ಘಟನೆ-1
‘ಭಾರತೀಯ ಟೆನಿಸ್‍ನ ಪ್ರಮುಖ ಆಟಗಾರರೋರ್ವರನ್ನು ತೃಪ್ತಿ ಪಡಿಸುವುದಕ್ಕಾಗಿ ನನ್ನನ್ನು ಒಂದು ವಸ್ತುವಿನಂತೆ ಬಳಕೆ ಮಾಡಿಕೊಂಡಿರುವುದು ನನ್ನಲ್ಲಿ ತೀವ್ರ ದುಃಖವನ್ನು ತರಿಸಿದೆ. ಇಪ್ಪತ್ತೊಂದನೇ ಶತಮಾನದಲ್ಲಿ ಜೀವಿಸುತ್ತಿರುವ ಹೆಣ್ಣು ಮಗಳನ್ನು ಈ ರೀತಿ ನಡೆಸಿಕೊಳ್ಳುವುದು ಅತ್ಯಂತ ಅವಮಾನಕರ. ಎರಡು ಬಾರಿ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಪ್ರಶಸ್ತಿ ಗೆದ್ದ ಮತ್ತು ಭಾರತದ ನಂಬರ್ ವನ್ ಮಹಿಳಾ ಟೆನಿಸ್ ಆಟಗಾರ್ತಿಯಾದ ಓರ್ವಳನ್ನು, ಮುನಿಸಿಕೊಂಡಿರುವ ಆಟಗಾರನೋರ್ವನನ್ನು ಆಕರ್ಷಿಸುವುದಕ್ಕಾಗಿ ಬಳಕೆ ಮಾಡುವುದಕ್ಕೆ ಏನೆನ್ನಬೇಕು? ಇದು ಪುರುಷ ಮೇಲ್ಮೆಯಲ್ಲವೇ? ಭಾರತೀಯ ಟೆನಿಸ್ ಫೆಡರೇಶನ್ ಕೈಗೊಂಡ ಈ ತೀರ್ಮಾನ ಮಹಿಳಾ ಕುಲವನ್ನು ಅವಮಾನಿಸುವಂಥದ್ದು..
ಲಿಯಾಂಡರ್ ಪೇಸ್‍ನೊಂದಿಗೆ ಆಡುವುದಾಗಿ ಸಾನಿಯಾ ಮಿರ್ಝಾ ಬರೆದು ಕೊಡಬೇಕೆಂದು ಪೇಸ್‍ರ ತಂದೆ ಡಾ| ವೇಸ್ ಪೇಸ್ ಟಿ.ವಿ. ಸಂದರ್ಶನದಲ್ಲಿ ಹೇಳುವುದನ್ನು ನಾನು ವೀಕ್ಷಿಸಿದೆ. ನಾನು ಹೇಳುವುದಿಷ್ಟೆ:
ನನ್ನ ಬದ್ಧತೆ ಯಾವತ್ತೂ ನನ್ನ ದೇಶಕ್ಕಾಗಿದೆ. ಈ ದೇಶಕ್ಕಾಗಿ ಲಿಯಾಂಡರ್, ಭೂಪತಿ, ವಿಷ್ಣು, ಸೋಮ್‍ದೇವ್ ಅಥವಾ ದೇಶಕ್ಕೆ ಉತ್ತಮವೆಂದು ವ್ಯಕ್ತವಾಗುವ ಯಾವ ಟೆನಿಸ್ ಆಟಗಾರರೇ ಆಗಲಿ, ಅವರ ಜೋಡಿಯಾಗಿ ಆಡಲು ನಾನು ತಯಾರು. ಈ ವಿಷಯದಲ್ಲಿ ನನ್ನ ಬಗ್ಗೆ ಯಾವ ಅನುಮಾನವೂ ಬೇಡ. ಒಂದು ವೇಳೆ ಜೊತೆಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನನಗೇ ವಹಿಸಿಕೊಟ್ಟರೂ, ಈ ದೇಶಕ್ಕೆ ಒಂದು ಪದಕ ದಕ್ಕುವ ಗುರಿಯನ್ನಲ್ಲದೇ ಇನ್ನಾವುದನ್ನೂ ನಾನು ಆಯ್ಕೆಗೆ ಮಾನದಂಡವಾಗಿ ಪರಿಗಣಿಸಲಾರೆ.’
ಸಾನಿಯಾ ಮಿರ್ಝಾ
ಅಖಿಲ ಭಾರತ ಟೆನಿಸ್ ಅಸೋಸಿಯೇಶನ್‍ಗೆ 2012 ಜುಲೈಯಲ್ಲಿ ಬರೆದ ಪತ್ರ
ಘಟನೆ-2
2001ರಲ್ಲಿ ನಾಗಾಲ್ಯಾಂಡಿನ ಬಡ ಹೆಣ್ಣು ಮಗಳು ಮೇರಿಕೋಮ್ ವಿಶ್ವ ಮಹಿಳಾ ಬಾಕ್ಸಿಂಗ್ ಅಂಗಣಕ್ಕೆ ಇಳಿಯುತ್ತಾಳೆ. ಸೋಲುತ್ತಾಳೆ. ಮುಂದಿನ ವರ್ಷ ವಿಶ್ವ ಬಾಕ್ಸಿಂಗ್ ಕಿರೀಟವನ್ನು ಧರಿಸುತ್ತಾಳೆ. ಮದುವೆಯಾಗುತ್ತದೆ. ಅವಳಿ ಮಕ್ಕಳ ತಾಯಿಯಾಗುತ್ತಾಳೆ. 2010ರಲ್ಲಿ ಮತ್ತೆ ಬಾಕ್ಸಿಂಗ್ ಅಂಗಣಕ್ಕೆ ಪ್ರವೇಶಿಸುತ್ತಾಳೆ. ಗೆಲ್ಲುತ್ತಾಳೆ. ಎರಡು ಬಾರಿ ವಿಶ್ವ ಬಾಕ್ಸಿಂಗ್ ಪ್ರಶಸ್ತಿಯನ್ನು ಗೆದ್ದ ಅಪರೂಪದ ಸಾಧನೆ ಮಾಡುತ್ತಾಳೆ. ಒಂದು ರೀತಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಅಥವಾ ರೋಜರ್ ಫೆಡರರ್, ರಫೆಲ್ ನಡಾಲ್, ಬ್ಯಾನ್ ಬೋರ್ಗ್ ರು ಗ್ರ್ಯಾಂಡ್ ಸ್ಲಾಮ್ ಗೆದ್ದಷ್ಟು ತೂಕದ ಗೆಲುವು ಇದು. ಮೊನ್ನೆ ಲಂಡನ್‍ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಇದೇ ಮೇರಿ ಕೋಮ್ ಬೆಳ್ಳಿ ಪದಕ ಪಡೆಯುತ್ತಾಳೆ. ಆದರೆ, ಒಲಿಂಪಿಕ್ಸ್ ನಲ್ಲೋ ಅಥವಾ ಇನ್ನಾವುದಾದರೂ ಕ್ರೀಡೆಯಲ್ಲೋ ಭಾಗವಹಿಸುವುದಕ್ಕಾಗಿ ತಯಾರಿ ನಡೆಸಲು ಪಾಟಿಯಾಲದಲ್ಲಿರುವ ತರಬೇತಿ ಶಿಬಿರಕ್ಕೆ ಕೋಮ್ ಬರುವಾಗ ಆಕೆಯ ಜೊತೆ ಪರ್ಸನಲ್ ಸೆಕ್ರಟರಿ ಇರುವುದಿಲ್ಲ, ವಾಹನ ಇರುವುದಿಲ್ಲ. ಪಾಟಿಯಾಲದಲ್ಲಿ ಒಂಟಿ ಕೋಣೆಯ ಕೊಠಡಿಯಲ್ಲಿ ವಾಸ. ತಾನೇ ಸ್ಟೌ ಉರಿಸಿ, ಮೀನು ಕಾಯಿಸಿ, ಊಟ ತಯಾರಿಸಬೇಕು. ಮಾತ್ರವಲ್ಲ, ಪಾಟಿಯಾಲಕ್ಕೆ ಬರುವ ಅತಿಥಿಗಳಿಗೆ ಟೀ ತಯಾರಿಸಿ ಕೊಡುವ ಜವಾಬ್ದಾರಿಯೂ ಅವರ ಮೇಲೆ ಬೀಳುವುದಿದೆ. ಅತಿಥಿಗಳ ಪಾತ್ರೆ ತೊಳೆಯಬೇಕಾಗಿ ಬಂದದ್ದೂ ಇದೆ..
ಘಟನೆ- 3
ಕಳೆದ ಏಶ್ಯನ್ ಗೇಮ್ಸ್ ನಲ್ಲಿ ಪಿಂಕಿ ಪ್ರಮಾಣಿಕ್ ಅನ್ನುವ ಹೆಣ್ಣು ಮಗಳು ಚಿನ್ನದ ಪದಕ ಗೆಲ್ಲುತ್ತಾಳೆ. ದೇಶದಾದ್ಯಂತ ಪಿಂಕಿ ಹೆಸರು ಪ್ರಸಿದ್ಧವಾಗುತ್ತದೆ. ಆದರೆ ಕಳೆದ 3 ತಿಂಗಳ ಹಿಂದೆ ಆಕೆಯ ಮೇಲೆ ಬಲಾತ್ಕಾರದ ಆರೋಪ ಹೊರಿಸಲಾಗುತ್ತದೆ. ಆಕೆಯೊಂದಿಗೆ ಹಲವು ಸಮಯದಿಂದ ವಾಸವಿದ್ದ ಗೆಳತಿಯೊಬ್ಬಳು, ಪಿಂಕಿ ಹೆಣ್ಣಲ್ಲ ಗಂಡು ಎಂದು ಆರೋಪಿಸುತ್ತಾಳೆ. ಆರೋಪ ಬಂದ ತಕ್ಷಣ ಪೊಲೀಸರು ಪಿಂಕಿಯನ್ನು ಬಂಧಿಸುತ್ತಾರೆ. ಆಕೆಯ ಎರಡು ತೋಳುಗಳನ್ನು ಗಟ್ಟಿಯಾಗಿ ಹಿಡಿದು ಪುರುಷ ಪೊಲೀಸರು ವ್ಯಾನ್‍ಗೆ ತಳ್ಳುವ ದೃಶ್ಯವನ್ನು ಮಾಧ್ಯಮಗಳು ಪ್ರಕಟಿಸುತ್ತವೆ. ಕೋರ್ಟು ಜೈಲಿಗೆ ಹಾಕುತ್ತದೆ. ನಿಜವಾಗಿ, ಪಿಂಕಿಯ ಮೇಲೆ ಹೊರಿಸಲಾದದ್ದು ಬರೇ ಆರೋಪ ಮಾತ್ರ. ಆ ಆರೋಪದ ಬಗ್ಗೆ, ಆರೋಪ ಹೊರಿಸಿದವಳ ಬಗ್ಗೆ ಸಣ್ಣದೊಂದು ತನಿಖೆಯನ್ನೂ ನಡೆಸದೆ ಪೊಲೀಸರು ಬಂಧಿಸುವುದು, ಜೈಲಿಗಟ್ಟುವುದು ಎಲ್ಲ ನಡೆಯುತ್ತದೆ. ತಿಂಗಳ ಕಾಲ ಪಿಂಕಿ ಜೈಲಲ್ಲಿರುತ್ತಾಳೆ. ಭಾರತದ ಅಪರಾಧ ಸಂಹಿತೆಯ ಪ್ರಕಾರ, ಗಂಡು ಮಾತ್ರ ಅತ್ಯಾಚಾರ ನಡೆಸಬಲ್ಲ. ಆದರೆ ಪೊಲೀಸರು ಪಿಂಕಿ ವಿರುದ್ಧ ಅತ್ಯಾಚಾರದ ದೋಷಾ ರೋಪಪಟ್ಟಿ ಸಲ್ಲಿಸುತ್ತಾರೆ. ಮಾಧ್ಯಮಗಳು `ಪಿಂಕಿ ಅತ್ಯಾಚಾರಿ' ಅನ್ನುವ ಶೀರ್ಷಿಕೆಯಲ್ಲಿ ಸುದ್ದಿಗಳನ್ನು ಧಾರಾಳ ಪ್ರಕಟಿಸುತ್ತವೆ. ಆಕೆಯನ್ನು ನಗ್ನ ಗೊಳಿಸಿ ಲಿಂಗಪತ್ತೆ ಪರೀಕ್ಷೆ ಮಾಡಲಾಗುತ್ತದೆ. ಆ ಇಡೀ ದೃಶ್ಯ ಯೂಟ್ಯೂಬ್‍ನಲ್ಲಿ ಹರಿದಾಡುತ್ತದೆ..
ಇವೆಲ್ಲವೂ ನಡೆದದ್ದು ಕಳೆದೆರಡು ತಿಂಗಳುಗಳಲ್ಲಿ..
ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶುಹೈಬ್ ಮಲಿಕ್‍ನನ್ನು ವಿವಾಹವಾದಾಗ, ಆಕೆಯನ್ನು ದೇಶದ್ರೋಹಿ ಎಂದು ಬಾಳಾಠಾಕ್ರೆ ಘೋಷಿಸಿದ್ದರು. 100 ಕೋಟಿ ಭಾರತೀಯರಲ್ಲಿ ಸಾನಿಯಾಗೆ ಒಬ್ಬನೇ ಒಬ್ಬ ಗಂಡು ಸಿಗಲಿಲ್ಲವೇ ಎಂದು ಪ್ರಶ್ನಿಸಿ, ಟಿ.ವಿ. ಕ್ಯಾಮರಾಗಳಿಗೆ ಪೋಸು ಕೊಟ್ಟವರಿದ್ದರು. ಪತ್ರಿಕೆಗಳಲ್ಲಿ ಅಂಕಣ ಬರೆದವರಿದ್ದರು. ಆದರೆ ಅವರಾರೂ ಸಾನಿಯಾಳ ಈ ಪತ್ರದ ಬಗ್ಗೆ ಏನಾದರೂ ಬರೆದದ್ದು ಈ ವರೆಗೂ ಕಾಣಿಸಿಲ್ಲ. ಆ ಪತ್ರವನ್ನು ಎದುರಿಟ್ಟುಕೊಂಡು ತಮ್ಮನ್ನು ತಿದ್ದಿಕೊಳ್ಳುವ ಒಂದು ವಾಕ್ಯದ ಹೇಳಿಕೆಯನ್ನೂ ಅವರು ಹೊರಡಿಸಿಲ್ಲ. ಯಾಕೆ ಹೀಗೆ? ಲಂಡನ್ ಒಲಿಂಪಿಕ್ಸ್ ನಲ್ಲಿ ಲಿಯಾಂಡರ್ ಪೇಸ್‍ಗೆ ಜೋಡಿಯಾಗಿ ಮಹೇಶ್ ಭೂಪತಿ ಆಡಬೇಕಿತ್ತು. ಆದರೆ ಭೂಪತಿ ಒಪ್ಪಲಿಲ್ಲ. ಇದರಿಂದ ಸಿಟ್ಟಾದ ಲಿಯಾಂಡರ್ ಪೇಸ್‍ರನ್ನು ಸಮಾಧಾನಿಸುವುದಕ್ಕಾಗಿ ಭೂಪತಿ ಜೊತೆ ಮಿಕ್ಸ್ ಡ್ ಡಬಲ್ಸ್ ನಲ್ಲಿ ಆಡಬೇಕಿದ್ದ ಸಾನಿಯಾಳನ್ನು ಪೇಸ್‍ಗೆ ಜೋಡಿಯಾಗಿ ಟೆನಿಸ್ ಸಂಸ್ಥೆ ಆಯ್ಕೆ ಮಾಡಿತು. ಆದರೆ ಆ ಕುರಿತಂತೆ ಒಂದು ಸಣ್ಣ ಸೂಚನೆಯನ್ನೂ ಸಾನಿಯಾಳಿಗೆ ಟೆನಿಸ್ ಸಂಸ್ಥೆ ನೀಡಿಯೇ ಇರಲಿಲ್ಲ. ಇಷ್ಟಕ್ಕೂ ಸಾನಿಯಾಳ ಜಾಗದಲ್ಲಿ ಇನ್ನಾರೋ ಪುರುಷ ಇರುತ್ತಿದ್ದರೆ ಇಂಥದ್ದೊಂದು ಧೈರ್ಯಕ್ಕೆ ಟೆನಿಸ್ ಸಂಸ್ಥೆ ಮುಂದಾಗುತ್ತಿತ್ತೇ? ನಿನ್ನ ಆಯ್ಕೆಯೇನು ಎಂದು ಭೂಪತಿಯೊಂದಿಗೆ ಕೇಳಿದಂತೆ, ಸಾನಿಯಾಳೊಂದಿಗೂ ಟೆನಿಸ್ ಸಂಸ್ಥೆ ಕೇಳಬೇಕಿತ್ತಲ್ಲವೇ? ದೇಶದಲ್ಲಿ ಮಹಿಳಾ ಟೆನಿಸ್ ಆಟಗಾರ್ತಿಯರಲ್ಲಿ ಗ್ರ್ಯಾಂಡ್‍ಸ್ಲ್ಯಾಮ್ ಗೆದ್ದಿರುವುದು ಸಾನಿಯಾ ಒಬ್ಬಳೇ. ಭೂಪತಿಯ ಸ್ಥಾನಮಾನ ಕೂಡ ಅದುವೇ. ಆದರೆ ಭೂಪತಿಗೆ ಇರುವ ಅದೇ ಸ್ಥಾನ-ನಿಯಮಗಳೆಲ್ಲ ಸಾನಿಯಾಳ ವಿಷಯದಲ್ಲಿ ಇಲ್ಲವಾದುದೇಕೆ? ಹೆಣ್ಣು ಎಷ್ಟೇ ಸಾಧನೆ ಮಾಡಿದರೂ ಆಕೆ ಪುರುಷನಿಗೆ ಸಮಾನ ಅಲ್ಲ ಎಂದಲ್ಲವೇ ಇದರರ್ಥ? ಇದೊಂದೇ ಅಲ್ಲ..
ಸಾನಿಯಾ ಟೆನಿಸ್ ಸಂಸ್ಥೆಗೆ ಪತ್ರ ಬರೆಯುವಾಗ, ಪೇಸ್, ಬೋಪಣ್ಣ ಮತ್ತು ಭೂಪತಿ ಪರಸ್ಪರ ಜಗಳವಾಡುತ್ತಿದ್ದರು. ಅಂಥ ಹೊತ್ತಲ್ಲಿ ದೇಶದ ಬಗ್ಗೆ, ದೇಶಕ್ಕೆ ಒಂದು ಪದಕ ತರುವ ಬಗ್ಗೆ ಮಾತಾಡಿದ್ದು ಆಕೆಯೊಬ್ಬಳೇ. ದೇಶಕ್ಕಾಗಿ ಯಾರ ಜೋಡಿಯಾಗಿ ಆಡಲೂ ಸಿದ್ಧ ಅಂದದ್ದೂ ಆಕೆಯೇ. ಆದರೆ ಆಕೆಯನ್ನು ದೇಶದ್ರೋಹಿಯಾಗಿಸಿದರಲ್ಲ, ಅವರಿಗೇಕೆ ಇದು ಕಾಣಿಸಲಿಲ್ಲ? ಓರ್ವ ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾದ ಭಾರತೀಯಳಿಗೆ ಇರುವ ದೇಶಪ್ರೇಮದಷ್ಟೂ, ಈ ದೇಶದಲ್ಲೇ ಇರುವ, ಈ ದೇಶದ ನೀರನ್ನೇ ಕುಡಿಯುವ, ಇಲ್ಲೇ ತಂಗುವ ಆಟಗಾರರಿಗೆ ಇಲ್ಲವಲ್ಲ ಎಂದು ಪೇಸ್, ಭೂಪತಿಯನ್ನು ಎತ್ತಿಕೊಂಡು ಬರೆಯಲು ಯಾಕೆ ಅವರಾರೂ ಮುಂದಾಗಲಿಲ್ಲ?
ಅಷ್ಟಕ್ಕೂ, ಇವು ಸಾನಿಯಾಳ ದೇಶಪ್ರೇಮವನ್ನು ಸಾಬೀತುಪಡಿಸುವುದಕ್ಕೆ ಮಂಡಿಸುವ ಪುರಾವೆಗಳೇನೂ ಅಲ್ಲ..
ಸಾನಿಯಾ ಆಗಲಿ, ಮೇರಿಕೋಮ್, ಪಿಂಕಿ ಪ್ರಮಾಣಿಕ್ ಯಾರೇ ಆಗಲಿ, ಮಹಿಳೆ ಮಹಿಳೆಯೇ. ಸಾಧನೆ ಏನೇ ಆಗಿದ್ದರೂ ಪುರುಷನ ಎದುರು ಮಹಿಳೆಯ ತೂಕ ಒಂದಷ್ಟು ಕಡಿಮೆ ಎಂದಲ್ಲವೇ ಕ್ರೀಡಾ ಸಂಸ್ಥೆಗಳು ಈ ಮೂಲಕ ಸಾರುತ್ತಿರುವುದು? ನಿಜವಾಗಿ ಮೇರಿಕೋಮ್‍ರ ಸಾಧನೆ ಈ ದೇಶದ ಎಲ್ಲ ಸಾಧಕರಿಗಿಂತ ಮೇಲ್ಮಟ್ಟದ್ದು. ಆದರೂ ಆಕೆ ಅತಿಥಿಗಳ ಪಾತ್ರೆ ತೊಳೆಯಬೇಕು. ಟೀ ತಯಾರಿಸಿ ಕೊಡಬೇಕು. ಅದೇ ಜಾಗದಲ್ಲಿ ಬಾಕ್ಸರ್ ಸುಶೀಲ್ ಕುಮಾರ್‍ರನ್ನೋ ವಿಜೇಂದರ್ ಸಿಂಗ್‍ರನ್ನೋ ಕಲ್ಪಿಸಿಕೊಳ್ಳಿ. ಕ್ರಿಕೆಟಿಗ ಧೋನಿಯನ್ನು ಯಾವ ತನಿಖೆಯನ್ನೂ ನಡೆಸದೆ ಅನಾಮತ್ತಾಗಿ ಎತ್ತಿಕೊಂಡು ಹೋಗುವುದನ್ನು ಊಹಿಸಿ ನೋಡಿ. ಇಷ್ಟಕ್ಕೂ ಮೈಮುಚ್ಚುವ ಉಡುಪು ಧರಿಸುವುದನ್ನು ಅಸಮಾನತೆಯಾಗಿ ಕಾಣುವವರು ಇವತ್ತು ಎಷ್ಟು ಮಂದಿಯಿಲ್ಲ? ಅದು ಹೆಣ್ಣನ್ನು ಎರಡನೇ ದರ್ಜೆಯವಳಾಗಿ ವಿಂಗಡಿಸುತ್ತದೆ ಅನ್ನುವವರ ಪಟ್ಟಿಯೇನು ಸಣ್ಣದೇ? ಆದರೆ ಹೆಣ್ಣಿಗೆ ಕಡಿಮೆ ಬಟ್ಟೆ ತೊಡಿಸಿ, ಅದನ್ನು ಸಮಾನತೆಯ ಸಂಕೇತವಾಗಿ ಬಿಂಬಿಸಿ, ಬಳಿಕ ಪುರುಷನನ್ನು ತೃಪ್ತಿಪಡಿಸುವುದಕ್ಕಾಗಿ, ಆತನ ಎಂಜಲನ್ನು ತೊಳೆಯುವುದಕ್ಕಾಗಿ ಅವಳನ್ನು ಬಳಸಲಾಗುತ್ತದಲ್ಲ, ಯಾಕೆ ಅದು ಎರಡನೇ ದರ್ಜೆ ಅನ್ನಿಸಿಕೊಳ್ಳುತ್ತಿಲ್ಲ? ಪರ್ದಾ ಧರಿಸುವುದು ಅಸಮಾನತೆಯೆಂದಾದರೆ ಗಂಡಿನಷ್ಟೇ ಸಾಧನೆ ಮಾಡಿಯೂ ಸ್ಥಾನ-ಮಾನದಲ್ಲಿ ಹೆಣ್ಣನ್ನು ದ್ವಿತೀಯ ದರ್ಜೆಯವಳಾಗಿ ನೋಡಿಕೊಳ್ಳುವುದೇಕೆ ಸಹಜ ಅನ್ನಿಸಿಕೊಳ್ಳುತ್ತದೆ? ನಿಜವಾಗಿ, ಮೈಮುಚ್ಚುವ ಉಡುಪು ಧರಿಸುವ ಮುಸ್ಲಿಮ್ ಹೆಣ್ಣು ಮಗಳು ಸ್ಥಾನ-ಮಾನದಲ್ಲಿ ಯಾವತ್ತೂ ಗಂಡಿನಷ್ಟೇ ಸಮಾನ. ಆದ್ದರಿಂದಲೇ ಅವರನ್ನು ಪತಿ-ಪತ್ನಿ ಅನ್ನುವುದರ ಬದಲು ಜೋಡಿಗಳು ಎಂದು ಪವಿತ್ರ ಕುರ್‍ಆನ್ (37:36, 4:1) ಪ್ರತಿಪಾದಿಸಿರುವುದು. ಆದರೆ ಆಧುನಿಕವೆಂದು ಹೇಳಲಾಗುವ ಈ ಜಗತ್ತಿನಲ್ಲಿ, ಹೆಣ್ಣು ಯಾವ ಉಡುಪು ಧರಿಸಬೇಕೆಂದು ಹೇಳುವುದೇ ಪುರುಷರು. ಅವಳು ಹೇಗೆ ನಡೆಯಬೇಕು, ಮಾತಾಡಬೇಕು, ಕುಣಿಯ ಬೇಕೆಂದು ವಿವರಿಸುವುದೂ ಅವರೇ. ಕೊನೆಗೆ ಪುರುಷರ ದಾಳವಾಗಿಸಿಯೋ ಪಾತ್ರೆ ತೊಳೆಯಿಸಿಯೋ ಜಾಣತನ ಮೆರೆಯುವುದೂ ಅವರೇ. ಆದರೆ ಅಸಮಾನತೆ ಎಂಬುದು ಮೈಮುಚ್ಚುವ ಉಡುಪಿನಲ್ಲಿದೆ ಎಂದು ಬಲವಾಗಿ ನಂಬಿರುವವರಿಗೆ ಇದು ತಪ್ಪು ಅಂತ ಅನ್ನಿಸುತ್ತಲೇ ಇಲ್ಲ. ಯಾಕೆಂದರೆ ಅವರೆಲ್ಲ ಕಡಿಮೆ ಬಟ್ಟೆ ಧರಿಸಿ ಆಧುನಿಕರು ಅನ್ನಿಸಿಕೊಂಡಿದ್ದಾರಲ್ಲ..

This comment has been removed by the author.
ReplyDelete