Thursday, March 8, 2012

ವೀಕ್ಷಕರಾಗಬೇಡಿ, ಸಹಭಾಗಿಗಳಾಗಿ, ಇದು ಇಸ್ಲಾಮೀ ಆಂದೋಲನ

1941 ಆಗಸ್ಟ್ 26ರಂದು ಸೈಯದ್ ಮೌದೂದಿ ಸಹಿತ 75 ಮಂದಿ ವಿದ್ವಾಂಸರು ಒಟ್ಟು ಸೇರಿ ಜಮಾಅತೆ ಇಸ್ಲಾಮಿಯನ್ನು ಸ್ಥಾಪಿಸುವುದಕ್ಕೆ ಬಲವಾದ ಕಾರಣ ಇತ್ತು.
ಬ್ರಿಟಿಷರು ಭಾರತಕ್ಕೆ ಬಂದು ಅದಾಗಲೇ 200 ವಷ್ರಗಳು ಕಳೆದಿತ್ತು. ಆದ್ದರಿಂದಲೇ ಅವರ ಇಂಗ್ಲಿಷು, ಅವರ ಪ್ಯಾಂಟು, ಷರಟು , ಆಲೋಚನೆ, ಸಿದ್ಧಾಂತಗಳೆಲ್ಲ ಭಾರತೀಯ ಮುಸ್ಲಿಮರ ಮೇಲೆ ಗಾಢ ಪ್ರಭಾವವನ್ನು ಬೀರತೊಡಗಿದ್ದುವು. ದೇಹ ಭಾರತದ್ದಾದರೂ ಬ್ರಿಟಿಷ್ ಮನಸನ್ನು ಹೊಂದಿದ ಹುಸೇನ್, ಸಾರಾರು ತಯಾರಾಗತೊಡಗಿದರು. ಇವರಿಗೆ ಇಸ್ಲಾಮಿನೊಂದಿಗೆ ದ್ವೇಷ ಇತ್ತು ಎಂದಲ್ಲ. ಆದರೆ ಜಾತ್ಯತೀತತೆ, ಸಮಾಜವಾದ, ಕಮ್ಯುನಿಝಮ್, ಬಂಡವಾಳಶಾಹಿತ್ವದಂಥ ಆಧುನಿಕ ಸಿದ್ಧಾಂತಗಳ ಮುಂದೆ ಇಸ್ಲಾಮ್ ಎಂಬುದು ತೀರಾ ಕಾಲಬಾಹಿರ ಮತ್ತು ಪುರಾತನ ಸಿದ್ಧಾಂತದಂತೆ ಅವರಿಗೆ ಕಾಣತೊಡಗಿತು. ಬಡ್ಡಿಯನ್ನು ಪ್ರಬಲವಾಗಿ ಪ್ರತಿಪಾದಿಸುವ ಬಂಡವಾಳಶಾಹಿತ್ವ, ಜಾತ್ಯತೀತ ಸಿದ್ಧಾಂತಗಳ ಎದುರು ಬಡ್ಡಿಯನ್ನು ಹರಾಮ್ ಎಂದು ಘೋಷಿಸುವುದು ಅಜ್ನಾನದಂತೆ , ಅವಮಾನದಂತೆ ಅನಿಸತೊಡಗಿತು. ಬ್ರಿಟಿಷರ ಸಂಸ್ಕøತಿಯೇ ಕುಡಿಯುವುದು, ಮಾತ್ರವಲ್ಲ ಭಾರತದಲ್ಲೂ ಅದು ನಿಷಿದ್ಧವಲ್ಲ. ಹೀಗಿರುವಾಗ ಅದರ ವಿರುದ್ಧ ಮಾತಾಡುವುದರಿಂದ ತಮ್ಮ ಇಮೇಜಿಗೆ ಧಕ್ಕೆ ಬಂದೀತೋ ಅಂತ ಮುಸ್ಲಿಮರು ಅಂದುಕೊಳ್ಳತೊಡಗಿದರು. ಒಂದು ರೀತಿಯಲ್ಲಿ ನಮಾಜ್ ಗೆ, ಉಪವಾಸಕ್ಕೆ, ಮದುವೆಗೆ, ಕೆಲವು ತಸ್ಬೀಹ್ ಗೆ , ಹಜ್ಜ್ ಗೆ ಇಸ್ಲಾಮನ್ನು ಸೀಮಿತಗೊಳಿಸಿ ಬದುಕಿನ ಉಳಿದ ಚಟುವಟಿಕೆಗಳಿಗೆ ಕಮ್ಯುನಿಝಮನ್ನು, ಜಾತ್ಯತೀತ ಸಿದ್ಧಾಂತವನ್ನು ಆಶ್ರಯಿಸತೊಡಗಿದರು. ಹೆಸರು ಮುಹಮ್ಮದ್, ಉಮರ್, ಇಬ್ರಾಹೀಮ್ ಅ0ತ ಇದ್ದರೂ ಗಣೇಶ, ನವೀನ, ಮೊತಿಲಾಲಗಿಂತ ಭಿನ್ನವಾದ ಬದುಕೇನೂ ಇವರದ್ದಾಗಿರಲಿಲ್ಲ. ಅವರು ದೇವಾಲಯಕ್ಕೆ ಹೋಗುವಾಗ ಇವರು ಮಸೀದಿಗೆ ಹೋಗುತ್ತಿದ್ದರು. ಉಳಿದಂತೆ ಇವರ ವ್ಯಾಪಾರ, ಮಾತು, ಆಟ, ಆಲೋಚನೆಗಳಲ್ಲೆಲ್ಲಾ ಸಮಾನವಾಗಿತ್ತು. ಭಾರತೀಯ ಸಮಾಜದಲ್ಲಿದ್ದ ಜಾತಿಪದ್ಧತಿ ಮುಸ್ಲಿಮರ ಮೇಲೆ ಎಷ್ಟರ ಮಟ್ಟಿನ ಪ್ರಭಾವ ಬೀರಿತ್ತೆಂದರೆ ಶಾಫಿಈ, ಹನಫಿ, ಹಂಬಲಿ, ಮಾಲಿಕಿಗಳೆಲ್ಲ ಒಂದೊಂದು ಜಾತಿಯಾಗಿ, ಪರಸ್ಪರ ಮದುವೆ ಸಂಬಂಧ ಏಪ್ರಡಿಸಲಾರದಷ್ಟು ಅವರ ಮಧ್ಯೆ ಅಂತರ ಏಪ್ರಟ್ಟಿದ್ದುವು.
ಹೀಗಿರುವಾಗ ರಂಗೀಲಾ ರಸೂಲ್ ಅನ್ನುವ ಕೃತಿಯೊಂದು ಪ್ರಕಟವಾಯಿತು.
ರಾಜಪಾಲ್ ಅನ್ನುವ ವ್ಯಕ್ತಿಯೊಬ್ಬ ಅದನ್ನು ಪ್ರಕಟಿಸಿದ್ದ. ಪ್ರವಾದಿಯವರನ್ನು(ಸ) ನಿಂದಿಸುವ, ಗೇಲಿ ಮಾಡುವ ಆ ಕೃತಿಯನ್ನು ಬರೆದಿರುವುದು ಸ್ವಾಮಿ ಶ್ರದ್ಧಾನಂದ ಅನ್ನುವ ಅನುಮಾನವೊಂದು ಎಲ್ಲೆಡೆ ಕಾಣಿಸತೊಡಗಿತು. ಮುಸ್ಲಿಮರನ್ನು ಶುದ್ಧಗೊಳಿಸಿ ಹಿಂದೂ ಧಮ್ರಕ್ಕೆ ಮತಾಂತರಿಸುವ ‘ಶುದ್ಧಿ ಚಳವಳಿ’ಗೆ ಅವರು ನೇತೃತ್ವ ನೀಡಿರುವುದು ಈ ಅನುಮಾನವನ್ನು ಇನ್ನಷ್ಟು ಬಲಗೊಳಿಸಿತು. ಇದಕ್ಕಿಂತ ಎರಡು ವರ್ಷಗಳ ಹಿಂದೆ 1923ರಲ್ಲಿ ‘ಯಾರು ಹಿಂದು’ ಅನ್ನುವ ವಿಷಪೂರಿತ ಕೃತಿಯೊಂದನ್ನು ಹಿಂದೂ ಮಹಾಸಭಾದ ನಾಯಕ ವಿ.ಡಿ. ಸಾವರ್ಕರ್ ಹೊರ ತ0ದಿದ್ದರು. ಮುಸ್ಲಿಮರನ್ನು ನಿ0ದಿಸುವ, ಅವರ ವಿರುದ್ಧ ಹಿ0ದೂಗಳನ್ನು ಎತ್ತಿ ಕಟ್ಟುವ ಪ್ರಯತ್ನವೊ0ದು ಹೀಗೆ ಬಹಿರಂಗವಾಗಿ ನಡೆಯುತ್ತಿರುವಾಗಲೇ, ಅಬ್ದುರ್ರಶೀದ್ ಅನ್ನುವ ವ್ಯಕ್ತಿಯೊಬ್ಬ 1926ರಲ್ಲಿ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆ ಮಾಡಿದ. ಇದು ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ಒಡೆಯುವುದಕ್ಕೆ ಕಾರಣವಾಯಿತು. ಮುಸ್ಲಿಮರನ್ನು ಜಿಹಾದಿಗಳು, ಅಸಹಿಷ್ಣುಗಳು, ಅತಿಕ್ರಮಣಕೋರರು, ಜಗಳಗಂಟರು.. ಎಂದೆಲ್ಲಾ ಟೀಕಿಸುವ, ಅವರ ವಿಶ್ವಾಸವನ್ನು ಪ್ರಶ್ನಿಸುವ ಪ್ರಯತ್ನಗಳು ಧಾರಾಳ ನಡೆದುವು. 1927 ಎಪ್ರಿಲ್ ನಲ್ಲಿ ನಾಗ್ಪುರದಲ್ಲಿ ಕೋಮುಗಲಭೆ ಸ್ಫೋಟಿಸಿತು. ಆ ಬಳಿಕ ಅದು ಇಡೀ ದೇಶಕ್ಕೇ ಹರಡಿತು. ಇಸ್ಲಾಮಿನ ಜಿಹಾದ್ ಕಾನ್ಸೆಪ್ಟನ್ನು ಕ್ರೂರ, ಸಮಾಜದ್ರೋಹಿ ಎಂದು ಟೀಕಿಸಲಾಯಿತಲ್ಲದೇ ಅದನ್ನು ಮುಸ್ಲಿಮರು ಕೈಬಿಡಬೇಕೆ0ದು ಬಲವಾಗಿ ಒತ್ತಾಯಿಸಲಾಯಿತು. ಈ ಹಂತದಲ್ಲಿ ಜಿಹಾದ್ ಅಂದರೆ ಏನು ಎಂಬುದನ್ನು ಈ ದೇಶಬಾಂಧವರಿಗೆ ಸ್ಪಷ್ಟವಾಗಿ ತಿಳಿಸುವ ಸಣ್ಣ ಕೃತಿ ಕೂಡ ಈ ಸಮುದಾಯದಲ್ಲಿರಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದ 24ರ ಹರೆಯದ ಸೈಯದ್ ಮೌದೂದಿ, ‘ಇಸ್ಲಾಮಿನಲ್ಲಿ ಜಿಹಾದ್’ ಅನ್ನುವ ಕೃತಿಯನ್ನು ಬರೆದು ದೇಶದ ಮುಂದಿಟ್ಟರು. ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಜಿಹಾದನ್ನು ಮುಂದಿಟ್ಟು ಮುಸ್ಲಿಮರನ್ನು ನಿಂದಿಸುತ್ತಿದ್ದವರೆಲ್ಲ ಆ ವಿಷಯವನ್ನೇ ಕೈಬಿಟ್ಟು ಇತರ ಸಂಗತಿಗಳನ್ನು ಆಯ್ದುಕೊಳ್ಳಬೇಕಾಯಿತು.
ಇಸ್ಲಾಮನ್ನು ಸಮಗ್ರ ಜೀವನ ಕ್ರಮ ಎಂದು ಈ ದೇಶದಲ್ಲಿ ವೊತ್ತವೊದಲು ಘೋಷಿಸಿದ್ದೇ ಜಮಾಅತೆ ಇಸ್ಲಾವಿೂ.
ಅಖಂಡ ಭಾರತ ಇಬ್ಭಾಗಗೊಂಡಾಗ ಭಾರತದಲ್ಲಿ ಉಳಿದುಕೊಂಡ ಜಮಾಅತಿನ ಕಾರ್ಯಕರ್ತರು ಒಟ್ಟು ಸೇರಿ 1948 ಎಪ್ರಿಲ್ 15ರಂದು ಜಮಾಅತೆ ಇಸ್ಲಾಮೀ ಹಿಂದನ್ನು (ಭಾರತದ ಇಸ್ಲಾಮೀ ಸ0ಘಟನೆ) ರಚಿಸಿದಾಗ ಈ ದೇಶದಲ್ಲಿ ಕೋಮುಭಾವನೆ ಅತ್ಯಂತ ಭೀಕರ ಸ್ವರೂಪದಲ್ಲಿತ್ತು. ಹಿಂದೂ ಕೋಮುವಾದಕ್ಕೆ ಮುಸ್ಲಿಮ್ ಕೋಮುವಾದ ಮದ್ದು ಎಂದು ಅಂದುಕೊಂಡವರು, ಅವರ ತಲವಾರಿಗೆ, ನಮ್ಮ ತಲವಾರು ತಕ್ಕ ಉತ್ತರ ಅಂತ ವಾದಿಸುವವರು ಮುಸ್ಲಿಮರಲ್ಲಿದ್ದರು. ಹಾಗೆಯೇ ಮುಸ್ಲಿಮರನ್ನು ಅಸಹಿಷ್ಣುಗಳು, ದೇಶದ್ರೋಹಿಗಳೆಂದೂ, ಪ್ರವಾದಿಯನ್ನು(ಸ) ಈ ಎಲ್ಲದರ ಪ್ರಚೋದಕ ಎಂದೂ ಪ್ರಚಾರ ಮಾಡುವ ಹಿಂದೂಗಳಿದ್ದರು. ಇಂಥ ವೇಳೆ ಜಮಾಅತ್, ಏಟಿಗೆ ಪ್ರತಿಯೇಟು ಅನ್ನುವ ನಿಲುವನ್ನು ವಿರೋಧಿಸಿತು. “ಮುಸ್ಲಿಮ್ ವ್ಯಕ್ತಿಯೊಬ್ಬ ತನ್ನ ಬಳಿ ಕೆಲಸಕ್ಕಿರುವ ಮುಸ್ಲಿಮೇತರರನ್ನು ಅವಧಿಗಿಂತ ಒಂದು ಸೆಕೆಂಡ್ ಹೆಚ್ಚು ದುಡಿಸಿದರೂ ನಾನು ಪರಲೋಕದಲ್ಲಿ ಆ ಮುಸ್ಲಿಮೇತರನ ಪರ ನಿಲ್ಲುವೆ” ಎಂದ ಕರುಣಾಮಯಿ ಪ್ರವಾದಿಯನ್ನು ಜಮಾಅತ್ ಸಮಾಜಕ್ಕೆ ಪರಿಚಯಿಸಿತು. “ನಾವೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು, ಪರಸ್ಪರ ಸಹೋದರರು ” ಎಂದ ಮನುಷ್ಯ ಪ್ರೇಮಿಯನ್ನು(ಸ) ಸಮಾಜದ ಮುಂದಿಟ್ಟಿತು. ಅನ್ಯರ ಆರಾಧ್ಯರನ್ನು, ಅವರ ಆರಾಧನಾಲಯಗಳನ್ನು ತೆಗಳಬಾರದು ಎಂದ ಕುರ್ಆನನ್ನು, ಕೋಮುವಾದಿ ನನ್ನವನಲ್ಲ ಎಂದ ಮುಹಮ್ಮದರನ್ನು (ಸ), ಮುಸ್ಲಿಮೇತರರ ಶವವನ್ನು ಕೊಂಡೊಯ್ಯುತ್ತಿದ್ದಾಗ ಎದ್ದು ನಿಂತು ಗೌರವಿಸಿದ ಪ್ರವಾದಿಯನ್ನು ಸಮಾಜಕ್ಕೆ ಮಾಡೆಲ್ ಆಗಿ ತೋರಿಸಿತು. ನಿಜವಾಗಿ, ಆವತ್ತು ಆ ಸಮಾಜದ ಪಾಲಿಗೆ ಅದು ಹೊಚ್ಚ ಹೊಸತಾದ ಕಾನ್ಸೆಪ್ಟು . ಮುಸ್ಲಿಮರು ಬಹುಸಂಸ್ಕೃತಿಯನ್ನು ಸಹಿಸುವುದಿಲ್ಲ, ಕಾಫಿರರನ್ನು (ಹಿಂದೂಗಳನ್ನು) ಕೊಲ್ಲುವುದನ್ನು ಜಿಹಾದ್ ಅನ್ನುತ್ತಾರೆ, ಮತಾಂತರ ಮಾಡುತ್ತಾರೆ ಎಂಬೆಲ್ಲಾ ಪ್ರಚಾರಗಳಿದ್ದ ಸಂದರ್ಭದಲ್ಲಿ ಜಮಾಅತ್, ಜಿಹಾದ್ ಗೆ, ಮತಾಂತರಕ್ಕೆ ಇಸ್ಲಾಮೀ ಹಿನ್ನೆಲೆಯಲ್ಲಿ ಸ್ಪಷ್ಟ ವ್ಯಾಖ್ಯಾನ ವನ್ನು ಕೊಟ್ಟು, ದೊಡ್ಡದೊಂದು ಅನುಮಾನದ ವಾತಾವರಣವನ್ನು ತಿಳಿಗೊಳಿಸುವಲ್ಲಿ ಅಪಾರ ಯಶಸ್ಸು ಪಡೆಯಿತು. ಆ ಕುರಿತಂತೆ ಅನೇಕ ಕೃತಿಗಳನ್ನು ಪ್ರಕಟಿಸಿತು. ಕುರ್ಆನನ್ನು ಕೊಲೆಪಾತಕ ಎಂಬಂತೆ ಕಾಣುತ್ತಿದ್ದ, ಅರ್ಥವಾಗದ ಅರಬಿ ಲಿಪಿ ಮತ್ತು ಭಾಷೆಯನ್ನು ಅನುಮಾನದಿಂದ ನೋಡುತ್ತಿದ್ದ ಈ ದೇಶದ ಮಂದಿಗೆ ಅವರ ಭಾಷೆಯಲ್ಲಿ ಕುರ್ಆನನ್ನು ಅನುವಾದಿಸಿ ಕೊಟ್ಟು ಕಣ್ಣು ತೆರೆಸಿದ್ದೇ ಜಮಾಅತೆ ಇಸ್ಲಾಮೀ. ಆ ವರೆಗೆ ಕುರ್ಆನನ್ನು ರಾಗಬದ್ಧವಾಗಿ ಓದಲು, ಚುಂಬಿಸಿ ಮನೆಯ ಎತ್ತರದ ಜಾಗದಲ್ಲಿಟ್ಟು ಕಾಪಾಡಲು ಬಳಸುತ್ತಿದ್ದ ಮುಸ್ಲಿಮ್ ಸಮೂಹ, ಮೊತ್ತಮೊದಲು ಅದರ ಅರ್ಥವನ್ನು ಓದಿ ರೋಮಾಂಚನಗೊಂಡಿತು. ಪ್ರವಾದಿ ಮತ್ತು ಅವರ ಅನುಯಾಯಿಗಳ ಕುರಿತಂತೆ ನೂರಾರು ಪುಸ್ತಕಗಳನ್ನು ಜಮಾಅತ್ ಸಮಾಜದ ಮುಂದಿಟ್ಟಾಗ ಇಸ್ಲಾಮನ್ನು ಪ್ರೀತಿಸುವ ವರ್ಗವೊಂದು ಬೆಳೆಯತೊಡಗಿತು. ದೇಶಬಾಂಧವರು ಮಾತ್ರವಲ್ಲ, ಸ್ವತಃ ಮುಸ್ಲಿಮರೇ ಆ ವರೆಗೆ ಪ್ರವಾದಿಯವರನ್ನು ನಮಾಝ್, ಉಪವಾಸ ಇತ್ಯಾದಿಗಳನ್ನು ಕಲಿಸಿದ ಓರ್ವ ಧಾರ್ಮಿಕ ನಾಯಕ ಎಂದಷ್ಟೇ ಅಂದುಕೊಂಡಿದ್ದರು. ಆದರೆ ನೆರೆಯವರನ್ನು ಅವರ ಧರ್ಮ ನೋಡದೇ ಪ್ರೀತಿಸಲು ಕಲಿಸಿದ ಪ್ರವಾದಿ, ಬಡ್ಡಿಮುಕ್ತ ಅರ್ಥ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಪ್ರವಾದಿ, ಮದ್ಯಮುಕ್ತ, ಭ್ರಷ್ಟ ಮುಕ್ತ ಆಡಳಿತ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದ ಆಡಳಿತಾಧಿಕಾರಿ.. ಹೀಗೆ ಆರ್ಥಿಕ , ಸಾಮಾಜಿಕ, ರಾಜಕೀಯ ಕ್ಷೇತ್ರದ ಸಮಗ್ರ ನಾಯಕರಾಗಿ ಮೊತ್ತಮೊದಲು ಪ್ರವಾದಿಯನ್ನು ಜಮಾಅತೆ ಇಸ್ಲಾಮೀ ಸಮಾಜಕ್ಕೆ ಪರಿಚಯಿಸಿತು.
ಸಣ್ಣಪುಟ್ಟ ದೌರ್ಬಲ್ಯಗಳಿದ್ದರೂ ಪ್ರವಾದಿಯನ್ನು ಅತ್ಯಂತ ಸಮಗ್ರವಾಗಿ ಅನುಸರಿಸುವ ಮಾದರಿ ತಂಡವೊಂದನ್ನು ಕಟ್ಟಲು ಜಮಾಅತೆಇಸ್ಲಾಮೀ ಹಿಂದ್ ಗೆ ಇವತ್ತು ಸಾಧ್ಯವಾಗಿದೆ ಎಂಬುದು ಹೆಮ್ಮೆಯ ಸಂಗತಿ.
ಬಡ್ಡಿ ವ್ಯವಹಾರ ಮಾಡುವ, ವರದಕ್ಷಿಣೆ ಪಡೆಯುವ, ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಒಬ್ಬನೇ ಒಬ್ಬ ಸದಸ್ಯ ಜಮಾಅತ್ ನಲ್ಲಿಲ್ಲ . ಅದು ಮಾದರಿ ಸಮಾಜವೊಂದನ್ನು ಕಟ್ಟುವ ಗುರಿಯೊಂದಿಗೆ ಸ್ಥಾಪನೆಗೊಂಡಿದೆ. ಮದೀನದ 80% ಯಹೂದಿಯರು 20% ಇದ್ದ ಮುಸ್ಲಿಮರನ್ನು ಪ್ರೀತಿಸಿದ್ದರೆ, ಪ್ರವಾದಿಯನ್ನು ಆಡಳಿತಾಧಿಕಾರಿಯಾಗಿ ಅವರು ನೇಮಿಸಿದ್ದರೆ ಅದು ಈ ದೇಶದಲ್ಲೂ ಸಾಧ್ಯ ಎಂದು ಜಮಾಅತ್ ಬಲವಾಗಿ ನಂಬುತ್ತದೆ. ಅಂದು ಯಹೂದಿಯರು ಮುಸ್ಲಿಮರನ್ನು ಪ್ರೀತಿಸಿದ್ದು ಅವರ ಮಾದರಿ ಬದುಕಿಗಾಗಿ. ಅವರನ್ನು ಆಡಳಿತ ನಡೆಸುವಂತೆ ಆಹ್ವಾನಿಸಿದ್ದು ಭ್ರಷ್ಟ ಮುಕ್ತ ಜೀವನ ಕ್ರಮಕ್ಕಾಗಿ. 20% ಇದ್ದ ಮುಸ್ಲಿಮರು 80% ಇದ್ದ ಯಹೂದಿಯರ ವಿರುದ್ಧ ಅಂದು ಬಾಂಬ್ ಸ್ಫೋಟಿಸಿದ್ದಾಗಲಿ, ಕೋಮುಗಲಭೆ ನಡೆಸಿದ್ದಾಗಲಿ ಒಮ್ಮೆಯೂ ನಡೆದಿಲ್ಲ. ಇದನ್ನೇ ಈ ದೇಶಕ್ಕೆ ಮಾದರಿ ಎಂದು ಜಮಾಅತ್ ಪ್ರತಿಪಾದಿಸುತ್ತದೆ. ನಿಜವಾಗಿ ಸಮಾಜವನ್ನು ಪ್ರವಾದಿಯವರು(ಸ) ಸಬಲೀಕರಣಗೊಳಿಸಿದ ವಿಧಾನ ಅದು. ಜಮಾಅತ್ ಆ ವಿಧಾನವನ್ನೇ ಅಳವಡಿಸಿಕೊಂಡಿದೆ. ಮುಸ್ಲಿಮರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಧಾರ್ಮಿಕವಾಗಿ ಸುಶಿಕ್ಷಿತರು ಮತ್ತು ಪ್ರಬಲರಾದಾಗ ಮಾತ್ರ ಅವರಿಂದ ಆರೋಗ್ಯಪೂರ್ಣ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಅದು ನಂಬುತ್ತದೆ.ಆರ್ಥಿಕವಾಗಿ ತೀರಾ ದುರ್ಬಲವಾಗಿರುವ , ಧಾರ್ಮಿಕವಾಗಿ ಅತ್ಯಲ್ಪವಷ್ಟೇ ತಿಳಿದಿರುವ ಮತ್ತು ಸಾಮಾಜಿಕವಾಗಿ ಕುಸಿದು ಹೋಗಿರುವ ಸಮೂಹವೊಂದನ್ನು ಕೇವಲ ರಾಜಕೀಯವಾಗಿ ಮೇಲೆತ್ತಲು ಯತ್ನಿಸುವುದು ಅವೈಜ್ಞಾನಿಕ ಎಂದು ಜಮಾಅತ್ ಪ್ರತಿಪಾದಿಸುತ್ತದೆ. ಅಂಥ ಪ್ರಯತ್ನ ಅಂತಿಮವಾಗಿ ಸೃಷ್ಟಿಸುವುದು ಪಾಕಿಸ್ತಾನದ0ತಹ ಸಮಾಜವನ್ನು.ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಬಲವಾಗದ ಪಾಕ್ ಇವತ್ತು ಸ್ಫೋಟ, ಘರ್ಷಣೆಗಳಲ್ಲಷ್ಟೇ ಸುದ್ದಿ ಮಾಡುತ್ತಿದೆ. ಆದ್ದರಿಂದಲೇ ಜಮಾಅತ್ ಆರ್ಥಿಕ ಕ್ಷೇತ್ರದ ಸಬಲೀಕರಣಕ್ಕಾಗಿ ಬಡ್ಡಿಮುಕ್ತ ಸಾಲ ನಿಧಿಗಳನ್ನು, ಅಸಂಖ್ಯ ಶಿಕ್ಷಣ ಸಂಸ್ಥೆಗಳನ್ನು, ಧಾರ್ಮಿಕ ಜಾಗೃತಿಯನ್ನು ಒಟ್ಟೊಟ್ಟಿಗೆ ಬೆಳೆಸುತ್ತಾ, ಈ ಎಲ್ಲ ರಂಗಗಳಲ್ಲಿ ಸಬಲರಾಗುವ ಜೊತೆಜೊತೆಗೇ ರಾಜಕೀಯ ರಂಗದಲ್ಲೂ ಪ್ರಜ್ಞಾವಂತರಾಗುವ ಸಮೂಹವೊಂದನ್ನು ಕಟ್ಟಲು ಶ್ರಮಿಸುತ್ತಿದೆ. ಇಸ್ಲಾಮೀ ಬ್ಯಾಂಕನ್ನು ಈ ದೇಶದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ಕೇಂದ್ರ ಅರ್ಥ ಮಂತ್ರಿ ಪ್ರಣವ್ ಮುಖರ್ಜಿಯನ್ನು ಭೇಟಿಯಾಗಿದ್ದು, ಅದಕ್ಕಾಗಿ ನ್ಯಾಯಾಲಯದಲ್ಲಿ ಹೋರಾಡುತ್ತಿರುವುದು ಕೇವಲ ಜಮಾಅತೆ ಇಸ್ಲಾವಿೂ ಒಂದೇ.
ಅಷ್ಟೇ ಅಲ್ಲ
ಮದೀನಕ್ಕೆ ಹೋಗುವಂತೆ ಪ್ರವಾದಿಯವರನ್ನು ನಿರ್ಭಂದಿಸಿದ, ತರತರದ ಹಿಂಸೆ ಕೊಟ್ಟ ಅದೇ ಮಕ್ಕಾದ ಮಂದಿ ಬರಗಾಲಕ್ಕೆ ತುತ್ತಾದಾಗ ಅವರಿಗೆ ಆಹಾರ ಧಾನ್ಯಗಳನ್ನು ಕಳುಹಿಸಿ ಕೊಟ್ಟ ಕರುಣಾಮಯಿ ಪ್ರವಾದಿಯವರ ನಿಲುವನ್ನು ಮಾದರಿಯಾಗಿಟ್ಟುಕೊಂಡು ಜಮಾಅತ್ ಈ ದೇಶದಲ್ಲಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದು ಪ್ರವಾದಿಯನ್ನು ಎಲ್ಲರ ಪ್ರವಾದಿ ಎಂದು ಪರಿಚಯಿಸುವಂತೆ, ಸೇವೆಯನ್ನು ಕೂಡಾ ಎಲ್ಲರ ಸೇವೆ ಎಂದೇ ಪರಿಚಯಿಸುತ್ತದೆ. ವಿಷನ್ 2016 ಅನ್ನುವ 5000 ಕೋಟಿ ರೂಪಾಯಿಯ ದೊಡ್ಡದೊಂದು ಯೋಜನೆಯ ಅಂಗವಾಗಿ ದೇಶದಾದ್ಯಂತ ನಿರ್ಗತಿಕರಿಗೆ ಮನೆ ಕಟ್ಟಿ ಕೊಡುತ್ತಿದೆ. ಶಿಕ್ಷಣಕ್ಕೆ, ಉದ್ಯೋಗಕ್ಕೆ ನೆರವು ನೀಡುತ್ತಿದೆ.ಗುಜರಾತ್ ನ ಗುಲ್ಬರ್ಗ್ ಸೊಸೈಟಿಯಲ್ಲಿ ಮುಸ್ಲಿಮರ ಮನೆಗಳ ಜೊತೆ ಉರಿದು ಭಸ್ಮವಾದ ಮುಸ್ಲಿಮೇತರರ ಮನೆಗಳನ್ನೂ ಮತ್ತೆ ಕಟ್ಟಿಕೊಟ್ಟಿದ್ದರೆ ಅದಕ್ಕೆ ಜಮಾ ಅತೆ ಇಸ್ಲಾಮಿಗೆ ಮಾದರಿಯಾಗಿರುವುದು ಪ್ರವಾದಿ ಮುಹಮ್ಮದ್(ಸ). ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೂತ್ ವಿಂಗ್ 100 ಮನೆಗಳಿಗೆ ವಾರ್ಷಿಕ 13 ಲಕ್ಷ ರೂಪಾಯಿಗಳ ಆಹಾರ ಧಾನ್ಯಗಳನ್ನು ಪ್ರತಿ ತಿಂಗಳೂ ನೀಡುತ್ತಿದೆ. ನಿಜವಾಗಿ, ಮುಸ್ಲಿಮರು ಅಲ್ಪಸಂಖ್ಯಾತರಾಗಿರುವ ದೇಶದಲ್ಲಿ ಶಾಂತಿಯ ವಾತಾವರಣ ಇದ್ದರಷ್ಟೇ ಅವರಿಗೆ ಅಲ್ಲಾಹನ ಧರ್ಮವನ್ನು , ಅವನ ಪ್ರವಾದಿಯನ್ನು ಪರಿಚಯಿಸಲು ಸಾಧ್ಯ ಎಂಬುದು ಜಮಾಅತ್ ನ ನಿಲುವು. ಹುದೈಬಿಯಾ ಒಪ್ಪಂದದ ಸಂದರ್ಭದಲ್ಲಿ ಬಿಸ್ಮಿಲ್ಲಾಹಿರ್ರಹ್ಮಾನಿರ್ರಹೀಮ್ ಮತ್ತು ಮುಹಮ್ಮದು ರ್ರಸೂಲುಲ್ಲಾಹ್ ಎಂಬೆರಡು ಪದಗಳನ್ನು ಒಪ್ಪಂದದ ಪತ್ರದಲ್ಲಿ ಬರೆಯುವುದನ್ನು ವಿರೋಧಿಗಳು ನಿರಾಕರಿಸಿದಾಗ ಪ್ರವಾದಿ ಅವೆರಡೂ ಪದಗಳನ್ನು ಕಾಗದದಿಂದ ಅಳಿಸಿ ಹಾಕಿದ್ದರು. ನಿಜವಾಗಿ ಆ ಎರಡು ಪದಗಳು ಭೂಮಿಯಲ್ಲಿ ನೆಲೆ ನಿಲ್ಲಿಸುವುದಕ್ಕಾಗಿಯೇ ಆಗಮಿಸಿದ್ದ ಪ್ರವಾದಿ, ಶಾಂತಿಯ ವಾತಾವರಣದ ನಿರ್ಮಾಣಕ್ಕಾಗಿ ಒಂದು ಹಂತದ ವರೆಗೆ ಅದರಲ್ಲಿ ರಾಜಿಯಾಗಲು ಮುಂದಾದರು. ಆ ರಾಜಿ ಆ ಬಳಿಕ ಅಭೂತ ಪೂರ್ವ ಬದಲಾವಣೆಗೆ ನಾಂದಿ ಹಾಡಿತು. ಇಸ್ಲಾಮನ್ನು ಅರಿತುಕೊಳ್ಳುವುದಕ್ಕೆ ವಿರೋಧಿಗಳಿಗೆ ಶಾಂತಿಯ ವಾತಾವರಣ ಅವಕಾಶ ಒದಗಿಸಿತು. ಇದನ್ನೇ ಅಲ್ಲಾಹನು ಸ್ಪಷ್ಟವಾದ ವಿಜಯ ಎಂದು ಸಾರಿದ್ದು. (48/1) ಜಮಾಅತೆ ಇಸ್ಲಾಮೀ ಹಿಂದ್ ಇಂಥದ್ದೊಂದು ವಾತಾವರಣದಲ್ಲಿ ಕೆಲಸ ಮಾಡಲು ಬಯಸುತ್ತದೆ. ಇಸ್ಲಾಮನ್ನು ಪರಿಚಯಿಸಲು, ಮದೀನದ ಯಹೂದಿ ಸಮೂಹದಂಥ ಇಸ್ಲಾಮ್ ಪ್ರೇಮಿ ಸಮಾಜ ಇಲ್ಲಿ ಬೆಳೆದು ಬರಲು ಬಿಗುವಿನ ವಾತಾವರಣಕ್ಕಿಂತ ಶಾಂತ ವಾತಾವರಣ ಯೋಗ್ಯ ಎಂದು ಅದು ನಂಬುತ್ತದೆ. ಆ ಮಾದರಿಯನ್ನು ಎದುರಿಟ್ಟುಕೊಂಡೇ ಅದು ಯೋಜನೆಯನ್ನು ರೂಪಿಸುತ್ತದೆ.
ಸ್ವರ್ಗವನ್ನೋ ನರಕವನ್ನೋ ತೀರ್ಮಾನಿಸದ , ಕರ್ಮ ಪತ್ರಗಳಲ್ಲಿ ಅಂಥ ಮಹತ್ತರ ಬದಲಾವಣೆಗೆ ಕಾರಣವಾಗದ ಆಂಶಿಕ ಭಿನ್ನಾಭಿ ಪ್ರಾಯಗಳನ್ನು ತುಸು ಬದಿಗಿಟ್ಟು ನೋಡಿದರೆ, ಜಮಾಅತ್ ಏನೆಂದು, ಅದು ಯಾರನ್ನು ಮಾದರಿಯಾಗಿ ಪ್ರತಿಪಾದಿಸುತ್ತದೆಯೆಂಬುದು ನಿಮಗೂ ಗೊತ್ತಾದೀತು. ತಲೆಯನ್ನೇ ಹಾರಿಸುವ, ಕೈ-ಕಾಲುಗಳನ್ನೇ ಕತ್ತರಿಸುವ ಘೋಷಣೆಗಳು ಮೊಳಗುತ್ತಿರುವ ಸಮಾಜವೊಂದರಲ್ಲಿ ಟೊಪ್ಪಿ, ಕೈ, ಕಾಲುಗಳು ಚರ್ಚೆಯ , ಜಗಳದ ವಸ್ತುವಾಗಬಾರದೆಂಬುದೇ ಜಮಾಅತ್ ನ ನಿಲುವು. ಕಳೆದ 60 ವರ್ಷಗಳಲ್ಲಿ ಅದು ಪ್ರತಿಪಾದಿಸಿದ್ದೂ ಇದನ್ನೇ.
ಮುಂದಿನ ತೀರ್ಮಾನ ನಿಮ್ಮದು..

No comments:

Post a Comment