1. ಹಿಶಾಮ್ ಕಂದಿಲ್
2. ಮುಹಮ್ಮದ್ ಇಬ್ರಾಹೀಮ್
3. ಮುಹಮ್ಮದ್ ಕಾಮಿಲ್ ಅಮ್ರ್
4. ಮುಮ್ತಾಝ್ ಅಲ್ ಸಈದ್
5. ನಗ್ವಾ ಖಲೀಲ್
6. ಹಿಶಾಮ್ ಝಾಝು
ಸೇರಿದಂತೆ ಈಜಿಪ್ಟ್ ನ ಮುಹಮ್ಮದ್ ಮುರ್ಸಿಯವರ ಸಚಿವ ಸಂಪುಟದಲ್ಲಿದ್ದ 36 ಮಂದಿಯಲ್ಲಿ ಯಾರ ಮೇಲೆ ದೇಶದ್ರೋಹದ ಆರೋಪವಿತ್ತು? ಎಷ್ಟು ಮಂದಿ ಭಯೋತ್ಪಾದಕರಿದ್ದರು? ಇವರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಯನ್ನು ಸಮರ್ಥಿಸಿದವರು, ಅಲ್ ಕಾಯಿದಾವನ್ನು ಬೆಂಬಲಿಸಿದವರು, ಬಹುಸಂಸ್ಕೃತಿಯ ಸಮಾಜವನ್ನು ಒಪ್ಪದವರು ಇದ್ದರೆ? ಮಹಿಳಾ ಶಿಕ್ಷಣವನ್ನು ತಡೆದವರಿದ್ದರೆ? ಈಜಿಪ್ಟ್ ನ ಮಮ್ಮಿಯನ್ನು, ಚರ್ಚ್‍ಗಳನ್ನು ಅಥವಾ ವಿಗ್ರಹಗಳನ್ನು ಒಡೆಯುವುದು ಧರ್ಮಸಮ್ಮತ ಎಂದು ಹೇಳಿದ ಆರೋಪ ಯಾರ ಮೇಲಾದರೂ ಇತ್ತೇ? ಇಲ್ಲವಲ್ಲ. ಅದು ಬಿಡಿ- ರಕ್ಷಣೆ, ವಿದೇಶಾಂಗ, ಹಣಕಾಸು, ವಿಜ್ಞಾನ ಮತ್ತು ಸಂಶೋಧನೆ, ಸಂಸ್ಕ್ರಿತಿ, ಧಾರ್ಮಿಕ ವ್ಯವಹಾರ, ಕಾನೂನು.. ಮುಂತಾದ ಪ್ರಮುಖ ಖಾತೆಗಳನ್ನು ಮುರ್ಸಿ ಯಾರಿಗೆ ವಹಿಸಿಕೊಟ್ಟಿದ್ದರು? ಮುಸ್ಲಿಮ್ ಬ್ರದರ್ ಹುಡ್‍ನ ಕಾರ್ಯಕರ್ತರಿಗೋ? ತನ್ನ 36 ಮಂದಿಯ ಸಚಿವ ಸಂಪುಟಕ್ಕೆ ಫ್ರೀಡಮ್ ಆಂಡ್ ಜಸ್ಟೀಸ್ ಪಾರ್ಟಿಯಿಂದ ಕೇವಲ 6 ಮಂದಿಯನ್ನು ಮಾತ್ರ ಸೇರಿಸಿ, ಉಳಿದಂತೆ ಸ್ವತಂತ್ರ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಗಳನ್ನು ಅವರು ಸಚಿವರನ್ನಾಗಿ ಆರಿಸಿಕೊಂಡರಲ್ಲ, ಯಾಕೆ ಯಾರೂ ಈ ಬಗ್ಗೆ ಮಾತಾಡುತ್ತಿಲ್ಲ? ಈಜಿಪ್ಟನ್ನು ಬ್ರದರ್ ಹುಡ್ಡೀಕರಣಗೊಳಿಸುವ ರೀತಿಯೇ ಇದು? ಜಗತ್ತಿನ ಎಷ್ಟು ಮಂದಿ ಅಧ್ಯಕ್ಷರು ಇಂಥ ಸಚಿವ ಸಂಪುಟವನ್ನು ರಚಿಸಿದ್ದಾರೆ? ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಡೆನ್ಮಾರ್ಕ್, ಆಸ್ಟ್ರೇಲಿಯಾಗಳಲ್ಲೆಲ್ಲಾ ಇರುವುದು ಬಹುತೇಕ ಈಜಿಪ್ಟ್ ಮಾದರಿಯ ಅಧ್ಯಕ್ಷೀಯ ಪದ್ಧತಿಯೇ. ಹಾಗಂತ, ಎಷ್ಟು ಮಂದಿ ಅಧ್ಯಕ್ಷರಿಗೆ ಮುರ್ಸಿಯವರು ರಚಿಸಿದಂಥ ಸಚಿವ ಸಂಪುಟವನ್ನು ರಚಿಸಲು ಸಾಧ್ಯವಾಗಿದೆ? ಮೂರರಲ್ಲಿ ಒಂದು ಭಾಗವನ್ನಷ್ಟೇ ಆಡಳಿತ ಪಕ್ಷಕ್ಕೆ ನೀಡಿ ಉಳಿದೆಲ್ಲ ಖಾತೆಗಳನ್ನು ಇತರರಿಗೆ ನೀಡುವ ಸಾಹಸವನ್ನು ಮುರ್ಸಿಯವರಲ್ಲದೇ ಇನ್ನಾರು ಮಾಡಿದ್ದಾರೆ! ಅದರಲ್ಲೂ ವಲಸೆ, ನಗರಾಭಿವೃದ್ಧಿ, ಮಾಧ್ಯಮ, ಯುವಜನ ಖಾತೆ, ಸಾರಿಗೆ, ವ್ಯಾಪಾರದಂಥ ತೀರಾ ಸಾಮಾನ್ಯ ಖಾತೆಗಳನ್ನು ತನ್ನ ಫ್ರೀಡಮ್ ಆಂಡ್ ಜಸ್ಟೀಸ್ ಪಕ್ಷದ ಸದಸ್ಯರಿಗೆ ಕೊಟ್ಟ ಮುರ್ಸಿಯವರನ್ನು ಮಾದರಿ ರಾಜಕಾರಣಕ್ಕಾಗಿ ಮೆಚ್ಚಿಕೊಳ್ಳುವುದನ್ನು ಬಿಟ್ಟು, ‘ಮೂಲಭೂತವಾದಿಗಳ ಪ್ರತಿನಿಧಿ’ ಎಂಬ ಹುಯಿಲನ್ನು ಪಾಶ್ಚಾತ್ಯ ರಾಷ್ಟ್ರ ಗಳು ಹಬ್ಬಿಸಿದ್ದೇಕೆ? ಅವರು ಭಯಪಡುವ ಮೂಲಭೂತವಾದರೂ ಯಾವುದು? ಈಜಿಪ್ಟ್ ನಾದ್ಯಂತ ಮುಸ್ಲಿಮ್ ಬ್ರದರ್ ಹುಡ್ ಕಟ್ಟಿ ಬೆಳೆಸಿರುವ ಅನೇಕಾರು ಆಸ್ಪತ್ರೆಗಳೇ? ರಿಯಾಯಿತಿ ದರದಲ್ಲಿ ನೀಡಲಾಗುವ ವೈದ್ಯಕೀಯ ಸೇವೆಗಳೇ? ಎಲ್ಲ ತಾಲೂಕುಗಳಲ್ಲೂ ಅದು ಸ್ಥಾಪಿಸಿರುವ ಮಹಿಳಾ ಶಾಲೆ-ಕಾಲೇಜುಗಳೇ? ವಿಧವೆಯರು ಮತ್ತು ಅನಾಥರಿಗಾಗಿ ಹಮ್ಮಿಕೊಂಡಿರುವ ಜನಪ್ರಿಯ ಯೋಜನೆಗಳೇ? ಉದ್ಯೋಗ ತರಬೇತಿ ಕಾರ್ಯಕ್ರಮಗಳೇ? 1992ರಲ್ಲಿ ಈಜಿಪ್ಟ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ 50 ಸಾವಿರ ಮಂದಿ ನಿರ್ವಸಿತರಾದರು. ಆಗ ಪೀಡಿತರ ನೆರವಿಗಾಗಿ ಧಾವಿಸಿದ್ದು; ಅವರಿಗೆ ವಸತಿ, ಉಡುಪು, ವೈದಕೀಯ ಸೇವೆಯನ್ನು ನೀಡಿದ್ದು ಬ್ರದರ್ ಹುಡ್ಡೇ. ಸರಕಾರ ನಿರ್ವಹಿಸಿದುದಕ್ಕಿಂತ ಹೆಚ್ಚಿನ ಕೆಲಸವನ್ನು ಬ್ರದರ್ ಹುಡ್ ನಿರ್ವಹಿಸಿದೆ ಎಂದು ಮುಬಾರಕ್‍ರ ಸೇನಾಡಳಿವೇ ಪ್ರಶಂಸಿಸಿತ್ತು. ಮುರ್ಸಿಯವರು ಈಜಿಪ್ಟನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳುವವರೆಲ್ಲ ನಿಜವಾಗಿಯೂ ಭಯಪಡುತ್ತಿರುವುದು ಯಾವುದಕ್ಕೆ? ಯಾರಿಗೆ? ಒಂದು ವೇಳೆ ಮುರ್ಸಿಯವರ ಫ್ರೀಡಮ್ ಆ್ಯಂಡ್ ಜಸ್ಟೀಸ್ ಪಕ್ಷವು ಪೂರ್ಣಾವಧಿವರೆಗೆ ಈಜಿಪ್ಟನ್ನು ಆಳಿದರೆ, ಬ್ರದರ್ ಹುಡ್‍ನ ಬಗ್ಗೆ ತಾವು ಹರಡಿ ಬಿಟ್ಟಿರುವ ಅಪಪ್ರಚಾರಗಳ ಬಣ್ಣ ಬಯಲಾದೀತು ಎಂಬ ಭಯವೇ ಅವರಿಗೆ? ಈ ಕಾರಣದಿಂದಲೇ ಮುರ್ಸಿಯವರನ್ನು ಒಂದು ವರ್ಷದೊಳಗೇ ಕಿತ್ತು ಹಾಕಲಾಯಿತೇ?
ಸೈಯದ್ ಹಸನುಲ್ ಬನ್ನಾ, ಹಸನುಲ್ ಹುದೈಬಿ, ಉಮರುಲ್ ತಿಲ್ಮಿಸಾನಿ, ಮುಹಮ್ಮದ್ ಹಾಮಿದ್ ಅಬುಲ್ ನಸ್ರ್, ಮುಸ್ತಫಾ ಮಶ್‍ಹೂರ್, ಮಅïಮೂನ್ ಅಲ್ ಹುದೈಬಿ, ಮಹ್ಮೂದ್ ಮೆಹ್ದಿ ಆಕಿಫ್, ಮುಹಮ್ಮದ್ ಬದೀ... ಮುಂತಾದ ನಾಯಕರು ಮುನ್ನಡೆಸಿಕೊಂಡ ಬಂದ, ಬರುತ್ತಿರುವ ಈಜಿಪ್ಟ್ ನ ಅತಿದೊಡ್ಡ ಚಳವಳಿಯೇ ಮುಸ್ಲಿಮ್ ಬ್ರದರ್ ಹುಡ್. ಈ ಮೇಲಿನ ನಾಯಕರಲ್ಲಿ ಯಾರೊಬ್ಬರ ಮೇಲೂ ಅಮೇರಿಕ, ಬ್ರಿಟನ್, ಫ್ರಾನ್ಸ್ ಅಥವಾ ಜಗತ್ತಿನ ಇನ್ನಾವುದೇ ರಾಷ್ಟ್ರದಲ್ಲಿ ಭಯೋತ್ಪಾದನಾ ಸಂಬಂಧಿ ಪ್ರಕರಣಗಳಿಲ್ಲ. ಇವರನ್ನು ಕಪ್ಪು ಪಟ್ಟಿಯಲ್ಲೋ, ಮೋಸ್ಟ್ ವಾಂಟೆಡ್ ಯಾದಿಯಲ್ಲೋ ಸೇರಿಸಲಾಗಿಲ್ಲ. ಈಜಿಪ್ಟನ್ನು ಆಳುತ್ತಿದ್ದ ಬ್ರಿಟಿಷರ ವಿರುದ್ಧ 1930ರಲ್ಲಿ ಸಶಸ್ತ್ರ ಹೋರಾಟಕ್ಕೆ ಒಂದು ಗುಂಪು ಮುಂದಾದಾಗ ಅದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆಗೆ ಕರೆಕೊಟ್ಟದ್ದೇ ಹಸನುಲ್ ಬನ್ನಾ (ವಿಕಿಪೀಡಿಯಾ). ಈಜಿಪ್ಟ್ ಆ ಬಳಿಕ ಸರ್ವಾಧಿಕಾರಿಗಳು ಪಾಲಾಯಿತು. ಜಮಾಲ್ ಅಬ್ದುನ್ನಾಸರ್ ರಿಂದ ಹಿಡಿದು ಮುಬಾರಕ್ ರ ವರೆಗೆ ಒಂದು ದೀರ್ಘ ಅವಧಿ ಕಳೆದುಹೋಯಿತು. ಈ ಸಂದರ್ಭದಲ್ಲಿ ಸರ್ವಾಧಿಕಾರವನ್ನು ಪ್ರಬಲ ಧನಿಯಲ್ಲಿ ಪ್ರಶ್ನಿಸಿದ ಬ್ರದರ್ ಹುಡ್, ಪರ್ಯಾಯ ರಾಜಕೀಯ ಆಲೋಚನೆಯೊಂದನ್ನು ಸಮಾಜದ ಮುಂದಿಟ್ಟಿತು. ಸಾಮಾಜಿಕ, ರಾಜಕೀಯ, ಆರ್ಥಿಕ ಮುಂತಾದ ಸರ್ವಕ್ಷೇತ್ರಗಳ ಸಮಸ್ಯೆಗಳಿಗೂ ಇಸ್ಲಾಮಿನಲ್ಲಿ ಪರಿಹಾರವಿದೆ ಎಂದು ಅದು ವಾದಿಸಿತು. ಮಾತ್ರವಲ್ಲ, ಬಡ್ಡಿರಹಿತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹುಟ್ಟುಹಾಕಿ, ಶುದ್ಧ-ಪ್ರಾಮಾಣಿಕ ಕಾರ್ಯಕರ್ತರ ತಂಡವೊಂದನ್ನು ಕಟ್ಟಿ, ಸಾಮಾಜಿಕ ಕೆಡುಕುಗಳ ವಿರುದ್ಧ ಜನ ಜಾಗೃತಿಯನ್ನು ಆಯೋಜಿಸಿ ಪ್ರಾಯೋಗಿಕವಾಗಿಯೂ ತೋರಿಸಿ ಕೊಟ್ಟಿತು. ಆವರೆಗೆ ಇಸ್ಲಾಮನ್ನು ಪಾಶ್ಚಾತ್ಯ ಜಗತ್ತು ಹೇಗೆ ವ್ಯಾಖ್ಯಾನಿಸುತ್ತಿತ್ತೋ ಅದಕ್ಕೆ ಭಿನ್ನವಾಗಿ ಬ್ರದರ್ ಹುಡ್ ಇಸ್ಲಾಮನ್ನು ಪ್ರಸ್ತುತಪಡಿಸುವುದನ್ನು ಈಜಿಪ್ಟ್ ನ ಸರ್ವಾಧಿಕಾರಿ ಮನಸ್ಥಿತಿಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಬ್ರದರ್ ಹುಡ್ ಪ್ರಸ್ತುತಪಡಿಸುವ ಆಲೋಚನೆಯನ್ನು ಈಜಿಪ್ಟ್ ನಲ್ಲಿ ಬೆಳೆಯಲು ಬಿಟ್ಟರೆ ತಮ್ಮ ಆಧಿಪತ್ಯ ಖಂಡಿತ ಕೊನೆಗೊಳ್ಳುವುದೆಂದು ಅವರು ಭಯಪಟ್ಟರು. ಆದ್ದರಿಂದಲೇ, ಬ್ರದರ್ ಹುಡ್ ನ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ತಳ್ಳಿದರು. ಅವರ ಕಾರ್ಯಕ್ರಮಗಳಿಗೆ ತಡೆ ಒಡ್ಡಿದರು. ಆದರೆ ಸರ್ವಾಧಿಕಾರಿಗಳ ಈ ಕ್ರಮವು ಬ್ರದರ್ ಹುಡ್ ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿತು. ನಿಜವಾಗಿ, ಸಮಾಜಸೇವೆಗೆ ಮಾತ್ರ ತನ್ನ ಚಟುವಟಿಕೆಯನ್ನು ಬ್ರದರ್ ಹುಡ್ ಸೀಮಿತಗೊಳಿಸುತ್ತಿದ್ದರೆ ಅದರ ಕಾರ್ಯಕರ್ತರು ಜೈಲು ಸೇರಬೇಕಾದ ಅಗತ್ಯವೇ ಇರಲಿಲ್ಲ. ಬಡವರಿಗೆ ಮನೆ ಕಟ್ಟಿಸಿ ಕೊಡುತ್ತಾ, ದುರ್ಬಲರಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ನೆರವು ನೀಡುತ್ತಾ ಬರುವ ಬ್ರದರ್ ಹುಡ್ಡನ್ನು ಮುಬಾರಕ್ ಆಗಲಿ, ಸಾದಾತ್ ಆಗಲಿ ದ್ವೇಷಿಸುವುದಕ್ಕೆ ಸಾಧ್ಯವೂ ಇರಲಿಲ್ಲ. ಆದರೆ, ಯಾವಾಗ ಅದು, ‘ಇಸ್ಲಾಮ್ ಈಸ್ ಸೊಲ್ಯೂಶನ್’ ಅಂತ ಹೇಳುತ್ತಾ ರಾಜಕೀಯವನ್ನು ತನ್ನ ಚಟುವಟಿಕೆಯ ಭಾಗವಾಗಿಸಿತೋ, ತಕ್ಷಣ ಅದನ್ನು ಮೂಲಭೂತವಾದಿ, ಉಗ್ರವಾದಿ ಎಂದು ಕರೆಯಲಾಯಿತು. ಅಷ್ಟಕ್ಕೂ, ಲೆನಿನ್‍ರ ಕಮ್ಯುನಿಸಮ್ ಸಿದ್ಧಾಂತದ ಬಗ್ಗೆ ಈ ಜಗತ್ತು ಚರ್ಚಿಸಬಹುದಾದರೆ ಇಸ್ಲಾವಿೂ ರಾಜಕೀಯದ ಬಗ್ಗೆ ಚರ್ಚಿಸುವುದೇಕೆ ಭಯೋತ್ಪಾದಕ ಅನ್ನಿಸಿಕೊಳ್ಳಬೇಕು? ಕಮ್ಯೂನಿಸಮ್ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಹೋರಾಡುತ್ತಿರುವ ರಾಜಕೀಯ ಪಕ್ಷಗಳು ಜಾಗತಿಕವಾಗಿ ಧಾರಾಳ ಇವೆ. ಬಂಡವಾಳಶಾಹಿತ್ವವನ್ನು ಒಂದು ಪರಿಹಾರವಾಗಿ ಪ್ರತಿಪಾದಿಸುವ ಪಕ್ಷಗಳು ಮತ್ತು ಅದರ ಜಾರಿಗಾಗಿ ಪ್ರಯತ್ನಿಸುವವರು ಅಸಂಖ್ಯ ಇದ್ದಾರೆ. ಅವರಾರಿಗೂ ಇಲ್ಲದ ಅಡೆತಡೆಗಳು ಇಸ್ಲಾಮನ್ನು ಒಂದು ಪರಿಹಾರವಾಗಿ ಮಂಡಿಸುವವರಿಗೇಕೆ ಎದುರಾಗುತ್ತಿದೆ? ಇಸ್ಲಾಮ್ ಅಂದ ಕೂಡಲೇ ತಾಲಿಬಾನ್, ಅಲ್ ಕಾಯ್ದಾಗಳೇ ಯಾಕೆ ಕಣ್ಣಮುಂದೆ ಬರಬೇಕು? ಕಮ್ಯೂನಿಸಮ್‍ನ ತಪ್ಪಾದ ಮಾದರಿಯಾಗಿ ನಕ್ಸಲಿಸಮ್ ಇರುವಂತೆ ಇಸ್ಲಾಮ್‍ನ ತಪ್ಪಾದ ಮಾದರಿಯಾಗಿ ತಾಲಿಬಾನನ್ನು ಪರಿಗಣಿಸಬಹುದಲ್ಲವೇ? ಇಸ್ಲಾವಿೂ ರಾಜಕೀಯವನ್ನು ‘ತಾಲಿಬಾನೀ ಕರಣ’ ಎಂದು ವ್ಯಾಖ್ಯಾನಿಸುವುದು ಎಷ್ಟು ಸರಿ? ತಾಲಿಬಾನನ್ನು ಇಸ್ಲಾಮ್‍ನ ನೈಜ ಮಾದರಿ ಎಂದು ಬಿಂಬಿಸಲು ಪಾಶ್ಚಾತ್ಯರು ಆತುರ ಪಡುತ್ತಿದ್ದಾರಲ್ಲ, ಯಾಕಾಗಿ? ಹಾಗೆ ಭೀತಿ ಮೂಡಿಸದಿದ್ದರೆ ಬ್ರದರ್ ಹುಡ್ ಪರಿಚಯಿಸುವ ಇಸ್ಲಾವಿೂ ರಾಜಕೀಯದ ಬಗ್ಗೆ ಜನರು ಆಸಕ್ತಿ ತೋರಿಯಾರು ಎಂಬ ಭಯವೇ? ಇಸ್ಲಾಮ್‍ನ ಆಧಾರದಲ್ಲಿ ಕಳೆದ 80 ವರ್ಷಗಳಿಂದ ಈಜಿಪ್ಟ್ ನಲ್ಲಿ ಅದು ನಡೆಸಿದ ಕ್ರಾಂತಿಕಾರಿ ಚಟುವಟಿಕೆಗಳು ಜಗತ್ತಿನ ಗಮನ ಸೆಳೆದೀತು ಎಂಬ ಅಳುಕೇ? ಅಂದ ಹಾಗೆ, ಇಸ್ಲಾವಿೂ ರಾಜಕೀಯದ ವಿಫಲ ಮಾದರಿಯಾಗಿ ಜಗತ್ತು ತಾಲಿಬಾನನ್ನು ತೋರಿಸುವುದಾದರೆ ಅಮೇರಿಕನ್ ಬಂಡವಾಳಶಾಹಿತ್ವದ ವೈಫಲ್ಯಕ್ಕೆ ಸಾಕ್ಷಿಯಾಗಿ ಇರಾಕನ್ನೂ ತೋರಿಸಬಹುದಲ್ಲವೇ? ಇರಾಕ್‍ನಲ್ಲಿ ಅಮೆರಿಕ ನಡೆಸಿದ ಕ್ರೌರ್ಯಕ್ಕೆ ಹೋಲಿಸಿದರೆ ತಾಲಿಬಾನ್ ಎಲ್ಲಿದೆ? ಹಾಗಿದ್ದೂ, ಇಸ್ಲಾವಿೂ ರಾಜಕೀಯ ಎಂದ ಕೂಡಲೇ ಏಕೈಕ ಮಾದರಿಯಾಗಿ ತಾಲಿಬಾನ್ ಮುಂದೆ ಬರುವುದೂ, ಬಂಡವಾಳಶಾಹಿತ್ವ ಎಂದ ಕೂಡಲೇ ‘ಇರಾಕ್’ ಎದುರು ಬರದೇ ಇರುವುದೂ ಯಾಕಾಗಿ? ಬಂಡವಾಳಶಾಹಿತ್ವವೆಂದರೆ, ಅಮೆರಿಕನ್ ದಬ್ಬಾಳಿಕೆಯ ಹೊರತಾದ ಇತರ ಆಯ್ಕೆಗಳೂ ಇರಬಹುದಾದರೆ ತಾಲಿಬಾನ್ ಹೊರತಾದ ಇತರ ಆಯ್ಕೆಗಳೂ ಇಸ್ಲಾವಿೂ ರಾಜಕೀಯಕ್ಕೆ ಇರಬಾರದೆಂದಿದೆಯೆ? ಕನಿಷ್ಠ ಟರ್ಕಿ ಮಾದರಿಯನ್ನು ಮುಂದಿಟ್ಟು ಜಗತ್ತು ಚರ್ಚಿಸಿದರೇನು?
ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಸಾವಿರಾರು ವಿದ್ಯಾರ್ಥಿಗಳು 1989ರಲ್ಲಿ ತಿಯೆನ್ಮಾನ್ ಚೌಕದಲ್ಲಿ ಪ್ರತಿಭಟನೆಗಿಳಿದಾಗ ಚೀನಾ ಸರಕಾರವು ಅವರ ಮೇಲೆ ಬುಲ್ಡೋಜರ್ ಹರಿಸಿ ಕೊಂದು ಹಾಕಿತ್ತು. ಆಗ ಅಮೆರಿಕವು ಈ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿತ್ತು. ಚೀನಾದೊಂದಿಗಿನ ಎಲ್ಲ ವ್ಯಾಪಾರ ಸಂಬಂಧವನ್ನೂ ಅಧ್ಯಕ್ಷ ಸೀನಿಯರ್ ಬುಶ್ ರದ್ದುಗೊಳಿಸಿದ್ದರು. ಆದರೆ, ಈಜಿಪ್ಟ್ ಸೇನಾಡಳಿತದ ಬುಲ್ಡೋಜರನ್ನು ನೋಡಿಯೂ ಇವತ್ತು ಒಬಾಮ ಅಸಹಾಯಕರಂತೆ ವರ್ತಿಸುತ್ತಿದ್ದಾರೆ. ಈಜಿಪ್ಟ್ ಮತ್ತು ಅಮೆರಿಕದ ಮಧ್ಯೆ ಎರಡು ವರ್ಷಕ್ಕೊಮ್ಮೆ ನಡೆಯುವ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ರದ್ದುಪಡಿಸಿರುವುದಾಗಿ ಹೇಳಿ ಅವರು ಸುಮ್ಮನಾಗಿದ್ದಾರೆ. ನಿಜವಾಗಿ, ಈಜಿಪ್ಟ್ ಗೆ ಜಂಟಿ ಸಮರಾಭ್ಯಾಸದ ಅಗತ್ಯವೇ ಇಲ್ಲ. ಪ್ರತಿವರ್ಷ ಅದು 500 ಮಂದಿ ಮಿಲಿಟರಿ ಸಿಬಂದಿಯನ್ನು ತರಬೇತಿಗಾಗಿ ಅಮೆರಿಕಕ್ಕೆ ರವಾನಿಸುತ್ತಿದೆ. ಬ್ರದರ್ ಹುಡ್ ಕಾರ್ಯಕರ್ತರ ಮೇಲೆ ಬುಲ್ಡೋಜರ್ ಹರಿಸಿದ ಸೇನಾ ಕಮಾಂಡರ್ ಅಲ್ ಸಿಸಿಯವರೂ ಅಮೇರಿಕದ ಪೆನ್ಸಿಲ್ವೇನಿಯದಲ್ಲಿ ಈ ಹಿಂದೆ ತರಬೇತಿ ಪಡೆದವರೇ. ಒಂದು ವೇಳೆ, ಈಜಿಪ್ಟ್ ಗೆ ಪ್ರತಿವರ್ಷ ನೀಡುತ್ತಿರುವ 1.3 ಬಿಲಿಯನ್ ಡಾಲರ್ ಮಿಲಿಟರಿ ನೆರವನ್ನು ರದ್ದುಪಡಿಸುವುದಾಗಿ ಒಬಾಮ ಘೋಷಿಸುತ್ತಿದ್ದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದು ಈಜಿಪ್ಟ್ ಬೆಳವಣಿಗೆಯನ್ನು ಚರ್ಚಿಸುವಂತೆ ಒತ್ತಾಯಿಸುತ್ತಿದ್ದರೆ ಮತ್ತು ಮುರ್ಸಿ ಸರಕಾರವನ್ನು ಮರು ನೇಮಕ ಗೊಳಿಸುವವರೆಗೆ ಈಜಿಪ್ಟ್ ಗೆ ದಿಗ್ಬಂಧನ ವಿಧಿಸುವುದಾಗಿ ಘೋಷಿಸುತ್ತಿದ್ದರೆ.. ಒಬಾಮರನ್ನು ಪ್ರಾಮಾಣಿಕ ಎಂದು ಒಪ್ಪಬಹುದಿತ್ತು. ಆದರೆ, ಈಜಿಪ್ಟ್ ಗೆ ತನ್ನ ನೆರವನ್ನು ರದ್ದುಗೊಳಿಸಿದ ಡೆನ್ಮಾರ್ಕ್‍ನಷ್ಟು ಪ್ರಾಮಾಣಿಕತೆಯನ್ನೂ ಒಬಾಮ ಪ್ರದರ್ಶಿಸಿಲ್ಲ. ಹೀಗಿರುವಾಗ,
ಒಬಾಮಾರ ಹೇಳಿಕೆಯಿಂದ ಅಲ್ ಕಾಯಿದಾದ ಐಮನ್ ಜವಾಹಿರಿಗೆ ಮಾತ್ರ ಖುಷಿಯಾದೀತು ಎಂದು ರಾಯಿಟರ್ಸ್‍ನ ಅಂಕಣಕಾರ ಡೇವಿಡ್ ರೋಹ್ ಡೆ ಹೇಳಿರುವುದರಲ್ಲಿ ಏನು ತಪ್ಪಿದೆ?

No comments:
Post a Comment