ಹೆಣ್ಣು ಸ್ವಯಂ ವೇಶ್ಯೆ ಅಲ್ಲ. ಗಂಡು ಆಕೆಯನ್ನು ವೇಶ್ಯೆಗೊಳಿಸುತ್ತಾನೆ. ಆತನ ಸಂಪರ್ಕದಿಂದಾಗಿ ಆಕೆ ವೇಶ್ಯೆಯಾಗುತ್ತಾಳೆ. ಆದರೂ ಮಾಂಸದಂಧೆ, ವೇಶ್ಯಾವಾಟಿಕೆ, ಮೈ ಮಾರುವಿಕೆ.. ಮುಂತಾದ ಪದಗಳೆಲ್ಲ ಹೆಣ್ಣಿನ ಸುತ್ತವೇ ಗಿರಕಿ ಹೊಡೆಯುತ್ತಿರುವುದೇಕೆ? ಇವು ಮತ್ತು ಇಂಥ ಅನೇಕ ಪದಗಳಲ್ಲಿ ಒಂದು ಪದವನ್ನಾದರೂ ಆಕೆಯನ್ನು ವೇಶ್ಯೆಗೊಳಿಸಿದ ಪುರುಷನಿಗೆ ಈ ಸಮಾಜ ಇನ್ನೂ ಕೊಡದಿರುವುದು ಯಾವ ಕಾರಣದಿಂದ? ಹೆಣ್ಣು ವೇಶ್ಯೆಯಾಗಿ ಸಮಾಜದ ಮುಖ್ಯವಾಹಿನಿಯಿಂದ ಹೊರ ನಿಂತೋ ಘನತೆರಹಿತವಾಗಿಯೋ ಬದುಕುತ್ತಿರುವಾಗ ಅದಕ್ಕೆ ಕಾರಣನಾದವ ಸಕಲ ಮರ್ಯಾದೆ ಮತ್ತು ಪೂರ್ಣ ಸ್ವಾತಂತ್ರ್ಯದೊಂದಿಗೆ ಬದುಕುತ್ತಿದ್ದಾನಲ್ಲ, ಯಾಕೆ ಇದು ಚರ್ಚಾರ್ಹಗೊಳ್ಳುತ್ತಿಲ್ಲ? ಹಾಗಂತ, ಹೆಣ್ಣನ್ನು ಹೀಗೆ ವೇಶ್ಯೆಗೊಳಿಸಿದವ ರಾಜಕಾರಣಿ ಆಗಿರಬಹುದು, ಧಾರ್ಮಿಕ ಮುಖಂಡ, ಹೋರಾಟಗಾರ, ಸಮಾಜಸೇವಕ, ಬುದ್ಧಿಜೀವಿ, ಸಾಹಿತಿ, ಪತ್ರಕರ್ತ, ವೈದ್ಯ, ಇಂಜಿನಿಯರ್, ನ್ಯಾಯವಾದಿ, ಸಾಮಾನ್ಯ.. ಯಾರೂ ಆಗಿರಬಹುದು. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ಎಂದೋ ನಿಷೇಧ ವಿಧಿಸಿ ಎಂದೋ ಆತ ಆಗ್ರಹಿಸಿರಬಹುದು. ಆ ಕುರಿತಾದ ಪ್ರತಿಭಟನೆಗಳಲ್ಲಿ ಮುಂದಾಳುತ್ವ ವಹಿಸಿರಬಹುದು. ಹೆಣ್ಣಿನ ಹಕ್ಕು-ಸಮಾನತೆಯ ಕುರಿತಂತೆ ಚರ್ಚಿಸಿರಬಹುದು.. ಇವೆಲ್ಲ ಏನು? ಪುರುಷ ಯಜಮಾನಿಕೆ ಅಲ್ಲವೇ? ಪುರುಷನಿಗೆ ಸಮಾಜದಲ್ಲಿ ಸಿಗುವಷ್ಟೇ ಗೌರವ ಆತನಿಂದ ‘ವೇಶ್ಯೆ' ಆದವಳಿಗೂ ಸಿಗಬೇಕೆಂದು ಒತ್ತಾಯಿಸಿ ಯಾಕೆ ಯಾರೂ ಹೋರಾಟ ಮಾಡುತ್ತಿಲ್ಲ? ಆಕೆಯನ್ನು ‘ವೇಶ್ಯೆ' ಮಾಡಿದವರ ಭಾವಚಿತ್ರ ಮತ್ತು ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ಒತ್ತಾಯಿಸುತ್ತಿಲ್ಲ? ಹೆಣ್ಣಿನಿಂದ ಸುಖವನ್ನು ಪಡೆದ ಪುರುಷ ಆಕೆಗೆ ವೇಶ್ಯೆ ಎಂಬ ಬಿರುದನ್ನು ದಯಪಾಲಿಸಿ ಹಿಂತಿರುಗುತ್ತಾನೆ. ಆದರೆ ಆಕೆಯಿಂದ ಆತ ಯಾವ ಬಿರುದನ್ನೂ ಪಡಕೊಳ್ಳುವುದಿಲ್ಲ. ಈ ತಾರತಮ್ಯದ ಬಗ್ಗೆ ಸಮಾಜದ ನಿಲುವು ಏನು? ಅಷ್ಟಕ್ಕೂ, ಆತ ಸುಖಕ್ಕೆ ಬದಲಾಗಿ ದುಡ್ಡು ಪಾವತಿಸುತ್ತಾನೆ ಎಂದು ವಾದಿಸಬಹುದು. ಓರ್ವ ಹೆಣ್ಣಿಗೆ ತನ್ನ ಮಾನ, ಮರ್ಯಾದೆ, ಗೌರವ ಮುಂತಾದುವುಗಳನ್ನೆಲ್ಲ ವಿೂರಿ ಬದುಕಬೇಕಾದಂಥ ಬಡತನದ ಪರಿಸ್ಥಿತಿ ಎದುರಾಗಿದೆಯೆಂದರೆ ಅದಕ್ಕೆ ಈ ಪುರುಷ ಸಮಾಜದ ಪ್ರತಿಕ್ರಿಯಿಸಬೇಕಾದ ರೀತಿ ಯಾವುದು? ಲೈಂಗಿಕವಾಗಿ ಬಳಸಿಕೊಳ್ಳುವುದೇ? ಓರ್ವರ ಅಸಹಾಯಕತೆಗೆ ಪ್ರತಿಕ್ರಿಯಿಸುವ ಮಾನವೀಯ ವಿಧಾನವೇ ಇದು? ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಪ್ರಕಾರ, ಹೆಚ್ಚಿನೆಲ್ಲ ವೇಶ್ಯೆಯರ ಹಿಂದೆ ಬಡತನದ ಕತೆಯಿದೆ. ಮಾನವ ಕಳ್ಳ ಸಾಗಾಣಿಕೆಯಿಂದಲೋ ಮೋಸಕ್ಕೊಳಗಾಗಿಯೋ ವೇಶ್ಯೆಯರಾಗುವವರ ಸಂಖ್ಯೆ ತೀರಾ ಕಡಿಮೆ. ಮಾನವ ಕಳ್ಳ ಸಾಗಾಣಿಕೆಗೆ ಗುರಿಯಾಗುವವರ ಹಿನ್ನೆಲೆಯೂ ಬಡತನದ್ದೇ. ಒಂದು ಕಡೆ ಅಸಹಾಯಕತೆ. ಇನ್ನೊಂದು ಕಡೆ ಆ ಅಸಹಾಯಕತೆಗೆ ನೆರವಾಗುವ ನೆಪದಲ್ಲಿ ಆಕೆಯ ದೇಹದ ದುರ್ಬಳಕೆ. ಯಾಕೆ ಇದು ಮಹಿಳಾ ದೌರ್ಜನ್ಯ ಅನ್ನಿಸಿಕೊಳ್ಳುತ್ತಿಲ್ಲ?
ಪುರಾತನ ಮೆಸಪಟೋಮಿಯ ಅಥವಾ ಹಮ್ಮುರಾಬಿ ನಾಗರಿಕತೆಯಲ್ಲಿ ವೇಶ್ಯಾವಾಟಿಕೆ ಇತ್ತು ಎಂದೋ ಅಥವಾ ಗ್ರೀಕ್‍ನ ಪೋರ್ನೊ ಎಂಬ ಪದದಿಂದ ಪೋರ್ನೋಗ್ರಫಿ ಎಂಬ ಪದ ಹುಟ್ಟಿಕೊಂಡಿದೆಯೆಂದೋ ವಾದಿಸುವುದು ಸುಲಭ. ಪುರಾತನ ಗ್ರೀಕ್‍ನ ಇತಿಹಾಸದಲ್ಲಿ ಲೈಸ್ ಎಂಬ ಮಹಿಳೆಯ ಚೆಲುವು ಮತ್ತು ಮಾದಕತೆಯ ಕತೆಯಿದೆ. ಆಕೆ ವೇಶ್ಯೆ ಆಗಿದ್ದಳೆಂದೂ ಆಕೆಯ ಚೆಲುವಿಗಾಗಿ ಹೆಚ್ಚಿನ ಮೊತ್ತ ಪಾವತಿಸಲಾಗುತ್ತಿತ್ತೆಂದೂ ಹೇಳಲಾಗುತ್ತದೆ. ಅಂದಹಾಗೆ, ಪುರಾತನ ಕಾಲದ ದೊಡ್ಡದೊಂದು ಇತಿಹಾಸವು ಅಮಾನವೀಯವಾಗಿತ್ತು. ದುರ್ಬಲರಾದ ಮಹಿಳೆ ಮತ್ತು ಪುರುಷರ ರಕ್ತದ ಕಲೆಗಳಿಂದ ಅವು ಬರೆಯಲ್ಪಟ್ಟಿತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನಿನ ಮಿಲಿಟರಿ ವೇಶ್ಯಾಗೃಹದಲ್ಲಿ ಚೀನಾ, ಕೊರಿಯ ಮತ್ತಿತರೆಡೆಯ 2 ಲಕ್ಷದಷ್ಟು ಮಹಿಳೆಯರು ಲೈಂಗಿಕ ತೃಷೆಗೆ ಒಳಗಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಗುಲಾಮರು ಮತ್ತು ದೇವದಾಸಿಯರಾಗಿ ಪುರುಷ-ಮಹಿಳೆಯರಿಬ್ಬರೂ ಈ ಜಗತ್ತಿನಾದ್ಯಂತ ಸರಣಿ ಅತ್ಯಾಚಾರಗಳನ್ನು ಅನುಭವಿಸಿದರು. ಆದ್ದರಿಂದಲೇ ಪ್ರವಾದಿ ಮುಹಮ್ಮದ್‍ರು(ಸ) ಗುಲಾಮತನ, ವೇಶ್ಯಾವಾಟಿಕೆಯನ್ನು ಕಾನೂನುಬಾಹಿರವೆಂದು ಸಾರಿದರು. ಕಮ್ಯುನಿಸ್ಟ್ ಚಿಂತಕರೂ ವೇಶ್ಯಾವಾಟಿಕೆಗೆ ವಿರುದ್ಧ ವಾಗಿದ್ದರು. 'Only a specific expression of the general prostitution of the laborer' ಎಂದು ಹೇಳಿದ್ದ ಕಾರ್ಲ್ ಮಾರ್ಕ್ಸ್, ‘ಕ್ಯಾಪಿಟಾಲಿಸಂನಿಂದ ಹೊರಬರುವುದಕ್ಕಾಗಿ ವೇಶ್ಯಾವಾಟಿಕೆಯನ್ನು ನಿಷೇಧಿಸಬೇಕಾಗಿದೆ’ ಎಂದು ವಾದಿಸಿದ್ದರು. ಫ್ರೆಡ್ರಿಕ್ ಏಂಗಲ್ಸ್ ರು, ಮದುವೆಯನ್ನೇ ‘ವೇಶ್ಯಾವಾಟಿಕೆಯ ವಿಧಾನ’ ಎಂದಿದ್ದರು. ವ್ಲಾದಿವಿೂರ್ ಲೆನಿನ್‍ರ ಪ್ರಕಾರ, ‘ವೇಶ್ಯಾವಾಟಿಕೆಯು ಅಸಹ್ಯ ಕೃತ್ಯ'. ಜಗತ್ತು ಕಮ್ಯುನಿಸಂನಿಂದ ಬಂಡವಾಳಶಾಹಿತ್ವಕ್ಕೆ ಹೊರಳಿದ ಬಳಿಕ ವೇಶ್ಯಾವಾಟಿಕೆಯ ಕುರಿತಂತೆ ಭಿನ್ನ ಭಿನ್ನ ವ್ಯಾಖ್ಯಾನಗಳು ವ್ಯಕ್ತವಾದುವು. ಆದರೆ ಇವತ್ತೂ 109 ರಾಷ್ಟ್ರಗಳು ವೇಶ್ಯಾವಾಟಿಕೆಯನ್ನು ಕಾನೂನುಬಾಹಿರ ಎಂದೇ ಪರಿಗಣಿಸಿವೆ. ಉತ್ತರ ಕೊರಿಯಾ, ಸುಡಾನ್, ಸೌದಿ ಅರೇಬಿಯಾ, ಇರಾನ್‍ಗಳಲ್ಲಿ ವೇಶ್ಯಾವಾಟಿಕೆಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ. ನಿಜವಾಗಿ, ಗ್ರೀಕ್, ರೋಮನ್, ಮೆಸಪೊಟೇಮಿಯ ನಾಗರಿಕತೆಗಳಲ್ಲಿ ಮತ್ತು ಬಳಿಕದ ಶತಮಾನಗಳಲ್ಲಿ ದುರ್ಬಲರಾದ ಹೆಣ್ಣು ಮತ್ತು ಗಂಡಿನ ಮೇಲೆ ದೈಹಿಕ ದೌರ್ಜನ್ಯಗಳು ನಡೆಯುತ್ತಿದ್ದುವು. ಹೆಣ್ಣು ಅತ್ಯಾಚಾರಕ್ಕೆ ಒಳಗಾಗುವಾಗ ಗಂಡು ಇತರ ಕಠಿಣ ದುಡಿಮೆಗಳಿಗೆ ಬಲಿಯಾಗುತ್ತಿದ್ದ. ಆದರೆ ಈ ಆಧುನಿಕ ಜಗತ್ತು ದುರ್ಬಲ ಪುರುಷರನ್ನು ಬಹುತೇಕ ಆ ದೌರ್ಜನ್ಯಗಳಿಂದ ಹೊರತಂದು ರಕ್ಷಿಸಿದೆ. ಗಣಿಗಳಲ್ಲಿ, ತೋಟ, ಕಾರ್ಖಾನೆಗಳಲ್ಲಿ ಜೀತಕ್ಕೆ ಒಳಗಾದವರಿಗೆ ಮುಕ್ತಿ ನೀಡುತ್ತಿದೆ. ಆದರೆ ದುರ್ಬಲ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಈ ಜಗತ್ತು ಅದೇ ಮಾನದಂಡದಲ್ಲಿ ವ್ಯಾಖ್ಯಾನಿಸುತ್ತಿಲ್ಲ. ಅದಕ್ಕೆ ವೇಶ್ಯಾವಾಟಿಕೆ ಎಂಬ ಬಿರುದನ್ನು ಕೊಟ್ಟು ಆ ದೌರ್ಜನ್ಯವನ್ನು ನ್ಯಾಯಬದ್ಧಗೊಳಿಸುವ ಜಾಣತನ ತೋರುತ್ತಿದೆ. ಆಕೆಯ ದೇಹವನ್ನು ಕಮರ್ಷಿಯಲ್ ಎಂದು ವ್ಯಾಖ್ಯಾನಿಸಿ ದುಡ್ಡು ಕೊಟ್ಟು ಆ ದೇಹವನ್ನು ಯಾರಿಗೆ ಬೇಕಾದರೂ ಪಡೆಯುವ ಅರ್ಹತೆಯಿದೆ ಎಂದು ಹೇಳುತ್ತಿದೆ.
ನಿಜವಾಗಿ, ಇಲ್ಲಿ ಚರ್ಚೆಗೊಳಗಾಗಬೇಕಾದದ್ದು ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೋ ಬೇಡವೋ ಎಂದಲ್ಲ, ವೇಶ್ಯೆಯರ ಅಗತ್ಯ ಯಾರಿಗಿದೆ ಮತ್ತು ಯಾಕಿದೆ ಎಂದು. ಯಾಕೆ ಪುರುಷರು ಇಂಥದ್ದೊಂದು ವ್ಯವಸ್ಥೆಯನ್ನು ಬಯಸುತ್ತಾರೆ? ವೇಶ್ಯೆಯ ಬಳಿಗೆ ಹೋಗುವ ಪುರುಷ ಯಾರದೋ ಮಗ, ಪತಿ, ಸಹೋದರ, ತಂದೆ.. ಆಗಿರುತ್ತಾರೆ. ಅವರಿಗೆ ತನ್ನ ಮನೆಯಲ್ಲಿ ಪತಿಯಾಗಿ, ತಂದೆಯಾಗಿ, ಮಗನಾಗಿ ಮತ್ತು ಇನ್ನಿತರ ಪಾತ್ರವಾಗಿ ಜವಾಬ್ದಾರಿಗಳಿವೆ. ಸಾಮಾಜಿಕವಾಗಿ ಐಡೆಂಟಿಟಿ ಇದೆ. ಈ ಪಾತ್ರಗಳಿಗೆಲ್ಲ ಅವರ ವೇಶ್ಯಾಸಂಗ ನ್ಯಾಯವನ್ನೂ ಗೌರವವನ್ನೂ ಒದಗಿಸಿಕೊಡಬಲ್ಲುದೇ? ಪತಿಯಾಗಿ ಓರ್ವ ವ್ಯಕ್ತಿ ತನ್ನ ವೇಶ್ಯಾಸಂಗವನ್ನು ಹೇಗೆ ಸಮರ್ಥಿಸಬಲ್ಲ? ಪತ್ನಿಯೊಂದಿಗೆ ಆತ ಈ ಸಂಗತಿಯನ್ನು ಹೇಳಬಲ್ಲನೇ? ಹಾಗೆ ಹೇಳಿದರೆ ಆಕೆಯ ಪ್ರತಿಕ್ರಿಯೆ ಏನಿದ್ದೀತು? ಆಕೆಯೂ ಅಂಥದ್ದೇ ಸ್ವಾತಂತ್ರ್ಯವನ್ನು ಬಯಸಿದರೆ ಆತನ ಪ್ರತಿಕ್ರಿಯೆ ಏನಿದ್ದೀತು? ಅವರ ಸಂಬಂಧ ಎಲ್ಲಿಯವರೆಗೆ ಮುಂದುವರಿದೀತು? ಓರ್ವ ತಂದೆ ತನ್ನ ವೇಶ್ಯಾಸಂಗವನ್ನು ತನ್ನ ಮಕ್ಕಳ ಜೊತೆ ಹಂಚಿಕೊಳ್ಳಬಲ್ಲರೇ? ಮಗ ತನ್ನ ತಾಯಿಯೊಂದಿಗೋ ತಂದೆಯೊಂದಿಗೋ ‘ತಾನು ಹೀಗೆ’ ಎಂದು ಹೇಳಿ ಕೊಳ್ಳಬಲ್ಲನೇ? ವೇಶ್ಯೆಯನ್ನು ಅನುಭವಿಸುವ ಓರ್ವ ಶಿಕ್ಷಕನನ್ನು ಸಮಾಜ ಹೇಗೆ ಸ್ವೀಕರಿಸಬಹುದು? ಅಂದ ಹಾಗೆ, ವೇಶ್ಯಾವಾಟಿಕೆಯ ಸುತ್ತ ಚರ್ಚಿಸುವಾಗ ನಾವೆಲ್ಲ ಯಾಕೆ ಈ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಿಲ್ಲ? ಸಾಮಾಜಿಕ ಸಂಬಂಧಗಳು ಗಟ್ಟಿಯಾಗಿರುವುದೇ ನಂಬಿಕೆಗಳ ಮೇಲೆ. ಪತ್ನಿಗೆ ಪತಿಯ ಮೇಲೆ, ಮಗಳಿಗೆ ತಂದೆಯ ಮೇಲೆ, ಹೆತ್ತವರಿಗೆ ಮಕ್ಕಳ ಮೇಲೆ, ಮಕ್ಕಳಿಗೆ ಶಿಕ್ಷಕರ ಮೇಲೆ.. ಇಂಥ ನಂಬಿಕೆಗಳ ಮೇಲೆ ವೇಶ್ಯಾಸಂಗ ಬೀರುವ ಪರಿಣಾಮಗಳು ಯಾವ ಬಗೆಯವು? ಹೀಗಿರುತ್ತಾ, ಮಹಿಳಾ ಹಕ್ಕು, ಸಮಾನತೆಯ ಬಗ್ಗೆ ಮಾತಾಡುವ ಜಗತ್ತಿಗೆ ಯಾಕೆ ವೇಶ್ಯಾವಾಟಿಕೆಯು ಪುರುಷ ಜಗತ್ತಿನ ಸೃಷ್ಟಿ ಎಂದು ಅನಿಸುತ್ತಿಲ್ಲ? ಪುರುಷನ ಬಯಕೆಯನ್ನು ತೀರಿಸುವುದಕ್ಕೆ ಮದುವೆಯ ಹೊರತಾದ ವ್ಯವಸ್ಥೆಯೊಂದು ಇರಬೇಕು ಎಂದಾದರೆ ಮಹಿಳೆಯ ಬಯಕೆಯನ್ನು ತೀರಿಸುವುದಕ್ಕೂ ಒಂದು ವ್ಯವಸ್ಥೆ ಇರಬೇಕೆಂದು ಮಹಿಳಾ ಜಗತ್ತು ವಾದಿಸುತ್ತಿಲ್ಲವೇಕೆ? ಆ ವ್ಯವಸ್ಥೆ ಯಾಕೆ ಈ ವರೆಗೆ ಅಸ್ತಿತ್ವಕ್ಕೆ ಬಂದಿಲ್ಲ? ಅಷ್ಟಕ್ಕೂ, ಪುರುಷನಿಗೇಕೆ ಅಂಥದ್ದೊಂದು ವ್ಯವಸ್ಥೆಯ ಅಗತ್ಯವಿದೆ? ಆತನೇನು ಮಹಿಳೆಗಿಂತ ಮಿಗಿಲೇ? ಮಹಿಳೆಗಿಲ್ಲದ ಕೆಲವು ವಿಶೇಷ ರಿಯಾಯಿತಿ, ಸೌಲಭ್ಯಗಳು ಪುರುಷನಿಗೆ ಅಗತ್ಯವಿದೆ ಮತ್ತು ಅದರಲ್ಲಿ ಮಹಿಳೆಯ ದೇಹವೂ ಒಂದು ಎಂದು ಕಲಿಸಿದವರು ಯಾರು? ಈ ಅಸಮಾನತೆಯ ಪಾಠವನ್ನು ಖಂಡಿಸುವ ಮತ್ತು ಪ್ರತಿಭಟಿಸುವ ಬದಲು ಅದನ್ನೇ ಕಾನೂನುಬದ್ಧಗೊಳಿಸಿ ಎಂದು ಒತ್ತಾಯಿಸುವುದು ಯಾವ ಬಗೆಯ ಸಮಾನತೆ?
ಅತ್ಯಾಚಾರಕ್ಕೂ ವೇಶ್ಯಾವಾಟಿಕೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಒಂದು ಕಡೆ ಪುರುಷ ಹೆಣ್ಣಿನ ಅನುಮತಿಯನ್ನು ಪಡೆಯದೇ ದೈಹಿಕ ಸುಖವನ್ನು ಪಡೆಯುವಾಗ ಇನ್ನೊಂದು ಕಡೆ ಅವಳ ಅಸಹಾಯಕೆಯನ್ನೇ ಅನುಮತಿಯನ್ನಾಗಿ ಪರಿವರ್ತಿಸಿಕೊಂಡು ಸುಖ ಪಡೆಯುತ್ತಾನೆ. ಎರಡರಲ್ಲೂ ಗಂಡಿನ ದಬ್ಬಾಳಿಕೆ ಮತ್ತು ಹೆಣ್ಣಿನ ಅಸಹಾಯಕತೆಗಳಿವೆ. ಆದರೆ, ಒಂದು ದಬ್ಬಾಳಿಕೆಯಾಗಿಯೂ ಇನ್ನೊಂದು ಪುರುಷ ಸಮಾಜದ ಸಹಜ ಬೇಡಿಕೆಯಾಗಿಯೂ ಗುರುತಿಗೀಡಾಗಿದೆ. ಮುಸ್ಲಿಮ್ ಮಹಿಳೆಯರು ತೊಡುವ ಬುರ್ಖಾವನ್ನು ಪುರುಷ ಯಜಮಾನಿಕೆಯಾಗಿ ಮತ್ತು ಅಸಮಾನತೆಯ ಸಂಕೇತವಾಗಿ ವ್ಯಾಖ್ಯಾನಿಸುವವರೇ ವೇಶ್ಯಾವಾಟಿಕೆಯು ಕಾನೂನು ಬದ್ಧಗೊಳ್ಳಬೇಕೆಂದು ವಾದಿಸುತ್ತಾರೆ. ಅದಕ್ಕಿರುವ ಪುರಾತನ ಹಿನ್ನೆಲೆಯನ್ನು ಮುಂದಿಡುತ್ತಾರೆ. ಆದರೆ ಸಮಾಜದಲ್ಲಿ ಎಲ್ಲರಂತೆ ಸಹಜವಾಗಿ ಬಾಳಿ ಬದುಕಬೇಕಾದ ಓರ್ವ ಹೆಣ್ಣನ್ನು ವೇಶ್ಯೆ ಮಾಡುವುದು ಪುರುಷ ದಬ್ಬಾಳಿಕೆ, ಯಜಮಾನಿಕೆಯಾಗಿ ಗುರುತಿಸಿಕೊಳ್ಳದೇ ಆಯ್ಕೆ ಸ್ವಾತಂತ್ರ್ಯವಾಗಿ ವ್ಯಾಖ್ಯಾನಗೊಳ್ಳುತ್ತದೆ. ಅಂದ ಹಾಗೆ, ವೇಶ್ಯವಾಟಿಕೆಯು ಓರ್ವ ಹೆಣ್ಣು ಮಗಳ ಪಾಲಿಗೆ ಆಯ್ಕೆಯೋ ಅನಿವಾರ್ಯವೋ ಆಗಬಹುದಾದ ಸಂದರ್ಭ ಯಾವುದು? ಯಾವ ಹೆಣ್ಣೂ ತನ್ನ ಬದುಕಿನ ಪ್ರಥಮ ಆಯ್ಕೆಯಾಗಿ ವೇಶ್ಯಾವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಲ್ಲಳೇ? ಹಾಗೆ ವಾದಿಸುವುದು ಎತ್ತು-ಕುರಿಗಳು ಸ್ವಯಂ ಕಸಾಯಿಖಾನೆಯನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂದು ವಾದಿಸಿದಂತಾಗದೆ? ಹೆಣ್ಣಿನ ಪಾಲಿಗೆ ವೇಶ್ಯಾವಾಟಿಕೆ ಕಟ್ಟಕಡೆಯ ಆಯ್ಕೆ. ತನ್ನ ಅನಿವಾರ್ಯತೆಯನ್ನು ಪೂರೈಸಲು ಬೇರೆ ಯಾವುದೇ ಮಾರ್ಗ ಇಲ್ಲದೇ ಇರುವಾಗ ತನ್ನ ಸಹಜ ಲಜ್ಜೆಯನ್ನು ಬಲವಂತದಿಂದ ಬದಿಗಿರಿಸಿ ಆಕೆ ದೇಹವನ್ನು ಪಣಕ್ಕಿಡಬಯಸುತ್ತಾಳೆ. ಅದವಳ ಆಯ್ಕೆಯಲ್ಲ, ಅನಿವಾರ್ಯತೆ. ನಿಜವಾಗಿ, ಅಂಥ ಅನಿವಾರ್ಯತೆಗಳು ಪುರುಷನಿಗೂ ಎದುರಾಗುತ್ತವೆ. ಆದರೆ ಆತ ಅದನ್ನು ಎದುರಿಸುವುದಕ್ಕೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಾನೆ. ಆದರೆ ಹೆಣ್ಣಿಗೆ ಅಂಥ ಅನಿವಾರ್ಯತೆ ಎದುರಾದಾಗ ಪುರುಷ ಆಕೆಯ ದೇಹವನ್ನು ಬಯಸುತ್ತಾನೆ. ಹೆಣ್ಣಿನ ಅನಿವಾರ್ಯತೆಗೆ ದೇಹವನ್ನು ಬಳಸದೆಯೇ ನೆರವಾಗುವ ಅವಕಾಶ ಇದ್ದರೂ, ಆಕೆಯನ್ನು ಆತ ವೇಶ್ಯಗೊಳಿಸುತ್ತಾನೆ. ಮಾತ್ರವಲ್ಲ, ತನ್ನ ವೇಶ್ಯಾಸಂಗವನ್ನು ಮರೆಮಾಚಿ ಸಮಾಜದಲ್ಲಿ ಬದುಕುತ್ತಿರುತ್ತಾನೆ. ಇಷ್ಟಿದ್ದೂ, ಇದು ಪುರುಷ ಯಜಮಾನಿಕೆ ಮತ್ತು ಮಹಿಳಾ ದೌರ್ಜನ್ಯ ಅಲ್ಲ ಎಂದಾದರೆ ಜುಜುಬಿ ಬುರ್ಖಾ ಯಾವ ಲೆಕ್ಕ? ಅದರ ವಿರುದ್ಧವೇಕೆ ಈ ಪರಿ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ?

No comments:
Post a Comment