ಘಟನೆ 1.
ದ್ವಿತೀಯ ಖಲೀಫ ಉಮರ್(ರ)ರು ರಾತ್ರಿ ಸಂಚಾರದಲ್ಲಿದ್ದರು. ರಾತ್ರಿವೇಳೆ ಎದ್ದು ಮದೀನಾದ ಬೀದಿಯಲ್ಲಿ ನಡೆಯುವುದು ಮತ್ತು ಜನರ ಬದುಕು-ಭಾವಗಳ ಬಗ್ಗೆ ತಿಳಿದುಕೊಳ್ಳುವುದು ಅವರ ರೂಢಿಯಾಗಿತ್ತು. ಯಾರಾದರೂ ಪ್ರಯಾಣಿಕರು ಆಶ್ರಯ ಮತ್ತು ಆಹಾರದ ಅಲಭ್ಯತೆಯಿಂದ ಸಿಲುಕಿಕೊಂಡಿದ್ದಾರಾ, ನೆರವಿನ ಅಗತ್ಯವಿರುವವರು ಇದ್ದಾರಾ ಎಂಬುದು ಅವರ ರಾತ್ರಿ ಸಂಚಾರದ ಉದ್ದೇಶವೂ ಆಗಿತ್ತು. ಹಾಗೆ,
ತುಸು ನಡೆದಾಗ ದೂರದಲ್ಲಿ ಒಂದು ಬೆಳಕನ್ನು ಕಂಡರು. ಮಾತ್ರವಲ್ಲ, ಧ್ವನಿಯನ್ನೂ ಆಲಿಸಿದರು. ಬಳಿಕ ಅವರು ಆ ಬೆಳಕು ಕಂಡ ಜಾಗಕ್ಕೆ ಹೋದರು. ಎಲ್ಲಿಂದಲೋ ಬಂದ ಯಾತ್ರಾ ತಂಡವೊಂದು ಅಲ್ಲಿ ಟೆಂಟ್ ಹಾಕಿಕೊಂಡಿತ್ತು. ಇಂದಿನಂತೆ ವಾಹನ ಸೌಲಭ್ಯಗಳಿಲ್ಲದ ಅಂದಿನ ಕಾಲದಲ್ಲಿ ಯಾತ್ರಾ ತಂಡಗಳು ಹೀಗೆ ಟೆಂಟ್ ಹಾಕಿಕೊಳ್ಳುವುದು ಮತ್ತು ರಾತ್ರಿಯನ್ನು ಕಳೆಯುವುದೆಲ್ಲ ಸಾಮಾನ್ಯವಾಗಿತ್ತು. ಖಲೀಫಾ ಉಮರ್(ರ)ರು ಟೆಂಟ್ ಹತ್ತಿರ ತಲುಪಿದರು. ಮಕ್ಕಳು ಅಳುವ ಶಬ್ದ. ಮಕ್ಕಳು ಹಸಿವು ತಾಳಲಾರದೇ ಅಳುತ್ತಿರುವುದೆಂದು ಅವರಿಗೆ ಮನವರಿಕೆಯಾಯಿತು. ಅವರಾದರೋ ಬರಿಗೈಯಲ್ಲಿ ಬಂದಿದ್ದರು. ಈ ಮಕ್ಕಳ ಹಸಿವನ್ನು ತಣಿಸಲು ತಾನೇನು ಮಾಡಬಲ್ಲೆ ಎಂದು ಯೋಚಿಸಿದರು. ತನ್ನ ಆಡಳಿತದ ವ್ಯಾಪ್ತಿಯೊಳಗೆ ಮಕ್ಕಳು ಹಸಿವಿನಿಂದ ಬಳಲುವುದು ತನ್ನ ಆಡಳಿತಾತ್ಮಕ ವೈಫಲ್ಯವಾಗಿ ದೇವನು ಪರಿಗಣಿಸಿದರೆ ಏನುತ್ತರ ಕೊಡಬಲ್ಲೆ ಎಂದು ಸ್ವಯಂ ಪ್ರಶ್ನಿಸಿಕೊಂಡರು. ಆ ಬಳಿಕ ಅವರು ಅಲ್ಲಿ ನಿಲ್ಲಲಿಲ್ಲ. ತಿರುಗಿ ಹಿಂದಕ್ಕೆ ನಡೆದರು. ಬೈತುಲ್ ಮಾಲ್ ಅಥವಾ ಖಜಾನೆಯನ್ನು ನೋಡಿಕೊಳ್ಳುವ ಅಧಿಕಾರಿಯನ್ನು ಕರೆದರು. ಧಾನ್ಯಗಳ ಚೀಲವನ್ನು ಕಾಪಿಡಲಾದ ಗೋದಾಮಿನ ಬೀಗವನ್ನು ತೆರೆಯಲು ಹೇಳಿದರು. ಆಹಾರಕ್ಕೆ ಬೇಕಾದ ತುಪ್ಪವೂ ಸೇರಿದಂತೆ ಅಗತ್ಯದ ವಸ್ತುಗಳನ್ನು ಚೀಲಕ್ಕೆ ತುಂಬಿ ಬೆನ್ನಿಗೇರಿಸಿ ಹೊರಟರು. ಖಜಾನೆಯ ಅಧಿಕಾರಿಗೆ ಮರುಕವಾಯಿತು. ಖಲೀಫರೇ ಅಕ್ಕಿ ಚೀಲವನ್ನು ಹೊತ್ತುಕೊಂಡು ಹೋಗುವುದೆಂದರೆ ಸಣ್ಣ ಸಂಗತಿಯೇ? ಆತ ಖಲೀಫರನ್ನು ತಡೆದು ನಿಲ್ಲಿಸಿದ. ನಾನು ಹೊರುತ್ತೇನೆ, ನೀವು ದಾರಿ ತೋರಿಸಿ ಎಂದು ವಿನಂತಿಸಿದ. ಉಮರ್(ರ) ಪ್ರಶ್ನಿಸಿದರು,
‘ನಾಳೆ ಪರಲೋಕದಲ್ಲಿ ನೀನು ನನ್ನ ಭಾರವನ್ನು ಹೊರುವೆಯಾ? ಇಲ್ವಲ್ಲಾ, ಆದ್ದರಿಂದ ಈ ಭಾರವನ್ನು ನಾನೇ ಹೊರುತ್ತೇನೆ.’
ಘಟನೆ 2.
ಒಂದು ದಿನ ರಾತ್ರಿ ನಾಲ್ಕನೇ ಖಲೀಫ ಅಲಿಯವರು(ರ) ಎದ್ದು ಕುಳಿತರು. ಅಪಾಯವೊಂದರಿಂದ ತಪ್ಪಿಸಿಕೊಂಡು ಓಡಿ ಬಂದವರಂತೆ ಏದುಸಿರು ಬಿಡುತ್ತಿದ್ದರು. ಶತ್ರುಗಳು ಬೆನ್ನಟ್ಟಿ ಬಂದರೆ ವ್ಯಕ್ತಿಯ ವರ್ತನೆ ಹೇಗಿರುತ್ತದೋ ಆ ರೀತಿಯಲ್ಲಿ ಅವರು ಭಯದಿಂದ ಕಂಪಿಸುತ್ತಿದ್ದರು. ಬಳಿಕ ಅವರು ದುಃಖ ಮತ್ತು ಭಾವುಕರಾಗಿ ಹೀಗೆ ಹೇಳಿದರು,
ಓ ಭೌತಿಕ ಜಗತ್ತೇ, ವಂಚಿಸಲು ನೀನು ಬೇರೆ ಯಾರನ್ನಾದರೂ ನೋಡಿಕೋ. ನಾನಾದರೋ ನಿನಗೆ ಮೂರು ತಲಾಕ್ ಹೇಳಿ ಬೇರ್ಪಟ್ಟಿದ್ದೇನೆ. ಮತ್ತೆ ನಿನ್ನನ್ನು ಹತ್ತಿರ ಸೇರಿಸಲು ಸಾಧ್ಯವಿಲ್ಲ.
ಒಂದು ದಿನ ರಾತ್ರಿ ನಾಲ್ಕನೇ ಖಲೀಫ ಅಲಿಯವರು(ರ) ಎದ್ದು ಕುಳಿತರು. ಅಪಾಯವೊಂದರಿಂದ ತಪ್ಪಿಸಿಕೊಂಡು ಓಡಿ ಬಂದವರಂತೆ ಏದುಸಿರು ಬಿಡುತ್ತಿದ್ದರು. ಶತ್ರುಗಳು ಬೆನ್ನಟ್ಟಿ ಬಂದರೆ ವ್ಯಕ್ತಿಯ ವರ್ತನೆ ಹೇಗಿರುತ್ತದೋ ಆ ರೀತಿಯಲ್ಲಿ ಅವರು ಭಯದಿಂದ ಕಂಪಿಸುತ್ತಿದ್ದರು. ಬಳಿಕ ಅವರು ದುಃಖ ಮತ್ತು ಭಾವುಕರಾಗಿ ಹೀಗೆ ಹೇಳಿದರು,
ಓ ಭೌತಿಕ ಜಗತ್ತೇ, ವಂಚಿಸಲು ನೀನು ಬೇರೆ ಯಾರನ್ನಾದರೂ ನೋಡಿಕೋ. ನಾನಾದರೋ ನಿನಗೆ ಮೂರು ತಲಾಕ್ ಹೇಳಿ ಬೇರ್ಪಟ್ಟಿದ್ದೇನೆ. ಮತ್ತೆ ನಿನ್ನನ್ನು ಹತ್ತಿರ ಸೇರಿಸಲು ಸಾಧ್ಯವಿಲ್ಲ.
ಅಂದಹಾಗೆ,
ಈ ಅಲಿ(ರ) ಮತ್ತು ಉಮರ್(ರ) ಇಬ್ಬರೂ ಸಾಮಾನ್ಯರಲ್ಲ. ಸ್ವರ್ಗದ ಸುವಾರ್ತೆ ಸಿಕ್ಕವರು. ಪರಲೋಕದ ವಿಚಾರಣೆಯಲ್ಲಿ ಗೆಲುವನ್ನು ಶತಸಿದ್ಧಗೊಳಿಸಿಕೊಂಡವರು. ಪ್ರವಾದಿ(ಸ)ರ ಜೊತೆ ಬದುಕು ಸಾಗಿಸಿದವರು. ಉಮರ್(ರ)ರ ಮಗಳು ಹ ಫ್ಸಾರನ್ನು ಪ್ರವಾದಿ(ಸ) ಮದುವೆಯಾಗಿದ್ದಾರೆ, ಪ್ರವಾದಿ(ಸ)ಯವರ ಮಗಳು ಫಾತಿಮಾರನ್ನು ಅಲಿ(ರ) ವಿವಾಹವಾಗಿದ್ದಾರೆ. ಅತ್ಯಂತ ಪ್ರಾಮಾಣಿಕರು, ಸತ್ಯವಂತರು, ಇಸ್ಲಾಮಿನ ಪ್ರಭಾವಿ ನಾಯಕರೂ ಆದವರಿವರು. ಇಂಥವರೇ ಈ ರೀತಿಯಲ್ಲಿ ಮರಣಾನಂತರದ ಬದುಕಿನ ಬಗ್ಗೆ ಎಚ್ಚರಿಕೆ ಹೊಂದುವುದೆಂದರೆ, ಅದನ್ನು ವ್ಯಾಖ್ಯಾನಿಸಬೇಕಾದುದು ಹೇಗೆ? ನಿಜವಾಗಿ,
ಈ ಅಲಿ(ರ) ಮತ್ತು ಉಮರ್(ರ) ಇಬ್ಬರೂ ಸಾಮಾನ್ಯರಲ್ಲ. ಸ್ವರ್ಗದ ಸುವಾರ್ತೆ ಸಿಕ್ಕವರು. ಪರಲೋಕದ ವಿಚಾರಣೆಯಲ್ಲಿ ಗೆಲುವನ್ನು ಶತಸಿದ್ಧಗೊಳಿಸಿಕೊಂಡವರು. ಪ್ರವಾದಿ(ಸ)ರ ಜೊತೆ ಬದುಕು ಸಾಗಿಸಿದವರು. ಉಮರ್(ರ)ರ ಮಗಳು ಹ ಫ್ಸಾರನ್ನು ಪ್ರವಾದಿ(ಸ) ಮದುವೆಯಾಗಿದ್ದಾರೆ, ಪ್ರವಾದಿ(ಸ)ಯವರ ಮಗಳು ಫಾತಿಮಾರನ್ನು ಅಲಿ(ರ) ವಿವಾಹವಾಗಿದ್ದಾರೆ. ಅತ್ಯಂತ ಪ್ರಾಮಾಣಿಕರು, ಸತ್ಯವಂತರು, ಇಸ್ಲಾಮಿನ ಪ್ರಭಾವಿ ನಾಯಕರೂ ಆದವರಿವರು. ಇಂಥವರೇ ಈ ರೀತಿಯಲ್ಲಿ ಮರಣಾನಂತರದ ಬದುಕಿನ ಬಗ್ಗೆ ಎಚ್ಚರಿಕೆ ಹೊಂದುವುದೆಂದರೆ, ಅದನ್ನು ವ್ಯಾಖ್ಯಾನಿಸಬೇಕಾದುದು ಹೇಗೆ? ನಿಜವಾಗಿ,
ಈ ಎರಡೂ ಘಟನೆಗಳಲ್ಲಿ ಒಂದು ಪ್ರಬಲ ಸಂದೇಶವಿದೆ. ಅದುವೇ ಪರಲೋಕ. ಇಸ್ಲಾಮಿನ ತಾಯಿ ಬೇರೂ ಇದುವೇ. ಇಹಲೋಕದ ಕರ್ಮಗಳ ಬಗ್ಗೆ ಪರಲೋಕದಲ್ಲಿ ಪ್ರಶ್ನಿಸಲಾಗುವುದು ಮತ್ತು ಆ ಪ್ರಶ್ನೆಗೆ ನೀಡುವ ಉತ್ತರದ ಆಧಾರದಲ್ಲಿ ವ್ಯಕ್ತಿಯ ಸ್ವರ್ಗ-ನರಕವನ್ನು ತೀರ್ಮಾನಿಸಲಾಗುವುದು ಎಂಬ ಅತಿ ಶಕ್ತಿ ಶಾಲಿ ನಂಬಿಕೆ ಇರುವುದು ಇಸ್ಲಾಮಿನಲ್ಲಿ ಮಾತ್ರ ಎಂದೇ ಹೇಳಬಹುದು. ಪರಲೋಕ ಜೀವನದ ಮೇಲೆ ವಿಶ್ವಾಸ ಇಡುವುದು ಮುಸ್ಲಿಮರ ಮೂಲಭೂತ ಅಗತ್ಯವಾಗಿದೆ. ಪವಿತ್ರ ಕುರ್‌ಆನ್ ಈ ಕುರಿತಂತೆ ಒಂದು ಪ್ರಬಲ ಮಾತನ್ನು ಹೇಳುತ್ತದೆ,
“ನೀವು ಕುರ್‌ಆನ್ ಪಠಿಸುವಾಗ ನಿಮ್ಮ ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸದವರ ಮಧ್ಯೆ ನಾವು ಒಂದು ತೆರೆಯನ್ನು ಹಾಕಿ ಬಿಡುತ್ತೇವೆ.” (17: 45)
ಈ ವಚನದಲ್ಲಿ ಬಹುಮುಖ್ಯವಾದ ಸಂದೇಶವೊಂದಿದೆ. ಪವಿತ್ರ ಕುರ್‌ಆನ್‌ನೊಂದಿಗೆ ನಿಮಗೆ ಗಾಢ ಸಂಬಂಧ ಬೆಳೆಯಬೇಕಾದರೆ ನಿಮ್ಮಲ್ಲಿ ಪರಲೋಕ ಜೀವನದ ಬಗ್ಗೆ ಪ್ರಬಲ ವಿಶ್ವಾಸ ಇರಬೇಕಾದುದು ಅಗತ್ಯ ಎಂಬುದೇ ಈ ಸಂದೇಶ. ಇಸ್ಲಾಮ್ ಮತ್ತು ಇತರ ವಿಚಾರಧಾರೆಗಳ ನಡುವಿನ ಬಲುದೊಡ್ಡ ವ್ಯತ್ಯಾ ಸವೇ ಈ ಪರಲೋಕ ಪರಿಕಲ್ಪನೆ. ಓರ್ವ ವ್ಯಕ್ತಿಯನ್ನು ಸಜ್ಜನನಾಗಿ ಮತ್ತು ಮೌಲ್ಯವಂತ ವ್ಯಕ್ತಿಯಾಗಿ ಬದಲಿಸುವ ಬಲುದೊಡ್ಡ ಆಯುಧವಾಗಿ ಇಸ್ಲಾಮ್ ಪರಲೋಕ ಜೀವನವನ್ನು ಕಟ್ಟಿ ಕೊಡುತ್ತದೆ. ಪರಲೋಕ ವಿಚಾರಣೆಯ ಬಗ್ಗೆ ಗಾಢ ನಂಬಿಕೆ ಇರುವ ವ್ಯಕ್ತಿ ಪ್ರತಿ ನಿಮಿಷವನ್ನೂ ಎಚ್ಚರಿಕೆಯಿಂದ ಕಳೆಯುತ್ತಾನೆ/ಳೆ. ಆತ/ಕೆ ಯಾವುದೇ ಕೆಲಸವನ್ನು ಮಾಡುವ ಮೊದಲು ಇದು ಪರಲೋಕದಲ್ಲಿ ತನ್ನನ್ನು ಇಕ್ಕಟ್ಟಿಗೆ ಸಿಲುಕಿಸಬಲ್ಲುದೇ ಎಂದು ಸ್ವಯಂ ಪ್ರಶ್ನಿಸಿಕೊಳ್ಳುತ್ತಾನೆ. ದೇವನು ವಿಚಾರಿಸಿದರೆ ತಾನೇನು ಉತ್ತರ ಕೊಡಬಲ್ಲೆ ಎಂದು ಚಿಂತಿಸುತ್ತಾನೆ. ಆತ ಸರಕಾರಿ ಅಧಿ ಕಾರಿಯಾಗಿರಬಹುದು, ನ್ಯಾಯವಾದಿಯಾಗಿರಬಹುದು, ನ್ಯಾಯಾಧೀಶರಾಗಿರಬಹುದು ಅಥವಾ ರಾಜಕಾರಣಿ, ಸೇಲ್ಸ್ ಮಾನ್, ಆಟೋ ಚಾಲಕ, ಕ್ರೀಡಾಪಟು, ವಿದ್ವಾಂಸ, ಶಿಕ್ಷಕ, ಕೂಲಿ ಕಾರ್ಮಿಕ, ವ್ಯಾಪಾರಿ... ಹೀಗೆ ಏನೇ ಆಗಿದ್ದರೂ ಆತ ಪರಲೋಕದ ಕುರಿತಂತೆ ಗಾಢ ವಿಶ್ವಾಸ ಇದ್ದವನಾಗಿದ್ದರೆ ತನ್ನ ಕೆಲಸಕ್ಕಿಂತ ಮೊದಲು ಇಂಥದ್ದೊಂದು ಪ್ರಶ್ನೆಯನ್ನು ಸ್ವಯಂ ಕೇಳಿಯೇ ಕೇಳುತ್ತಾನೆ. ಅಷ್ಟಕ್ಕೂ,
ಪರಲೋಕದ ವಿಚಾರಣೆಯ ಬಗ್ಗೆ ಎಚ್ಚರಿಕೆಯನ್ನು ಹೊಂದಬೇಕಾದರೆ ಇಹಲೋಕದ ಬದುಕಿನ ಕುರಿತಂತೆ ಸ್ಪಷ್ಟತೆಯನ್ನೂ ಹೊಂದಿರಬೇಕಾಗುತ್ತದೆ. ಇಸ್ಲಾಮ್ ಪರಲೋಕವನ್ನು ಕಟ್ಟಿಕೊಡುವುದು ಶಾಶ್ವತ ಜೀವನ ಎಂಬ ರೀತಿಯಲ್ಲಿ. ಇಹಲೋಕವನ್ನು ತಾತ್ಕಾಲಿಕ ಜೀವನ ಎಂದೂ ಅದು ಪರಿಚಯಿಸುತ್ತದೆ. ಇಹಲೋಕದ ಬದುಕನ್ನು ಪ್ರವಾದಿ(ಸ) ಯಾತ್ರಿಕ ನಿಗೆ ಹೋಲಿಸಿದ್ದಾರೆ. ಪವಿತ್ರ ಕುರ್‌ಆನ್ ಅಂತೂ ಇಹಲೋಕದ ಬದುಕನ್ನು ಆಟ-ವಿನೋದ ಗಳ ಆಡುಂಬೋಲದಂತೆ ಚಿತ್ರಿಸಿದೆ. ಇಹಲೋಕದ ಮೋಹಕ್ಕೆ ಬಿದ್ದರೆ ಪರಲೋಕ ಜೀವನ ನಷ್ಟವಾಗುತ್ತದೆ ಎಂಬ ಸಂದೇಶವನ್ನು ಪ್ರವಾದಿಯವರು ಮತ್ತು ಪವಿತ್ರ ಕುರ್‌ಆನ್ ಬಾರಿ ಬಾರಿಗೂ ಎಚ್ಚರಿಸುವುದರ ಹಿಂದೆ ಪರಲೋಕ ಬದುಕನ್ನು ಗಂಭೀರವಾಗಿ ಪರಿಗಣಿಸಬೇಕೆಂಬ ಉದ್ದೇಶವಿದೆ. ಯಾವಾಗ ಇಹಲೋಕದ ವಾಸ್ತವಿಕತೆಯನ್ನು ಕುರ್‌ಆನ್ ಪರಿಚಯಿಸಿದ ರೂಪದಲ್ಲಿ ಪರಿಗಣಿಸಲು ಕುರ್‌ಆನ್ ಓದುಗನಿಗೆ ಸಾಧ್ಯವಾಗುತ್ತದೋ ಆತನಿಗೆ/ಕೆಗೆ ಕುರ್‌ಆನ್ ಅಂತರಾತ್ಮಕ್ಕೆ ಇಳಿಯಬಲ್ಲುದು ಎಂಬುದೇ ಬನೀ ಇಸ್ರಾಈಲ್ ಅಧ್ಯಾಯದ 45 ವಚನದ ಒಳಾರ್ಥ. ಪವಿತ್ರ ಕುರ್‌ಆನ್ ಇನ್ನೆರಡು ಕಡೆಗಳಲ್ಲಿ ಪರಲೋಕವನ್ನು ಭಯಪಟ್ಟು ಬದುಕುವವರ ಕುರಿತಂತೆ ಅತ್ಯಂತ ಪರಿಣಾಮಕಾರಿಯಾಗಿ ಹೀಗೆ ವಿವರಿಸಿದೆ,
‘ದೇವನ ನಿಜವಾದ ದಾಸರು ಭೂಮಿಯ ಮೇಲೆ ಸೌಮ್ಯ ನಡಿಗೆಯಲ್ಲಿ ನಡೆಯುತ್ತಾರೆ. ನಮ್ಮ ಪ್ರಭೂ, ನಮ್ಮನ್ನು ನರಕದ ಯಾತನೆಯಿಂದ ರಕ್ಷಿಸು. ಅದರ ಯಾತನೆಯಂತೂ ಪ್ರಾಣಾಂತಿಕವಾಗಿದೆ. (25:64)’ ಎಂದು ಪ್ರಾರ್ಥಿಸುತ್ತಾರೆ.
ಪರಲೋಕದ ಬಗ್ಗೆ ಆಳ ಪ್ರಜ್ಞೆ ಇರುವವರು ಎಂಥವರೆಂದರೆ, ‘ತಮ್ಮ ಪ್ರಭುವಿನ ಕಡೆಗೆ ಮರಳಲಿಕ್ಕಿದೆ ಎಂಬ ಪ್ರಜ್ಞೆಯಿಂದ ಕಂಪಿಸುತ್ತಿರುವ ಹೃದಯಗಳಿರುವವರು (25: 60)’ ಎಂದಿದೆ. ಅಂದರೆ,
ಮುಸ್ಲಿಮರ ಬದುಕು ಪರಲೋಕ ವಿಚಾರಣೆ, ಶಿಕ್ಷೆ-ರಕ್ಷೆಗಳ ಕುರಿತಂತೆ ಆಳ ಪ್ರಜ್ಞೆಯಿಂದ ಮತ್ತು ಅತೀವ ಸ್ಪಷ್ಟತೆಯಿಂದ ಕೂಡಿರಬೇಕು ಎಂಬುದನ್ನೇ ಹೇಳುತ್ತದೆ. ನಿಜವಾಗಿ, ಇಂಥ ಭಾವದಲ್ಲಿ ಬದುಕು ಸವೆಸುವುದು ತೀರಾ ಸುಲಭ ಅಲ್ಲ. ಪರಲೋಕ ಕಣ್ಣೆದುರು ಇಲ್ಲ. ಅದೊಂದು ನಂಬಿಕೆಯೇ ಹೊರತು ಯಾರೂ ಅದನ್ನು ಅನುಭವಿಸಿದವರಿಲ್ಲ. ಹೀಗೆ ಅನುಭವಿಸದೇ ಇರುವ ಸಂಗತಿಯೊಂದನ್ನು ಅನುಭವಿಸಿದ ರೀತಿಯಲ್ಲಿ ಬದುಕುವುದಕ್ಕೆ ಪ್ರಬಲ ವಿಶ್ವಾಸದ ಅಗತ್ಯವಿದೆ. ಆದ್ದರಿಂದಲೇ ಅನೇಕ ಬಾರಿ ಅತ್ಯಂತ ಸಜ್ಜನರು ಮತ್ತು ಧರ್ಮಭೀರು ಎನಿಸಿಕೊಂಡವರೂ ಪರಲೋಕ ಪ್ರಜ್ಞೆಯಿಲ್ಲದವರಂತೆ ವರ್ತಿಸುವುದಿದೆ. ಇವರು ಭೌತಿಕ ಜಗತ್ತಿನ ನಿಯಮಗಳಿಗೆ ಭಯಪಟ್ಟು ಅಭೌತಿಕ ಜಗತ್ತಾದ ಪರಲೋಕದ ವಿಚಾರಣೆಗೆ ಭಯಪಡದೇ ಇರುವುದೂ ನಡೆಯುತ್ತದೆ. ಅಂಥ ಸಂದರ್ಭಗಳಲ್ಲಿ ಸಾರ್ವಜನಿಕರಿಂದ ತೀವ್ರ ವಿಮರ್ಶೆಗಳೂ ಎದುರಾಗುತ್ತವೆ. ಭೌತಿಕ ಜಗತ್ತಿನ ಬದುಕಿನಲ್ಲಿ ಅನುಭವಕ್ಕೆ ಬರದೇ ಇರುವ ವಿಷಯವನ್ನು ಅನುಭವಿಸಿದಂತೆ ಬದುಕುವುದು ಸವಾಲಿನದ್ದಾಗಿರುವುದರಿಂದಲೇ ಕುರ್‌ಆನ್ ಪದೇ ಪದೇ ಪರಲೋಕ ವಿಚಾರಣೆ ಮತ್ತು ಶಾಶ್ವತ ಬದುಕಿನ ಕುರಿತಂತೆ ಎಚ್ಚರಿಕೆಯನ್ನು ನೀಡಿದೆ ಎಂದೇ ಹೇಳಬೇಕಾಗಿದೆ.
ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದರೆ ಇಂತಿಷ್ಟು ದಂಡ ನೀಡಬೇಕಾಗುತ್ತದೆ ಎಂಬುದು ನಿತ್ಯ ಬದುಕಿನ ಅನುಭವದ ವಿಷಯವಾಗಿದೆ. ಆದರೆ, ಯಾರಿಗೂ ಕಾಣದಂತೆ ಕದ್ದರೆ ಅಥವಾ ಅತೀವ ಬುದ್ಧಿವಂತಿಕೆಯನ್ನು ತೋರಿ ವ್ಯಕ್ತಿಯೋರ್ವನಿಗೆ ವಂಚಿಸಿದರೆ ಮತ್ತು ಈ ಎರಡೂ ಸಂದರ್ಭಗಳಲ್ಲಿ ಅಪರಾಧಿಯೆಂದು ಸಾಬೀತುಪಡಿಸಲು ಭೌತಿಕ ಕಾನೂನು ಸಂಹಿತೆಗಳು ವಿಫಲವಾಗುತ್ತದೆಂದು ಖಚಿತವಿದ್ದರೆ...? ಪರಲೋಕ ಜೀವನದ ಪರಿಕಲ್ಪನೆ ಮಹತ್ವವನ್ನು ಪಡೆಯುವುದು ಇಂಥ ಸ್ಥಿತಿಯಲ್ಲಿ. ಸಿಸಿ ಕ್ಯಾಮರಾಗಳು ಇರಲಿ ಇಲ್ಲದಿರಲಿ, ಆಯಾ ಪೊಲೀಸರಿಗೆ ಗೊತ್ತಾಗಲಿ ಆಗದೇ ಇರಲಿ, ಆದರೆ ತನ್ನನ್ನು ಸದಾ ನೋಡುವವ ಒಬ್ಬನಿದ್ದಾನೆ ಮತ್ತು ಆತ ತನ್ನ ಪ್ರತಿ ಕೃತ್ಯವನ್ನೂ ದಾಖಲಿಸುತ್ತಾನೆ ಹಾಗೂ ಮರಣಾನಂತರ ಈ ಕೃತ್ಯದ ಬಗ್ಗೆ ಪ್ರಶ್ನಿಸುತ್ತಾನೆ ಎಂಬ ಪ್ರಜ್ಞೆ ಇರಬೇಕು ಎಂಬುದು ಇಸ್ಲಾಮಿನ ಅತಿ ಪ್ರಬಲ ನಿಲುವಾಗಿದೆ. ಈ ನಿಲುವೇ ಸ್ವಸ್ಥ ಸಮಾಜದ ಅಡಿಗಲ್ಲಾಗಿದೆ ಎಂಬುದಾಗಿ ಇಸ್ಲಾಮ್ ಭಾವಿಸುತ್ತದೆ. ಮಾತ್ರವಲ್ಲ,
ಇಂಥ ಭಾವನೆಯೊಂದಿಗೆ ಬದುಕಿ ತೋರಿಸಿದ ದೊಡ್ಡದೊಂದು ಸಮೂಹ ಇತಿಹಾಸದಲ್ಲಿ ಗತಿಸಿ ಹೋಗಿದೆ. ಸ್ವತಃ ಪ್ರವಾದಿ ಮುಹಮ್ಮದರೇ(ಸ) ಇಂಥ ಬದುಕನ್ನು ಬದುಕಿ ತೋರಿಸಿಕೊಟ್ಟಿ ದ್ದಾರೆ. ಅವರ ಅನುಯಾಯಿಗಳೂ ‘ಇದು ಸಾಧ್ಯ’ ಎಂದು ಸಾಬೀತುಪಡಿಸಿದ್ದಾರೆ. ಮಾತ್ರವಲ್ಲ, ಅತ್ಯಂತ ದುಷ್ಟರಾಗಿದ್ದ ಮತ್ತು ಅನ್ಯಾಯಗಳನ್ನೇ ನ್ಯಾಯವೊಂದು ಬದುಕುತ್ತಿದ್ದವರನ್ನೇ ಇಂಥ ಪ್ರಜ್ಞೆಯ ಬದುಕು ಆಮೂಲಾಗ್ರವಾಗಿ ಬದಲಾಯಿಸಿದ್ದನ್ನು ಮತ್ತು ಅವರನ್ನು ಅತ್ಯುನ್ನತ ವ್ಯಕ್ತಿಗಳಾಗಿ ಮಾರ್ಪಡಿಸಿದ್ದನ್ನೂ ಇತಿಹಾಸ ಕಂಡಿದೆ. ಅಂದಹಾಗೆ,
ಖಲೀಫರುಗಳನ್ನೇ ಅಲುಗಾಡಿಸುವ ಶಕ್ತಿ ಇಸ್ಲಾಮಿನ ಪರಲೋಕ ಪರಿಕಲ್ಪನೆಗೆ ಇದೆ ಎಂಬುದನ್ನು ಘಟನೆ 1 ಮತ್ತು 2 ಸಾಬೀತುಪಡಿಸುತ್ತದೆ.
No comments:
Post a Comment