ಮುಗೇನಿ |
'ನಾನು ಕಾನೂನು ಉಲ್ಲಂಘಿಸಿದ್ದೇನೆಂದು ನೀವು ವಾದಿಸುವುದಾದರೆ ಹಾಗೆ ವಾದಿಸಿಕೊಳ್ಳಿ. ಆದರೆ, ಈ ಉಲ್ಲಂಘನೆಯು ನನಗಾಗಿ ಅಲ್ಲ ಎಂಬುದು ನಿಮಗೆ ಚೆನ್ನಾಗಿಯೇ ಗೊತ್ತು. ನನ್ನ ಜನರು ದುಬಾರಿ ಔಷಧವನ್ನು ಖರೀದಿಸಲಾಗದೇ ಪ್ರತಿ ದಿನ ಸಾಯುತ್ತಿದ್ದಾರೆ. ಅವರಲ್ಲಿ ನಿಮ್ಮ ಗೆಳೆಯರಿರಬಹುದು, ಸಂಬಂಧಿಕರು, ಇತರರಿರಬಹುದು. ಅವರನ್ನು ರಕ್ಷಿಸುವ ಪ್ರಯತ್ನವನ್ನಷ್ಟೇ ನಾನು ಮಾಡಿದ್ದೇನೆ. ನಾನು ಭಾರತ ದಿಂದ ತಂದ ಜೆನೆರಿಕ್ ಔಷಧಗಳು ವಿಮಾನ ನಿಲ್ದಾಣದಲ್ಲಿವೆ. ಇನ್ನು ನೀವು ಏನನ್ನು ಮಾಡುತ್ತೀರೋ ಹಾಗೆ ಮಾಡಿಕೊಳ್ಳಿ. ನನ್ನ ಜನರ ಜೀವವನ್ನು ಉಳಿಸುವುದಕ್ಕೆ ಅವನ್ನು ಬಳಸುತ್ತೀರೋ ಅಥವಾ ಔಷಧ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಅವನ್ನು ನಾಶಪಡಿಸ್ತೀರೋ... ನಿಮಗೇ ಬಿಟ್ಟದ್ದು. ನಾನು ಮಾತ್ರ ಆ ಔಷಧವನ್ನು ಕಳಕೊಳ್ಳುವುದಕ್ಕಿಂತ ಬಂಧನವನ್ನು ಇಷ್ಟಪಡುತ್ತೇನೆ.'
ನಿಜವಾಗಿ, ಆಫ್ರಿಕಾ ಖಂಡವನ್ನು ಕಾಡುತ್ತಿರುವ ಏಡ್ಸ್ ನ ಬಗ್ಗೆ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಹಿಪಾಕ್ರಸಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭಗೊಂಡದ್ದೇ ಆಗ.
ಗ್ಲಾಕ್ಸೋಸ್ಮಿತ್ ಕ್ಲೈನ್
ರೋಚೆ
ನೊವರ್ಟೀಸ್
ಎಲಿ ಲಿಲ್ಲಿ
ಅಬ್ಬೋಟ್
ಮುಂತಾದ ಬೃಹತ್ ಕಂಪೆನಿಗಳೇ ಇವತ್ತು ಔಷಧಗಳನ್ನು ತಯಾರಿಸುತ್ತಿರುವುದು. ಅಮೇರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮುಂತಾದ ಕೆಲವೇ ಕೆಲವು ರಾಷ್ಟ್ರಗಳಿಗೆ ಸೇರಿದ ಈ ಕಂಪೆನಿಗಳು ತಮ್ಮ ಔಷಧಗಳಿಗೆ ಯಾವ ಬೆಲೆಯನ್ನು ನಿಗದಿಪಡಿಸುತ್ತದೋ ಅದನ್ನು ಪ್ರಶ್ನಿಸದೇ ತೆರಬೇಕಾದ ಅನಿವಾರ್ಯತೆ ಇವತ್ತು ಎಲ್ಲರ ಮುಂದೆಯೂ ಇದೆ. ಒಂದು ಔಷಧವನ್ನು ತಯಾರಿಸುವುದಕ್ಕೆ ತಗಲುವ ಖರ್ಚೆಷ್ಟು, ಯಾವ ಮಾನದಂಡದಲ್ಲಿ ಬೆಲೆ ನಿಗದಿ ಪಡಿಸುತ್ತೀರಿ ಎಂಬೆಲ್ಲ ಪ್ರಶ್ನೆಗಳನ್ನು ನಾವು ಎತ್ತುವಂತಿಲ್ಲ. ಎತ್ತಿದರೂ ಪೇಟೆಂಟ್ ಕಾನೂನನ್ನು ಮುಂದು ಮಾಡಿ ಈ ಕಂಪೆನಿಗಳು ಜಾರಿಕೊಳ್ಳುತ್ತವೆ. ಒಂದು ವಸ್ತುವಿನ ಪೇಟೆಂಟನ್ನು ಒಂದು ಔಷಧ ಕಂಪೆನಿಯು ಪಡೆದುಕೊಂಡರೆ, ಆ ಬಳಿಕ ಆ ವಸ್ತುವಿನ ಬೆಲೆಯನ್ನು ನಿಗದಿಪಡಿಸುವ ಸಂಪೂರ್ಣ ಸ್ವಾತಂತ್ರ್ಯ ಆ ಕಂಪೆನಿಗಿದೆ. ಅಲ್ಲದೇ, ಆ ವಸ್ತುವನ್ನು ಇನ್ನಾವುದೇ ಕಂಪೆನಿ ತಯಾರಿಸುವುದಕ್ಕೂ ಸಾಧ್ಯವಿಲ್ಲ. ಇಷ್ಟಕ್ಕೂ, ಔಷಧವೆಂಬುದು ಗ್ರೈಂಡರ್, ಫ್ರಿಡ್ಜು, ಟಿ.ವಿ., ಕಂಪ್ಯೂಟರ್‍ಗಳಂತೆ ಅಲ್ಲವಲ್ಲ. ಒಂದು ಕಂಪೆನಿಯ ಟಿ.ವಿ. ಇಷ್ಟವಿಲ್ಲದಿದ್ದರೆ ಇನ್ನೊಂದು ಕಂಪೆನಿಯ ಟಿ.ವಿ.ಯನ್ನು ಖರೀದಿಸಬಹುದು ಅಥವಾ ಖರೀದಿಸದೆಯೂ ಇರಬಹುದು. ಹಾಗಂತ ಔಷಧ ಖರೀದಿಸದೇ ಇರಲು ಸಾಧ್ಯವಿಲ್ಲವಲ್ಲ. ಮುಗೇನಿ ಪ್ರಶ್ನಿಸಿದ್ದೇ ಈ ಅನ್ಯಾಯವನ್ನು.
1980ರಲ್ಲಿ ಏಡ್ಸನ್ನು ಮೊತ್ತಮೊದಲ ಬಾರಿ ಗುರುತಿಸಿದಾಗ, ಆಫ್ರಿಕಾ ಖಂಡ ಬೆಚ್ಚಿಬಿದ್ದಿತ್ತು. ಯಾಕೆಂದರೆ, ಅವರ ಪಾಲಿಗೆ ಏಡ್ಸ್ ಎಂಬುದು ಮರಣ ದಂಡನೆಯಾಗಿತ್ತು. ಮದ್ದಿಲ್ಲ. ಏಡ್ಸನ್ನು ಗುಣಪಡಿಸುವ ಅಥವಾ ರೋಗದ ತೀವ್ರತೆಯನ್ನು ಕಡಿಮೆಗೊಳಿಸುವ ಔಷಧವು 1996ರಲ್ಲಿ ತಯಾರಾಗುವುದರ ಮಧ್ಯೆ ಸಾವಿರಾರು ಮಂದಿ ಏಡ್ಸ್ ಗೆ ಬಲಿಯಾದರು. ಆದರೆ ಆ ಬಳಿಕವೂ ಏಡ್ಸ್ ನಿವಾರಕ ಔಷಧಗಳು ಆಫ್ರಿಕದ ಬಡರೋಗಿಗಳಿಗೆ ತಲುಪಲೇ ಇಲ್ಲ. ಯಾಕೆಂದರೆ, ಒಂದು ವರ್ಷದ ಚಿಕಿತ್ಸೆಗೆ 5 ಲಕ್ಷದಷ್ಟು ಮೊತ್ತವನ್ನು ಭರಿಸುವ ಸಾಮರ್ಥ್ಯ ವಾದರೂ ಅವರಲ್ಲಿ ಎಲ್ಲಿರುತ್ತದೆ? ಪ್ರತಿದಿನ ಆಫ್ರಿಕನ್ ಖಂಡದಲ್ಲಿ 60ರಷ್ಟು ಮಂದಿ ಸಾವಿಗೀಡಾಗುತ್ತಿದ್ದರೂ ಅಮೇರಿಕದ ಫಿಝರ್ ಕಂಪೆನಿ ಔಷಧದ ಬೆಲೆಯನ್ನು ಕಡಿಮೆಗೊಳಿಸಲು ಒಪ್ಪಲಿಲ್ಲ. ಮಾತ್ರವಲ್ಲ, ವಿಶ್ವ ವ್ಯಾಪಾರ ಸಂಸ್ಥೆಯ TIPS ಒಪ್ಪಂದವನ್ನು ಮುಂದಿಟ್ಟುಕೊಂಡು ಅಗ್ಗದ ಜೆನೆರಿಕ್ ಔಷಧಗಳನ್ನು ಆಮದು ಮಾಡಿ ಕೊಳ್ಳದಂತೆಯೂ ಅವು ತಡೆದುವು. 1999ರಲ್ಲಿ ದ. ಆಫ್ರಿಕಾದ ಸರಕಾರವು ಕಡಿಮೆ ಬೆಲೆಯ ಜೆನೆರಿಕ್ ಔಷಧಗಳನ್ನು ಆಮದು ಮಾಡಿಕೊಳ್ಳಲು ಮುಂದಾದಾಗ ಔಷಧ ಕಂಪೆನಿಗಳು ಮೊಕದ್ದಮೆ ಹೂಡಿದುವು. ಅಮೇರಿಕದ ಉಪಾಧ್ಯಕ್ಷ ಅಲ್ ಗೋರೆಯವರು ಆರ್ಥಿಕ ನಿಷೇಧ ವಿಧಿಸುವ ಬೆದರಿಕೆ ಹಾಕಿದರು. ನಿಜವಾಗಿ ಈ ಸಂದರ್ಭದಲ್ಲಿ ಭಾರತದ ಡಾ| ಯೂಸುಫ್ ಹವಿೂದ್ ಅವರ ಸಿಪ್ಲಾ ಎಂಬ ಔಷಧ ಕಂಪೆನಿಯು ಏಡ್ಸ್ ನಿವಾರಕ ಜೆನೆರಿಕ್ ಔಷಧವನ್ನು ತಯಾರಿಸಿತ್ತು. ಬೃಹತ್ ಕಂಪೆನಿಗಳು ಸಿಪ್ಲಾದ ವಿರುದ್ಧ ಒತ್ತಡ ಹಾಕಿದುವು. ಆದರೆ ಭಾರತದಲ್ಲಿ ಜೆನೆರಿಕ್ ಔಷಧಗಳ ತಯಾರಿ ಮತ್ತು ಮಾರಾಟಕ್ಕೆ ಅವಕಾಶ ಇರುವುದರಿಂದ ಅವುಗಳ ಪ್ರಯತ್ನ ಫಲ ನೀಡಲಿಲ್ಲ. ಆದರೆ, ಭಾರತದಿಂದ ಈ ಜೆನೆರಿಕ್ ಔಷಧಗಳನ್ನು ಖರೀದಿಸದಂತೆ ಆಫ್ರಿಕಾವನ್ನು ಅವು ನಿರ್ಬಂಧಿಸಿದುವು. ಅಮೇರಿಕದ ಬೆದರಿಕೆ ಮತ್ತು ಕಂಪೆನಿಗಳ ಒತ್ತಡದಿಂದ ಬೆದರಿದ ಆಫ್ರಿಕಾದ ತಾಬೊ ಎಂಬೆಕಿ ಸರಕಾರವು, ಏಡ್ಸ್ ನಿವಾರಕ ಔಷಧವು ನಿರುಪಯುಕ್ತವಾಗಿದ್ದು ಅದರ ಸೇವನೆಯೇ ಅಪಾಯಕಾರಿ ಎಂದು ಘೋಷಿಸಿದರು. ಇದು ಆಫ್ರಿಕಾದಲ್ಲಿ ತೀವ್ರ ಚರ್ಚೆಗೆ, ಪ್ರತಿಭಟನೆಗೆ ಕಾರಣವಾಯಿತು. ಏಡ್ಸ್ ರೋಗಿಗಳ ಪರವಾಗಿ ರಚನೆಯಾಗಿದ್ದ ಟ್ರೀಟ್‍ಮೆಂಟ್ ಆ್ಯಕ್ಷನ್ ಕ್ಯಾಂಪೇನ್ ಎಂಬ ಸಂಘಟನೆಯು ದೇಶದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿತು. HIV ಪೀಡಿತರಾಗಿದ್ದ ಅದರ ನಾಯಕ ಝಾಕಿ ಅಚ್‍ಮಾಟ್‍ರು, ಎಲ್ಲರಿಗೂ ಅಗ್ಗದ ದರದಲ್ಲಿ ಔಷಧ ಸಿಗುವವರೆಗೆ ತಾನು ಚಿಕಿತ್ಸೆಯನ್ನೇ ಪಡಕೊಳ್ಳುವುದಿಲ್ಲ ಎಂದು ಘೋಷಿಸಿದರು. ಬ್ರೆಝಿಲ್ ಮತ್ತು ಥಾೈಲೆಂಡ್‍ಗಳಲ್ಲಿ ಸರಕಾರವೇ ಅಗ್ಗದ ಜೆನೆರಿಕ್ ಔಷಧಗಳನ್ನು ತಯಾರಿಸುತ್ತಿವೆ. ಪಾಶ್ಚಾತ್ಯ ಔಷಧ ಕಂಪೆನಿಗಳು 5 ಲಕ್ಷಕ್ಕೆ ವಿತರಿಸುವ ಅದೇ ಏಡ್ಸ್ ಔಷಧವನ್ನು ಸಿಪ್ಲಾವು 20 ಸಾವಿರ ರೂಪಾಯಿಯಲ್ಲಿ ನೀಡುತ್ತಿದೆ. ಒಂದು ವೇಳೆ ಆಫ್ರಿಕಾ ಖಂಡದಲ್ಲಿರುವವರು ಬಿಳಿಯರಾಗಿರುತ್ತಿದ್ದರೆ ಪಾಶ್ಚಾತ್ಯ ರಾಷ್ಟ್ರಗಳ ಧೋರಣೆ ಹೀಗಿರುತ್ತಿತ್ತೇ.. ಎಂದವರು ಪ್ರಶ್ನಿಸಿದರು.
ಬಹುಶಃ ಔಷಧ ಕಂಪೆನಿಗಳ ಹಣದಾಹದ ಬಗ್ಗೆ ಚರ್ಚೆಯೊಂದು ನಡೆದದ್ದೇ ಝಾಕಿಯವರ ಈ ನಿಲುವಿನಿಂದಾಗಿ.
ಹಾಗಂತ, ಔಷಧ ಕಂಪೆನಿಗಳು ಇವತ್ತು ಜಗತ್ತಿನ ಮುಂದೆ ಏನನ್ನು ಹೇಳುತ್ತಿವೆಯೋ ಅವೆಲ್ಲ ನಿಜವಲ್ಲ. ಔಷಧದ ಸಂಶೋಧನೆ ಮತ್ತು ಅಭಿವೃದ್ಧಿಗೆ ತಗಲುವ ಖರ್ಚಿನಿಂದಾಗಿ ಬೆಲೆಗಳು ದುಬಾರಿಯಾಗುತ್ತಿವೆ ಎಂದು ಅವು ನಂಬಿಸಲು ಯತ್ನಿಸುತ್ತಿವೆ. ನಿಜ ಏನೆಂದರೆ, ಔಷಧ ಕ್ಷೇತ್ರದಲ್ಲಿ ಇವತ್ತು ಆಗುತ್ತಿರುವ 90% ಸಂಶೋಧನೆಗಳೂ ಹಳೆಯ ಸಂಶೋಧನೆಗಳ ಆಧಾರದಲ್ಲೇ ನಡೆಯುವಂಥವು. ಅವೇನೂ ಸಂಪೂರ್ಣ ಹೊಸತಲ್ಲ. ಆದರೆ ಕಂಪೆನಿಗಳು ಇವನ್ನು ಬಚ್ಚಿಟ್ಟು ಸಂಶೋಧನೆಯ ಖರ್ಚನ್ನು ಮುಂದು ಮಾಡಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿವೆ. ಅಷ್ಟಕ್ಕೂ, ಸಂಶೋಧನೆಗೆ ಕಂಪೆನಿಗಳು ಖರ್ಚು ಮಾಡುವ ಮೊತ್ತ ಬರೇ 12%. ಉಳಿದ 88% ಮೊತ್ತವನ್ನು ಸಾರ್ವಜನಿಕ ವಲಯದಿಂದ ಬಳಸಿಕೊಳ್ಳಲಾಗುತ್ತದೆ. ಈ ಕಾರಣದಿಂದಲೇ, ‘ಏಡ್ಸ್ ನಿವಾರಣೆಗೆ ಬಳಸುವ ಪ್ಲುಕೋನಝೋಲ್ ಎಂಬ ಔಷಧಿಯ ಬೆಲೆಯನ್ನು 50% ಇಳಿಸಿ ಅಥವಾ ಜೆನೆರಿಕ್ ಔಷಧದ ಆಮದಿಗೆ ಒಪ್ಪಿಕೊಳ್ಳಿ..’ ಎಂದು ಝಾಕಿ ಅಚ್‍ಮ್ಯಾಟ್‍ರು ಫಿಝರ್ ಕಂಪೆನಿಯನ್ನು ಆಗ್ರಹಿ ಸಿದ್ದು. ಅಂದಹಾಗೆ, ಜನರ ಖರೀದಿ ಸಾಮಥ್ರ್ಯಕ್ಕೆ ಪೂರಕವಾಗಿ ಔಷಧಗಳ ಬೆಲೆಗಳಿರಬೇಕು ಎಂದು ಆಗ್ರಹಿಸುವುದು ಯಾಕೆ ತಪ್ಪು ಅನ್ನಿಸಿಕೊಳ್ಳಬೇಕು? ಔಷಧವೊಂದರ ಸಂಶೋಧನೆಗೆ ಸಾಕಷ್ಟು ಶ್ರಮ, ದುಡ್ಡಿನ ಅಗತ್ಯವಿದೆಯೆಂಬುದು ನಿಜ. ಹಾಗಂತ, ಆ ಔಷಧವನ್ನು ಖರೀದಿಸುವುದಕ್ಕೆ ರೋಗಿಗಳಿಗೆ ಸಾಧ್ಯವಾಗುವುದಿಲ್ಲವೆಂದಾದರೆ ಅವು ಇದ್ದೂ ಏನು ಪ್ರಯೋಜನ? ಪೇಟೆಂಟ್ ಕಾಯ್ದೆಯನ್ನು ಬಳಸಿಕೊಂಡು ಔಷಧ ಕಂಪೆನಿಗಳು ಕುಬೇರವಾಗುವಂತೆ ನೋಡಿಕೊಳ್ಳುವ WTO, ಯಾರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ? ಜನರ ದುಡ್ಡಿನಿಂದ ಕೈಗೊಳ್ಳುವ ಸಂಶೋಧನೆಗಳು ಜನರ ಬದಲು ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುತ್ತದೆಂದರೆ ಏನೆನ್ನಬೇಕು? 2004ರಲ್ಲಿ ಪ್ರಕಟಗೊಂಡ, ದಿ ಇಕನಾಮಿಸ್ಟ್ ಪತ್ರಿಕೆಯಲ್ಲಿ, ಪಾಶ್ಚಾತ್ಯ ಔಷಧ ಕಂಪೆನಿಗಳ ಕ್ರೂರ ಮುಖವನ್ನು ಬಯಲಿಗೆಳೆಯಲಾಗಿತ್ತು. ಆಫ್ರಿಕಾ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಏಡ್ಸ್ ಔಷಧಿಯನ್ನು ಅವು ಹೇಗೆ ನಿರ್ಬಂಧಿಸಿವೆ ಎಂಬ ಬಗ್ಗೆ ಅದರಲ್ಲಿ ಬೆಳಕು ಚೆಲ್ಲಲಾಗಿತ್ತು. ಬಹುಶಃ, ಅಚ್‍ಮ್ಯಾಟ್ ಮತ್ತು ಮುಗೇನಿಯವರ ಛಲ ಬಿಡದ ಹೋರಾಟದಿಂದಾಗಿ ಯೂಸುಫ್ ಹವಿೂದ್‍ರ ಸಿಪ್ಲಾ ಕಂಪೆನಿಯು ಜಾಗತಿಕವಾಗಿಯೇ ಚರ್ಚೆಗೊಳಗಾಯಿತು. ಅತ್ಯಂತ ಅಗ್ಗದ ದರದಲ್ಲಿ ಏಡ್ಸ್ ಔಷಧವನ್ನು ತಯಾರಿಸಲು ಸಾಧ್ಯ ಎಂದವರು ಪ್ರಾಯೋ ಗಿಕವಾಗಿಯೇ ತೋರಿಸಿಕೊಟ್ಟರು. ಭಾರತ ಸರಕಾರವು 2005ರಲ್ಲಿ ಅವರಿಗೆ ಪದ್ಮಭೂಷಣವನ್ನು ಕೊಟ್ಟು ಗೌರವಿಸಿದಾಗ ಅತ್ತ ನೆಲ್ಸನ್ ಮಂಡೇಲಾ ಸಹಿತ ಹಲವಾರು ನಾಯಕರು ಅಚ್‍ಮ್ಯಾಟ್‍ರನ್ನು ಭೇಟಿಯಾದರು. ಅಚ್‍ಮ್ಯಾಟ್ ಆಫ್ರಿಕಾದ ಹೀರೋ ಅಂದರು ಮಂಡೇಲಾ. ಬಿಲ್‍ಕ್ಲಿಂಟನ್, ಫಿಝರ್ ಕಂಪೆನಿಯ ಮಾಜಿ ಉಪಾಧ್ಯಕ್ಷ ಡಾ| ಪೀಟರ್ ಫ್ರೋಸ್ಟ್, ಡೆಸ್ಮಂಡ್ ಟುಟು ಮುಂತಾದವರೆಲ್ಲ ಔಷಧ ಕಂಪೆನಿಗಳ ಸ್ವಹಿತಾಸಕ್ತಿಯನ್ನು ಮತ್ತು ಅವು ಕರಿಯರ ಮೇಲೆ ತೋರುತ್ತಿರುವ ಅನಾದರವನ್ನು ಪ್ರಶ್ನಿಸಿದರು. ಆದರೂ,
ಈ ಜಗತ್ತಿನಲ್ಲಿ ಹಿಟ್ಲರನ ಹಾಲೋಕಾಸ್ಟನ್ನು ವಿವರಿಸುವ ಡಾಕ್ಯುಮೆಂಟರಿ, ಸಿನಿಮಾಗಳು, ಪುಸ್ತಕಗಳು.. ಧಾರಾಳ ಇವೆ. ಅಸಂಖ್ಯ ವೇದಿಕೆಗಳಲ್ಲಿ ಆ ಬಗ್ಗೆ ಚರ್ಚಿಸಲಾಗಿದೆ. ಹಾಲೋಕಾಸ್ಟನ್ನು ನಿರಾಕರಿಸಿ ಮಾತಾಡುವುದು ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆ. ನಿಜವಾಗಿ, ಪಾಶ್ಚಾತ್ಯ ಔಷಧ ಕಂಪೆನಿಗಳು ಆಫ್ರಿಕಾದಲ್ಲಿ ನಡೆಸಿರುವ ಈ ಹತ್ಯಾಕಾಂಡಕ್ಕೆ ಹೋಲಿಸಿದರೆ ಹಾಲೋಕಾಸ್ಟ್ ಏನೇನೂ ಅಲ್ಲ. ಔಷಧ ನೀಡದೆ ಲಕ್ಷಾಂತರ ಮಂದಿಯನ್ನು ಅವು ಕೊಂದರೂ ಆ ಬಗ್ಗೆ ಯಾರೂ ಮಾತಾಡುತ್ತಿಲ್ಲ. ‘ಜೆನೋಸೈಡ್ ಬೈ ಡಿನೈಯಲ್: ಹೌ ಪ್ರೊಫಿಟೀರಿಂಗ್ ಫ್ರಮ್ HIV/ HIDS ಕಿಲ್ಲ್ಡ್ಡ್ ಮಿಲಿಯನ್ಸ್..’ ಎಂಬ ಮುಗೇನಿಯವರ ಪುಸ್ತಕವನ್ನು ಬಿಟ್ಟರೆ ಅದರ ಬಗ್ಗೆ ಬಹುತೇಕ ಯಾರೂ ಬರೆದಿಲ್ಲ. ಸಿನಿಮಾ ತಯಾರಾಗಿಲ್ಲ. ಒಂದು ವೇಳೆ ಇವೆಲ್ಲ ಬಿಳಿಯರ ನಾಡಲ್ಲಿ ನಡೆಯುತ್ತಿದ್ದರೆ..
ಭಾರತದ ಮೂಲದ ಮೋಹನ್ ಗ್ರೇ ಅವರ, ‘ಫೈರ್ ಇನ್ ದ ಬ್ಲಡ್’ (ರಕ್ತದಲ್ಲಿ ಬೆಂಕಿ) ಎಂಬ 84 ನಿಮಿಷಗಳ ಡಾಕ್ಯು ಮೆಂಟರಿಯನ್ನು ವೀಕ್ಷಿಸುತ್ತಾ ಇವೆಲ್ಲವನ್ನೂ ಹಂಚಿಕೊಳ್ಳ ಬೇಕೆನಿಸಿತು.
No comments:
Post a Comment