ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆ, ಪ್ರತಿಭೆ.. ಮುಂತಾದು ವುಗಳನ್ನು ಅತ್ಯಂತ ಹೆಚ್ಚು ಚರ್ಚೆಗೆ ಎತ್ತಿಕೊಳ್ಳುವುದು ಸಿನಿಮಾ ಕ್ಷೇತ್ರ. ಅಲ್ಲಿಂದ ಬಿಡುಗಡೆಯಾಗುವ ಸಿನಿಮಾಗಳಲ್ಲಿ ಪುರುಷರನ್ನು ಸದೆಬಡಿಯುವ ಪಾತ್ರದಲ್ಲಿ ಮಹಿಳೆ ಮಿಂಚುತ್ತಾಳೆ. ಪುರುಷ ನಿಗಿಂತಲೂ ಹೆಚ್ಚು ಐಕ್ಯೂ ಇರುವವಳಾಗಿ ಗುರುತಿಸಿಕೊಳ್ಳುತ್ತಾಳೆ. ಅದ್ಭುತ ತಾಯಿಯಾಗಿ, ಪ್ರೇಮಿಯಾಗಿ, ಸಹನಾಮಯಿಯಾಗಿ, ಬುದ್ಧಿವಂತಳಾಗಿ, ಪ್ರತಿಭಟನಾ ಗುಣವುಳ್ಳವಳಾಗಿ, ಸಮಾನತೆಯ ಪ್ರತಿಪಾದಕಳಾಗಿ.. ಹೀಗೆ ಎಲ್ಲ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಾಳೆ. ಇದೊಂದು ಮುಖ. ಈ ಸುಂದರ ಮುಖದಿಂದ ಆಕರ್ಷಿತರಾಗಿ ಧಾರಾಳ ಮಹಿಳೆಯರು ಈ ಕ್ಷೇತ್ರದಲ್ಲಿ ತಮ್ಮನ್ನು ಪರೀಕ್ಷೆಗೊಡ್ಡಲು ಸಿದ್ಧರಾಗುತ್ತಿದ್ದಾರೆ. ಅಲ್ಲಿ ಸಮಾನತೆಯಿದೆ, ಲಿಂಗ ಬೇಧ ಇಲ್ಲ, ಸುರಕ್ಷಿತತೆಯಿದೆ.. ಇತ್ಯಾದಿ ಇತ್ಯಾದಿ ನಂಬಿಕೆಗಳೂ ಅವರಲ್ಲಿವೆ. ಅದೇ ವೇಳೆ, ಇದಕ್ಕೆ ಇನ್ನೊಂದು ಮುಖವೂ ಇದೆ. ಕೇರಳದ ನಟಿಯರು ಕಳೆದವಾರ ಈ ಕರಾಳ ಮುಖವನ್ನು ಸಾರ್ವಜನಿಕರ ಮುಂದೆ ತೆರೆದಿಟ್ಟರು. Womens collective in Cinema ಎಂಬ ಹೆಸರಲ್ಲಿ ಒಂದು ನಿಯೋಗವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿಗೆ ಒಯ್ದರು. ಮಂಜು ವಾರಿಯರ್, ಬೀನಾ ಮೋಳ್, ರೀಮಾ ಕಲ್ಲಿಂಗಲ್, ಪಾರ್ವತಿ, ಅಂಜಲಿ ಮೆನನ್ ಮುಂತಾದ ಪ್ರಮುಖ ನಟಿಯರು ಆ ನಿಯೋಗದಲ್ಲಿದ್ದರು. ಅವರ ಬೇಡಿಕೆ ಏನೆಂದರೆ, ಸಿನಿಮಾ ಇಂಡಸ್ಟ್ರಿಯಲ್ಲಿ ತಮಗೆ ಸುರಕ್ಷಿತತೆಯನ್ನು ಒದಗಿಸ ಬೇಕು ಎಂಬುದು. ಎಲ್ಲಿ ಮಹಿಳಾ ಸುರಕ್ಷಿತತೆಯ ಬಗ್ಗೆ ಸಾಲು ಸಾಲು ಸಿನಿಮಾಗಳು, ಡಯಲಾಗ್‍ಗಳು ಸೃಷ್ಟಿಯಾಗುತ್ತೋ ಅಲ್ಲೇ ಮಹಿಳೆ ಅಸುರಕ್ಷಿತಳಾಗಿದ್ದಾಳೆ ಎಂಬುದು. ಅಷ್ಟಕ್ಕೂ, ಈ ಅಸುರಕ್ಷಿತತೆಯ ಭಯ ಇವರನ್ನು ಕಾಡುತ್ತಿರುವುದು ಪ್ರಾಣಿಗಳಿಂದಲ್ಲ, ಪುರುಷರಿಂದ. ಹೆಣ್ಣನ್ನು ಅತ್ಯಾಚಾರಿಗಳಿಂದ, ದರೋಡೆಕೋರರಿಂದ, ಚುಡಾವಣೆದಾರರಿಂದ, ಮಾನವ ಕಳ್ಳ ಸಾಗಾಟಗಾರರಿಂದ.. ಅಮೋಘವಾಗಿ ರಕ್ಷಿಸುವ ಪಾತ್ರದಲ್ಲಿ ಮಿಂಚುತ್ತಿರುವ ಹೀರೋ ಗಳಿಂದ. ಅಂಥ ಚಿತ್ರಕತೆಯನ್ನು ರಚಿಸಿದ ಪುರುಷನಿಂದ. ನಿರ್ದೇಶಕನಿಂದ. ಸಹನಟರಿಂದ. ತಂತ್ರಜ್ಞರಿಂದ. ಈ ಬೆಳವಣಿಗೆ ಗಿಂತ ಕೆಲವು ಸಮಯ ಮೊದಲು ತಮಿಳುನಾಡಿನ ಪ್ರಮುಖ ನಟ ಶರತ್ ಕುಮಾರ್‍ರ ಮಗಳು ವರಲಕ್ಷ್ಮಿ ಒಂದು ಟ್ವೀಟ್ ಮಾಡಿದರು. ಆಕೆಯೂ ಓರ್ವ ಪ್ರಮುಖ ನಟಿ. ಕೇರಳದ ಪ್ರಸಿದ್ಧ ನಟಿಯನ್ನು ಚಲಿಸುತ್ತಿರುವ ಆಡಿ ಕಾರಿನಲ್ಲಿ ಗಂಟೆಗಳ ವರೆಗೆ ಲೈಂಗಿಕವಾಗಿ ಹಿಂಸಿಸಿದ ಪ್ರಕರಣದ ಬಳಿಕ ಮಾಡಿದ ಟ್ವೀಟ್ ಇದು.
‘ತಮಿಳು ಟಿ.ವಿ. ಚಾನೆಲ್‍ನ ಮುಖ್ಯಸ್ಥನ ಜೊತೆ ಸೀರಿಯಲ್‍ಗೆ ಸಂಬಂಧಿಸಿ ಸಭೆ ನಡೆಸಿದೆ. ಬಳಿಕ ಆತ ಲೈಂಗಿಕವಾಗಿ ಸಹಕರಿಸುವಂತೆ ಕೋರಿದ..’ ಈ ಟ್ವೀಟ್‍ಗೆ ಅನೇಕ ಮಂದಿ ಆಘಾತ ವ್ಯಕ್ತಪಡಿಸಿದರು.
2015ರಲ್ಲಿ ಲಂಡನ್ನಿನ ಗಾರ್ಡಿಯನ್ ಪತ್ರಿಕೆಯು ಒಂದು ಸಮೀಕ್ಷೆ ಆಧಾರಿತ ಅಭಿಪ್ರಾಯವನ್ನು ಮಂಡಿಸಿತ್ತು. ಸಿನಿಮಾ ಮತ್ತು ಟಿ.ವಿ. ಇಂಡಸ್ಟ್ರಿಯಲ್‍ನ ಶೇ. 99 ಮಂದಿ ಮಹಿಳೆಯರಿಗೂ ಸೆಕ್ಸಿಸಂನ ಅನುಭವ ಆಗಿದೆ ಎಂದು ಅದರಲ್ಲಿ ಹೇಳಲಾಗಿತ್ತು. ಮಹಿಳೆಯನ್ನು ವಸ್ತುವಾಗಿ ನೋಡಬಾರದೆಂದು ಹೇಳಿಕೊಡುವ ಕ್ಷೇತ್ರದಲ್ಲೇ ಯಾಕೆ ಹೆಣ್ಣು ಮತ್ತೆ ಮತ್ತೆ ವಸ್ತುವಾಗುತ್ತಿದ್ದಾಳೆ? ಈ ದೇಶದ ಯಾವನಾದರೂ ಓರ್ವ ಪ್ರಸಿದ್ಧ ನಟ ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ಶೋಷಣೆಗೆ ಒಳಗಾದದ್ದು ನಡೆದಿದೆಯೇ? ಲೈಂಗಿಕ ಶೋಷಣೆ ಬಿಡಿ, ಕನಿಷ್ಠ ಆತನ ಎದುರು ದನಿಯೇರಿಸಿ ಮಾತನಾಡಿದ ಪ್ರಕರಣಗಳಿವೆಯೇ? ಪಕ್ಕಾ ದರೋಡೆಕೋರರೂ ಆತನನ್ನು ಮುಟ್ಟುವ ಧೈರ್ಯ ಮಾಡಿದ್ದಿದೆಯೇ? ಮತ್ತೇಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಏನೇನೂ ಅಲ್ಲದ ವ್ಯಕ್ತಿಗಳು ಓರ್ವ ಪ್ರಸಿದ್ಧ ನಟಿಯ ಮೇಲೆ ಲೈಂಗಿಕ ಶೋಷಣೆ ನಡೆಸುವ ಪ್ರಕರಣ ನಡೆಯುತ್ತದೆ? ಅದೂ ಚಲಿಸುವ ಕಾರಿನಲ್ಲಿ. ಈ ದೇಶದ ಎಲ್ಲೋ ಮೂಲೆಯಲ್ಲಿ ಯಾವುದೋ ಅಪರಿಚಿತ ಹೆಣ್ಣು ಮಗಳ ಮೇಲೆ ನಡೆಯಬಹುದಾದಂಥ ರೀತಿಯ ಹಿಂಸೆಗೆ ಓರ್ವ ನಟಿ ಒಳ ಗಾಗುತ್ತಾಳೆ ಮತ್ತು ಆ ಹಿಂಸೆಯಲ್ಲಿ ಆಕೆಯ ಸಿನಿಮಾ ಇಂಡಸ್ಟ್ರಿಯ ಒಳಗಿನ ವ್ಯಕ್ತಿಗಳೇ ಪಾಲುಗೊಳ್ಳುತ್ತಾರೆ ಅನ್ನುವುದು ಏನನ್ನು ಸೂಚಿಸುತ್ತದೆ? ಸಿನಿಮಾ ಇಂಡಸ್ಟ್ರಿಯೂ ಹೆಣ್ಣನ್ನು ವಸ್ತುವಾಗಿ ಮತ್ತು ಅಗ್ಗವಾಗಿ ನೋಡುತ್ತಿದೆ ಎಂದಲ್ಲವೇ? ಅಷ್ಟಕ್ಕೂ, ಕೇರಳದ ನಟಿಯನ್ನು ಲೈಂಗಿಕವಾಗಿಯೇ ಯಾಕೆ ಶೋಷಿಸಬೇಕಿತ್ತು? ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬೇರೆ ದಾರಿಗಳೂ ಇತ್ತಲ್ಲವೇ? ಈ ಇಂಡಸ್ಟ್ರಿಯಲ್ಲಿ ನಟರ ಜೊತೆಯಲ್ಲೂ ಭಿನ್ನಾಭಿಪ್ರಾಯ ಉಂಟಾಗುವುದಿಲ್ಲವೇ? ಆಗೆಲ್ಲ ಅವರನ್ನು ಹೀಗೆ ಲೈಂಗಿಕವಾಗಿ ಶೋಷಣೆಗೆ ಒಳಪಡಿಸಲಾಗುತ್ತಿದೆಯೇ?
ಲೈಂಗಿಕ ಶೋಷಣೆ ಎಂಬುದು ಹೆಣ್ಣನ್ನು ಶರಣುಗೊಳಿಸುವುದಕ್ಕೆ ಪುರುಷ ಸಮಾಜ ಸಾಮಾನ್ಯವಾಗಿ ಬಳಸುತ್ತಿರುವ ಅಸ್ತ್ರ. ಭಾರತದ ಉದ್ದಗಲಕ್ಕೂ ಇದರ ಪ್ರಯೋಗ ನಡೆಯುತ್ತಲೇ ಇದೆ. ತನ್ನನ್ನು ಪ್ರೀತಿಸದ ಹೆಣ್ಣನ್ನು ಪುರುಷ ಲೈಂಗಿಕ ದೌರ್ಜನ್ಯದ ಮೂಲಕ ಪ್ರತೀಕಾರ ತೀರಿಸುವುದಿದೆ. ತನಗೆ ಎದುರಾಡಿದ ಉದ್ಯೋಗಸ್ಥೆಯ ಮೇಲೆ ಮ್ಯಾನೇಜರ್ ಲೈಂಗಿಕ ದೌರ್ಜನ್ಯ ಎಸಗುವುದಿದೆ. ಪುರುಷರ ವಿರುದ್ಧ ದನಿಯೆತ್ತಿದವಳನ್ನು ಇದೇ ವಿಧಾನ ಬಳಸಿ ಪಳಗಿಸುವುದಿದೆ. ಈ ದೇಶದ ಸಾಮಾನ್ಯ ಹೆಣ್ಣು ಮತ್ತು ಗಂಡಿನ ನಡುವಿನ ಜಗಳ-ಭಿನ್ನಾಭಿಪ್ರಾಯಗಳು ಬಹುತೇಕ ಬಾರಿ ಅಂತ್ಯ ಕಾಣುವುದೇ ಲೈಂಗಿಕ ಶೋಷಣೆಯ ಮೂಲಕ. ಹೆಣ್ಣನ್ನು ಅವಮಾನಿಸುವುದಕ್ಕೆ ಪುರುಷ ಸಮಾಜ ಲೈಂಗಿಕ ಹಿಂಸೆಯನ್ನು ಒಂದು ಆಯುಧವಾಗಿ ಬಳಸಿಕೊಳ್ಳುತ್ತಿದೆ. ಇದನ್ನು ಪ್ರಶ್ನಿಸುತ್ತಾ ಮತ್ತು ಹೆಣ್ಣನ್ನು ಲೈಂಗಿಕ ವಸ್ತುವಾಗಿ ನೋಡಬಾರದೆನ್ನುತ್ತಾ ಸಾಗುತ್ತಿರುವ ಕ್ಷೇತ್ರವೇ ಸಿನಿಮಾ ರಂಗ. ಆದರೆ ಆ ಕ್ಷೇತ್ರದ ಪ್ರತಿಪಾದನೆಗೂ ಅದು ಹೆಣ್ಣನ್ನು ನೋಡುವ ವಿಧಾನಕ್ಕೂ ತಾಳಮೇಳವಿಲ್ಲವೆಂದರೆ ಹೇಗೆ? ಆ ಕ್ಷೇತ್ರವೂ ಹೆಣ್ಣನ್ನು ಪಳಗಿಸುವುದಕ್ಕೆ ಲೈಂಗಿಕ ಶೋಷಣೆಯನ್ನೇ ಪರಿಣಾಮಕಾರಿ ಅಸ್ತ್ರವಾಗಿ ಪರಿಗಣಿಸಿದರೆ ಹೇಗೆ? ಹಾಗಂತ, ಅಲ್ಲಿಯ ವೇತನಾ ಕ್ರಮಗಳು ಹೇಗಿವೆ? ಸ್ತ್ರೀ-ಪುರುಷ ಸಮಾ ನತೆಯನ್ನು ಇಲ್ಲಿ ಪಾಲಿಸಲಾಗುತ್ತಿದೆಯೇ? ಹೀರೋಗೆ ಕೊಡುವಷ್ಟೇ ವೇತನವನ್ನು ಹೀರೋಯಿನ್‍ಗೂ ಕೊಡಲಾಗುತ್ತಿದೆಯೇ? ಸಿನಿಮಾ ಅಂದರೆ ಹೀರೋ ಮತ್ತು ಹೀರೋಯಿನ್ ಮಾತ್ರ ಅಲ್ಲ. ನೂರಾರು ಕಾರ್ಮಿಕರನ್ನೊಳಗೊಂಡ ವಿಶಾಲ ಕ್ಷೇತ್ರ ಅದು. ಅಲ್ಲಿ ಕಾರ್ಮಿಕರಾಗಿರುವ ಹೆಣ್ಣು ಮತ್ತು ಗಂಡಿನ ಸ್ಥಿತಿ-ಗತಿಗಳು ಹೇಗಿವೆ? ಕಾರ್ಮಿಕ ಕಾನೂನುಗಳು ಈ ಕ್ಷೇತ್ರಕ್ಕೆ ಅನ್ವಯ ವಾಗುತ್ತಿವೆಯೇ? ವಾರಗಳ ಹಿಂದೆ ಸಂಜನಾ ಎಂಬ ಕನ್ನಡ ನಟಿಯ ಬಗ್ಗೆ ಟಿ.ವಿ. ಮಾಧ್ಯಮಗಳು ಸಾಕಷ್ಟು ಹೊತ್ತು ಚರ್ಚಿಸಿದುವು. ಆಕೆಯ ನಗ್ನ ದೃಶ್ಯದ ವೀಡಿಯೋ ಸೋರಿಕೆ ಯಾಗಿರುವುದನ್ನೂ ಸೋರಿಕೆಗಿರಬಹುದಾದ ಕಾರಣಗಳ ಸಾಧ್ಯಾ ಸಾಧ್ಯತೆಗಳನ್ನೂ ಚರ್ಚಿಸಿದುವು. ದುರಂತ ಏನೆಂದರೆ, ಯಾರೂ ಕೂಡ ನಟಿಯದ್ದೇ ನಗ್ನ ವೀಡಿಯೋ ಯಾಕೆ ಸೋರಿಕೆಯಾಗಬೇಕು ಎಂದು ಪ್ರಶ್ನಿಸಲಿಲ್ಲ. ನಗ್ನತೆ ಎಂಬುದು ಹೆಣ್ಣಿಗೆ ಸಂಬಂಧಿಸಿ ಮಾತ್ರ ಇರುವ ವಿಶೇಷತೆ ಏನಲ್ಲ. ಪುರುಷನೂ ನಗ್ನನಾಗಬಲ್ಲ. ಆದರೆ ವಿವಾದಾತ್ಮಕ ಸೋರಿಕೆಗಳೆಲ್ಲ ಹೆಣ್ಣನ್ನೇ ಯಾಕೆ ಸುತ್ತಿ ಕೊಂಡಿರುತ್ತವೆ? ಚಿತ್ರ ಬಿಡುಗಡೆಯ ಮೊದಲು ಹೆಣ್ಣಿನ ದೇಹ ವನ್ನು ಕೇಂದ್ರೀಕರಿಸಿ ವೀಡಿಯೋವನ್ನೋ ಚಿತ್ರವನ್ನೋ ಯಾಕೆ ಸೋರಿಕೆಯೋ ಬಿಡುಗಡೆಯೋ ಮಾಡಲಾಗುತ್ತದೆ? ಒಂದು ಕಡೆ ಹೆಣ್ಣು ಬರೇ ದೇಹವಲ್ಲ ಎಂದು ಹೇಳುತ್ತಲೇ ಇನ್ನೊಂದು ಕಡೆ ಬರೇ ದೇಹವನ್ನೇ ಮುಖ್ಯವಾಗಿಸಿಕೊಂಡು ಸಿನಿಮಾ ತಯಾರಾಗುವುದು ಮತ್ತು ಅದೇ ದೇಹದ ಮೂಲಕ ಸಮಾನತೆ, ಹಕ್ಕು, ಸ್ವಾತಂತ್ರ್ಯಗಳ ಡಯಲಾಗ್‍ಗಳನ್ನು ಹೇಳಿಸುವುದರ ಅರ್ಥ ಏನು? ಇದರ ಹಿಂದೆ ಯಾರಿದ್ದಾರೆ? ಪುರುಷರೇ? ಇಂಥವು ಗಳನ್ನು ಮಹಿಳಾ ವಿರೋಧಿ ಎಂದು ಬಹಿರಂಗವಾಗಿ ಹೇಳುವ ನಟಿಯರು ಯಾಕೆ ಕಾಣಿಸುತ್ತಿಲ್ಲ? ಸಿನಿಮಾ ರಂಗದಲ್ಲೂ ಶೋಷಣೆ ಇದೆಯೇ? ಪುರುಷನ ಅಣತಿಯಂತೆ ಹೆಣ್ಣು ಕೆಲಸ ಮಾಡಬೇಕಿದೆಯೇ? ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯದ ಡಯಲಾಗ್‍ಗಳನ್ನು ಹೇಳುತ್ತಾ ಆ ಡಯಲಾಗ್‍ಗಳಿಗೆ ವಿರುದ್ಧವಾಗಿ ಬದುಕಬೇಕಾದ ಕ್ಷೇತ್ರವಾಗಿದೆಯೇ ಸಿನಿಮಾ ಕ್ಷೇತ್ರ? ಇಲ್ಲಿ ಇನ್ನೂ ಒಂದು ಪ್ರಶ್ನೆಯನ್ನು ಎತ್ತಬಹುದು. ಈ ಕ್ಷೇತ್ರಕ್ಕೆ ಹೊಸದಾಗಿ ಬರುವ ನಟಿಯರು ಮತ್ತು ಈಗಾಗಲೇ ತಳವೂರಿರುವ ನಟಿಯರು ಕೂಡ ಆಗಾಗ ಮಾಧ್ಯಮಗಳ ಮುಂದೆ ‘ಪಾತ್ರದ ಬೇಡಿಕೆಯನ್ನು ಅನುಸರಿಸಿ ಉಡುಪು ತೊಡಲು ಸಿದ್ಧ’ ಎಂದು ಹೇಳಿಕೊಳ್ಳುವುದಿದೆ. ಹಾಗಂದರೇನು? ಇದು ಇವರ ಮಾತೋ ಅಥವಾ ಈ ಇಂಡಸ್ಟ್ರೀ ಹೇಳಿಸುವ ಮಾತೋ? ಅಭಿನಯಕ್ಕಿಂತ ತೊಡುವ ಉಡುಪೇ ಯಾಕೆ ಮುಖ್ಯವಾಗಬೇಕು? ಯಾಕೆ ಯಾವ ನಟರೂ ಇಂಥ ಹೇಳಿಕೆಗಳನ್ನು ಕೊಡುವುದಿಲ್ಲ? ‘ಪಾತ್ರಕ್ಕೆ ತಕ್ಕಂತೆ ಉಡುಪು’ ಎಂಬುದು ಬರೇ ಹೆಣ್ಣಿಗೆ ಸಂಬಂಧಿಸಿ ಮಾತ್ರ ಇರುವ ನಿಯಮ ಅಲ್ಲವಲ್ಲ. ಪುರುಷನೂ ಪಾತ್ರಕ್ಕೆ ತಕ್ಕಂತೆ ಉಡುಪು ತೊಡಬೇಕಲ್ಲವೇ? ಮತ್ತೇಕೆ ನಟಿಯರೇ ಪಾತ್ರಕ್ಕೆ ತಕ್ಕಂತೆ ಉಡುಪು ಎಂಬ ಡಯಲಾಗ್‍ಗಳನ್ನು ಉದುರಿಸುತ್ತಾರೆ? ಈ ಕ್ಷೇತ್ರದಲ್ಲಿ ಪಾತ್ರಕ್ಕೆ ತಕ್ಕುದಲ್ಲದ ಉಡುಪನ್ನು ನಟಿಯರ ಮೇಲೆ ಹೇರುತ್ತಾರಾ? ಯಾರು ಅವರು? ಪುರುಷರೇ? ಮಹಿಳೆಯರೇ? ಈ ಕ್ಷೇತ್ರದಲ್ಲಿ ನಟರಿಗಿರುವ ಸ್ವಾತಂತ್ರ್ಯ ನಟಿಯರಿಗಿಲ್ಲವೇ? ನಟರ ಆಯ್ಕೆಗೆ ಪ್ರತಿಭೆ ಆಧಾರವಾಗುವಾಗ ನಟಿಯರ ಆಯ್ಕೆಗೆ ಪ್ರತಿಭೆಯ ಜೊತೆಗೇ ಇತರವುಗಳೂ ಆಧಾರವಾಗುತ್ತದೆಯೇ? ಇದು ಈ ಕ್ಷೇತ್ರ ಪ್ರತಿಪಾದಿಸುವ ಸ್ತ್ರೀ-ಪುರುಷ ಸಮಾನತೆಯ ಚೌಕಟ್ಟಿನೊಳಗಡೆ ಬರುತ್ತದೆಯೇ? ಸಿನಿಮಾ ಜಗತ್ತಿನ ಹೊರಗಡೆ ಸಂಭವಿಸುವ ಮಹಿಳಾ ಶೋಷಣೆಯ ಕುರಿತು ಆಗಾಗ ದಿಗ್ಭ್ರಮೆ ವ್ಯಕ್ತಪಡಿಸುವ ಸಿನಿಮಾ ಕ್ಷೇತ್ರದ ದಿಗ್ಗಜರು ಯಾಕೆ ಒಳಗಿನ ಈ ತೂತುಗಳ ಬಗ್ಗೆ ಯಾವ ದಿಗ್ಭ್ರಮೆಯನ್ನೂ ವ್ಯಕ್ತಪಡಿಸುವುದಿಲ್ಲ?
ಮಹಿಳಾ ಸಮಾನತೆ, ಸಮಾನ ಪ್ರಾತಿನಿಧ್ಯ, ಸಮಾನ ಸ್ವಾತಂತ್ರ್ಯ.. ಇತ್ಯಾದಿಗಳೆಲ್ಲ ಪುರುಷ ತನ್ನ ಅನುಕೂಲಕ್ಕಾಗಿ ಹುಟ್ಟು ಹಾಕಿರುವ ಪದಪುಂಜಗಳೇನೋ ಅನ್ನುವ ಅನುಮಾನಕ್ಕೆ ಇವು ಮತ್ತು ಇಂಥ ಇನ್ನಿತರ ಸಂಗತಿಗಳು ಪುಷ್ಠಿಯನ್ನು ನೀಡುತ್ತಲೇ ಇವೆ. ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಇಂದಿಗೆ 21 ವರ್ಷಗಳೇ ಸಂದಿವೆ. 1996 ಸೆ. 12ರಂದು ಮಹಿಳೆಯರಿಗೆ ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ 33% ಮೀಸಲಾತಿ ನೀಡುವ ಮಸೂದೆಯನ್ನು ಮೊದಲ ಬಾರಿ ಮಂಡಿಸಲಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲೇ ಸೇರಿಸಿಕೊಂಡ ವಿಷಯ ಇದು. ಆದರೆ ರಾತೋರಾತ್ರಿ ನೋಟು ಅಮಾನ್ಯಗೊಳಿಸಿದ ಬಿಜೆಪಿಗೆ, ಪಾರ್ಲಿಮೆಂಟನ್ನು ವಿಶ್ವಾಸಕ್ಕೆ ಪಡೆದುಕೊಂಡು ಜಿಎಸ್‍ಟಿಯನ್ನು ಜಾರಿಗೊಳಿಸಿದ ಬಿಜೆಪಿಗೆ, ‘ಜಾನುವಾರು ಮಾರಾಟ ಕಾಯ್ದೆ’ಯನ್ನು ತರಾತುರಿಯಿಂದ ಜಾರಿಗೊಳಿಸುವ ಉಮೇದು ವ್ಯಕ್ತಪಡಿಸಿದ ಬಿಜೆಪಿಗೆ ಸ್ವತಃ ಪ್ರಣಾಳಿಕೆಯಲ್ಲೇ ಭರವಸೆ ನೀಡಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಕಾನೂನಾಗಿಸುವುದಕ್ಕೆ ಈ ವರೆಗೂ ಸಾಧ್ಯವಾಗಿಲ್ಲ. ಪ್ರಣಾಳಿಕೆಯಲ್ಲೇ ಇಲ್ಲದ ನೋಟು ಅಮಾನ್ಯ ಎಂಬ ಅತಿ ಧೈರ್ಯದ ನಿರ್ಧಾರ ತಳೆದ ಬಿಜೆಪಿಯು ಯಾಕೆ 2 ದಶಕಗಳಿಂದ ಕಾಯುತ್ತಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಕಾನೂನಾಗಿಸುವ ಧೈರ್ಯ ತೋರಿಸುತ್ತಿಲ್ಲ? ಇಲ್ಲಿನ ಪ್ರಶ್ನೆ ಧೈರ್ಯದ್ದೋ ಅಥವಾ ಪುರುಷಾಧಿಪತ್ಯಕ್ಕೆ ಹೊಡೆತ ಬೀಳುತ್ತದೆ ಎಂಬ ಭಯದ್ದೋ? ಇಲ್ಲೂ ಮತ್ತದೇ ಶೋಷಣಾತ್ಮಕ ಮನಸ್ಥಿತಿಯೇ ಎದ್ದು ಕಾಣುತ್ತದೆ. ಭಾರತೀಯ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಬಹುತೇಕ ಪುರುಷರಷ್ಟೇ ಇದೆ. ಇದರ ಆಧಾರದಲ್ಲಿ ಹೇಳುವುದಾದರೆ ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ ಅರ್ಧಕ್ಕರ್ಧ ಮಂದಿ ಮಹಿಳೆಯರಿರಬೇಕಿತ್ತು. ಆದರೆ, ಸದ್ಯ ಭಾರತದ ಪಾರ್ಲಿಮೆಂಟ್‍ನಲ್ಲಿ ಮಹಿಳೆಯರ ಸಂಖ್ಯೆ 12%. ಒಂದು ವೇಳೆ 33% ಮೀಸಲಾತಿಯು ಜಾರಿಯಾದರೆ ಕರ್ನಾಟಕದ ವಿಧಾನ ಸಭೆಯಲ್ಲಿ 84 ಶಾಸಕಿಯರಿರಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ನಿಜವಾಗಿ, ಮಹಿಳಾ ಜನಸಂಖ್ಯೆಗೆ ಸಂಬಂಧಿಸಿ ಹೇಳುವುದಾದರೆ ಈ ಸಂಖ್ಯೆಯೂ ಕನಿಷ್ಠವೇ. ಗಂಡಿಗೆ ಹೆಣ್ಣು ಸಮಾನ ಎಂದು ಪ್ರತಿಪಾದಿಸುವ ವ್ಯವಸ್ಥೆಯಲ್ಲಿ ಆ ಸಮಾನತೆಯ ಸಣ್ಣ ಮಾದರಿಯನ್ನೂ ಪ್ರಾಯೋಗಿಕವಾಗಿ ಪ್ರಸ್ತುತಪಡಿಸುವುದು ಅಸಾಧ್ಯವಾಗುತ್ತಿರುವುದೇಕೆ? ಅದೇ ವೇಳೆ, ಮಹಿಳಾ ಸಮಾನತೆ, ಸ್ವಾತಂತ್ರ್ಯ, ಹಕ್ಕು ಗಳನ್ನು ಅತ್ಯಂತ ಪ್ರಬಲವಾಗಿ ಮಂಡಿಸುವ ಸಿನಿಮಾ ಕ್ಷೇತ್ರದಲ್ಲಿ ಹೆಣ್ಣು ದನಿ ರಹಿತಳಾಗಿ ಮತ್ತು ದೇಹ ಕೇಂದ್ರಿತ ವಸ್ತುವಾಗಿ ಪರಿಗಣನೆಗೆ ಒಳಗಾಗುತ್ತಿರುವುದೇಕೆ? ಇದರ ಅರ್ಥವೇನು? ಸದ್ಯ ಪ್ರತಿಪಾದಿಸಲಾಗು ತ್ತಿರುವ ರೀತಿಯ ಮಹಿಳಾ ಸಮಾನತೆಯು ಪ್ರಾಯೋಗಿಕವಾಗಿ ಅಸಾಧ್ಯವೇ? ಇದು ಸಿನಿಮಾಗಳಿಗೆ, ಭಾಷಣಗಳಿಗೆ ಮತ್ತು ಬರಹಗಳಿಗೆ ಮಾತ್ರ ಒಗ್ಗುವ ಮತ್ತು ಬದುಕಿ ತೋರಿಸಲು ಅಸಾಧ್ಯವಾದ ಚಿಂತನೆಯೇ?

No comments:
Post a Comment