳನ್ನು ಏರಿಸಿಕೊಂಡು ಹೋಗುತ್ತಲಿದ್ದಾರೆ. ಸರಕಾರದ ಉನ್ನತ ಹುದ್ದೆಗಳಲ್ಲಿ, ಐಟಿ-ಬಿಟಿ ಉದ್ಯೋಗಿಗಳಲ್ಲಿ ಎಷ್ಟು ಮಂದಿ ದಮನಿತರು ಇದ್ದಾರೆ ಎಂಬ ಬಗ್ಗೆ ನಡೆಸಲಾದ ಅನೇಕಾರು ಸರ್ವೇಗಳು ಹೇಳಿರುವ ಫಲಿತಾಂಶ ಒಂದೇ- ಆ ಉದ್ಯೋಗಗಳೆಲ್ಲ ದಮನಿತರಿಗೆ ದಕ್ಕುತ್ತಲೇ ಇಲ್ಲ.’ ಇವತ್ತು ಕಾಲೇಜಿಗೆ ಹೋಗುವ ದಮನಿತ ಸಮುದಾಯದ ಮಕ್ಕಳ ಮೇಲೂ ಕ್ರಿಮಿನಲ್ ಕೇಸುಗಳಿವೆ. ಶಾಲೆಯಿಂದ ಹೊರಬಂದವರ ಮೇಲೂ ಇದೆ. ಕೆಲವರು ಜೈಲಲ್ಲಿದ್ದಾರೆ. ಅವರನ್ನೇ ನಂಬಿಕೊಂಡ ಮನೆಯವರು ಅತ್ತ ಜೈಲಿಗೂ ಇತ್ತ ಕೋರ್ಟಿಗೂ ನಡೆದು ಚಪ್ಪಲಿ ಸವೆಸುತ್ತಿದ್ದಾರೆ. ಈ ದೇಶದ ಕೋಟ್ಯಾಧಿಪತಿಗಳಲ್ಲಿ ಒಬ್ಬರಾದರೂ ದಲಿತರಿದ್ದಾರೋ ಎಂದು ಹುಡುಕಿದರೆ ಸಿಗಬಹುದಾದ ಫಲಿತಾಂಶ ಏನು? ಭೂಮಾಲಕರಲ್ಲಿ ಎಷ್ಟು ಮಂದಿ ದಲಿತರಿದ್ದಾರೆ? ಕಾಫಿ ತೋಟ, ರಬ್ಬರ್ ಪ್ಲಾಂಟ್, ಗದ್ದೆ, ಅಡಿಕೆ, ತೆಂಗು, ಕಬ್ಬು, ಆಲೂಗಡ್ಡೆ, ನೀರುಳ್ಳಿ... ಮುಂತಾಗಿ ವಿಶಾಲ ಕೃಷಿ ಭೂಮಿಯ ಒಡೆಯರಲ್ಲಿ ಎಷ್ಟು ಮಂದಿ ದಲಿತರು ಮತ್ತು ದಮನಿತರಿದ್ದಾರೆ? ಎಷ್ಟು ಮಂದಿ ದಲಿತ ಉದ್ಯಮಿಗಳಿದ್ದಾರೆ? ಬಿಲ್ಡರ್‍ಗಳಿದ್ದಾರೆ? ಭೂತಗನ್ನಡಿ ಹಿಡಿದು ಹುಡುಕಿದರೂ ದಲಿತರು ನಡೆಸುವ ಹೊಟೇಲ್‍ಗಳೇಕೆ ಕಾಣಿಸುತ್ತಿಲ್ಲ? ದಲಿತರ ಎಷ್ಟು ಕ್ಲಿನಿಕ್‍ಗಳಿವೆ, ಆಸ್ಪತ್ರೆಗಳಿವೆ, ಶಾಲೆಗಳಿವೆ?
ಬಹುಶಃ ಕರ್ನಾಟಕದಲ್ಲಿ ಅದರಲ್ಲೂ ಗೋರಕ್ಷಣೆಯ ಹೆಸರಲ್ಲಿ ಅತ್ಯಂತ ಹೆಚ್ಚು ಥಳಿತ ಘಟನೆಗಳು ನಡೆಯುತ್ತಿರುವ ದ.ಕ., ಉಡುಪಿ ಜಿಲ್ಲೆಗಳಲ್ಲಿ ದಲಿತ ಮತ್ತು ದಮನಿತ ಸಮುದಾಯಗಳೊಳಗೆ ಒಂದು ಬಗೆಯ ಶ್ಮಶಾನ ಮೌನವಿದೆ. ಈ ಹಿಂದೆ ಇವರನ್ನು ಯಾರು ದಮನಿಸುತ್ತಿದ್ದರೋ ಅವರೇ ಇವತ್ತೂ ಈ ಹಿಂದಿಗಿಂತಲೂ ಚೆನ್ನಾಗಿ ಶೋಷಿಸುತ್ತಿದ್ದಾರೆ. ಅದೇವೇಳೆ, ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ದಮನ ಕಾರ್ಯದಲ್ಲಿ ಅವರು ಕೆಲವು ರಾಜಿಗಳನ್ನೂ ಮಾಡಿಕೊಂಡಿದ್ದಾರೆ. ಈ ಜಿಲ್ಲೆಗಳಲ್ಲಿ ಅಸ್ಪೃಶ್ಯತೆ ಸುದ್ದಿಯಾಗುವುದಿಲ್ಲ. `ದೇವಸ್ಥಾನ ಪ್ರವೇಶಕ್ಕೆ ತಡೆ...' ಎಂಬ ಶೀರ್ಷಿಕೆಯಲ್ಲಿ ಸುದ್ದಿಗಳು ಪ್ರಕಟವಾಗುವುದಿಲ್ಲ. ನಿಜವಾಗಿ, ಮನುಷ್ಯ ಬಯಸುವ ಮೂಲಭೂತ ಸ್ವಾತಂತ್ರ್ಯ ಇದು. ಪ್ರತಿಯೋರ್ವ ವ್ಯಕ್ತಿಯೂ ತನ್ನನ್ನು ಪ್ರೀತಿಸುತ್ತಾನೆ. ಇತರರಿಂದ ಪ್ರೀತಿ ಮತ್ತು ಗೌರವವನ್ನು ಬಯಸುತ್ತಾನೆ. ಸದ್ಯ ದಮನಿತ ಸಮೂಹಕ್ಕೆ ಅವನ್ನು ಈ ಎರಡೂ ಜಿಲ್ಲೆಗಳಲ್ಲಿ ಬಹುತೇಕ ಒದಗಿಸಿಕೊಡಲಾಗಿದೆ. ಆದರೆ, ಅದರ ಬದಲಾಗಿ ಅವರಿಂದ ಗೌರವಾರ್ಹ ಬದುಕಿನ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲಾಗುತ್ತಿದೆ. ಅವರ ಶಿಕ್ಷಣ, ಉದ್ಯೋಗ, ಸಬಲೀಕರಣ... ಎಲ್ಲವೂ ಒಂದು ಬಗೆಯಲ್ಲಿ ಇವಕ್ಕೆ ಅಡವು ಇಟ್ಟಂಥ ಸ್ಥಿತಿ ಇದೆ. ಈ ಹಿಂದೆ ಅವರು ಗೆರಟೆಯಲ್ಲಿ ನೀರನ್ನೋ ಚಾವನ್ನೋ ಕುಡಿಯಬೇಕಾಗಿತ್ತು. ಇವತ್ತಿನ ಹೊಸ ತಲೆಮಾರಿಗೆ ಜೈಲಿನ ಅಲ್ಯೂಮಿನಿಯಂ ತಟ್ಟೆಯನ್ನು ಗೆರಟೆಗೆ ಪರ್ಯಾಯವಾಗಿ ನೀಡಲಾಗುತ್ತಿದೆ. ಶೈಕ್ಷಣಿಕವಾಗಿ ಅಂದೂ ಹಿಂದೆ, ಇಂದೂ ಹಿಂದೆ. ಅಂದು ರಸ್ತೆಯಲ್ಲಿ ಸರಿದು ನಿಲ್ಲಬೇಕಾದ ಒತ್ತಡ ಇದ್ದಿದ್ದರೆ ಇವತ್ತು ದಮನಿತ ಸಮೂಹದ ಅನೇಕ ಯುವ ತಲೆಮಾರಿಗೆ ಪೊಲೀಸರಿಂದ ತಲೆ ತಪ್ಪಿಸಿಕೊಂಡು ಬದುಕಬೇಕಾದ ಸ್ಥಿತಿ ಇದೆ. ಗೋರಕ್ಷಣೆಗೆ ಇವರನ್ನು ಬಳಸಿಕೊಳ್ಳುತ್ತಿರುವವರಲ್ಲಿ ಯಾರೂ ಕೂಡ ಈ ಯುವಕರ ತಂಗಿಯನ್ನೋ ಅಕ್ಕಳನ್ನೋ ತಮ್ಮ ಮನೆಯ ಸೊಸೆಯಾಗಿಸಿಕೊಂಡ ಯಾವ ಉದಾಹರಣೆಯೂ ಕಾಣಿಸುತ್ತಿಲ್ಲ..
ಸದ್ಯ ಕರ್ನಾಟಕದಲ್ಲಿ ಈ ಕುರಿತಂತೆ ಗಂಭೀರ ಚರ್ಚೆಯೊಂದು ನಡೆಯಬೇಕಾಗಿದೆ. ದಲಿತ ಮತ್ತು ದಮನಿತ ಸಮುದಾಯದ ಪ್ರತಿ ಮನೆ ಮನೆಯಲ್ಲೂ ಇಂಥದ್ದೊಂದು ಚರ್ಚೆ ಹುಟ್ಟು ಹಾಕುವ ಜನ ಚಳವಳಿ ರೂಪು ಪಡೆಯಬೇಕಾಗಿದೆ. ‘ದುಷ್ಕೃತ್ಯಗಳಿಗೆ ನಮ್ಮ ಮನೆಯ ಮಕ್ಕಳಿಲ್ಲ..’ ಎಂಬ ಬೋರ್ಡು ದಮನಿತ ಸಮುದಾಯದ ಪ್ರತಿ ಮನೆಯಲ್ಲೂ ತೂಗುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ.
ಅಕ್ಟೋಬರ್ 4 ರಂದು ಬೆಂಗಳೂರಿನಿಂದ ಹೊರಡುವ ಮತ್ತು ಪ್ರವೀಣ್ ಪೂಜಾರಿಯನ್ನು ಹತ್ಯೆ ನಡೆಸಲಾದ ಉಡುಪಿಯಲ್ಲಿ ಅಕ್ಟೋಬರ್ 9 ರಂದು ಒಟ್ಟುಸೇರಲಿರುವ ‘ಚಲೋ ಉಡುಪಿ ಜಾಥಾ’ವು ದಮನಿತರಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಗಲಿ ಎಂಬ ಹಾರೈಕೆ.

No comments:
Post a Comment